twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ತೀರ್ಪು: ರಜನಿಕಾಂತ್ ಟ್ವೀಟ್ ಗೆ ಕನ್ನಡಿಗರ ಆಕ್ರೋಶ

    By Harshitha
    |

    Recommended Video

    ಕಾವೇರಿ ತೀರ್ಪು: ರಜನಿಕಾಂತ್ ಟ್ವೀಟ್ ಗೆ ಕನ್ನಡಿಗರ ಆಕ್ರೋಶ | Filmibeat Kannada

    ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಿನ್ನೆ (ಫೆಬ್ರವರಿ 16) ಮಹತ್ವದ ತೀರ್ಪು ನೀಡಿತು. ವಾರ್ಷಿಕ ನೀರು ಹಂಚಿಕೆಯಲ್ಲಿ 14.5 ಟಿ.ಎಂ.ಸಿ ನೀರು ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಲಭಿಸಲಿದೆ. ಇದು ಕರ್ನಾಟಕದ ಪಾಲಿಗೆ ಸಮಾಧಾನಕರವಾಗಿದ್ದರೆ, ತಮಿಳುನಾಡಿನ ಪಾಲಿಗೆ ಅಸಮಾಧಾನಕರವಾಗಿದೆ.

    ತಮ್ಮ ಪಾಲಿನ ನೀರಿನ ಪ್ರಮಾಣ ಕಡಿಮೆ ಆಗಿರುವುದಕ್ಕೆ ತಮಿಳುನಾಡಿನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ತೀರ್ಪಿನ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ಅಕೌಂಟ್ ಮೂಲಕ ತಲೈವಾ ರಜನಿಕಾಂತ್ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. ರಜನಿಕಾಂತ್ ಮಾಡಿರುವ ಟ್ವೀಟ್ ಗೆ ಇದೀಗ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಮುಂದೆ ಓದಿರಿ...

    ರಜನಿಕಾಂತ್ ಮಾಡಿರುವ ಟ್ವೀಟ್ ಏನು.?

    ರಜನಿಕಾಂತ್ ಮಾಡಿರುವ ಟ್ವೀಟ್ ಏನು.?

    ''ತಮಿಳುನಾಡು ರೈತರ ಜೀವನಾಧಾರ ಕಾವೇರಿ ನೀರು ವಿತರಣೆಯಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬಹಳ ನಿರಾಶಾದಾಯಕವಾಗಿದೆ. ತಮಿಳುನಾಡು ಸರಕಾರವು ಪರಿಶೀಲನಾ ಅರ್ಜಿ ಸಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು'' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

    ಕಾವೇರಿ ತೀರ್ಪಿನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ: ಏನಂದ್ರು.? ಕಾವೇರಿ ತೀರ್ಪಿನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ: ಏನಂದ್ರು.?

    ಕನ್ನಡ ಪರ ಸಂಘಟನೆಗಳ ಆಕ್ರೋಶ

    ಕನ್ನಡ ಪರ ಸಂಘಟನೆಗಳ ಆಕ್ರೋಶ

    ಕಾವೇರಿ ತೀರ್ಪಿನ ವಿಚಾರವಾಗಿ ರಜನಿಕಾಂತ್ ಮಾಡಿರುವ ಟ್ವೀಟ್ ಇದೀಗ ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಚನ್ನಪಟ್ಟಣದಲ್ಲಿ ಪ್ರತಿಭಟನೆ

    ಚನ್ನಪಟ್ಟಣದಲ್ಲಿ ಪ್ರತಿಭಟನೆ

    ರಜನಿಕಾಂತ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಪ್ರತಿಕೃತಿ ದಹಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೂಡಲೆ ರಜನಿಕಾಂತ್ ಕನ್ನಡಿಗರ ಕ್ಷಮೆ ಕೇಳಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

    ತಮಿಳುನಾಡಿನ ಪರ ರಜನಿಕಾಂತ್ ಬ್ಯಾಟಿಂಗ್

    ತಮಿಳುನಾಡಿನ ಪರ ರಜನಿಕಾಂತ್ ಬ್ಯಾಟಿಂಗ್

    ಮೂಲತಃ ಮರಾಠಿ ಆಗಿದ್ದರೂ, ರಜನಿಕಾಂತ್ ಹುಟ್ಟಿ ಬೆಳೆದಿದ್ದೆಲ್ಲ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರು ಸಾರಿಗೆ (ಬಿಟಿಎಸ್) ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್, ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡು ತಮಿಳುನಾಡಿಗೆ ಹೋದ್ಮೇಲೆ. ನಾಲ್ಕು ದಶಕಗಳಿಂದ ತಮಿಳುನಾಡಿನ ಜನರ ಪಾಲಿಗೆ ತಲೈವಾ ಆಗಿರುವ ರಜನಿಕಾಂತ್ ಈಗ ತಮಿಳು ರೈತರ ಪರವಾಗಿ ನಿಂತಿದ್ದಾರೆ.

    English summary
    Kannada Activists protests against Rajinikanth, for his disappointing tweet over Cauvery Verdict.
    Saturday, February 17, 2018, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X