ನಟ ಚೇತನ್-ಮೇಘ ಸರಳ ವಿವಾಹ: ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಮದುವೆ ನೋಂದಣಿ

Recommended Video

ವಿನೋಬಾ ಭಾವೆ ಆಶ್ರಮದಲ್ಲಿ ಚೇತನ್ , ಮೇಘಾ ಮದುವೆ | FILMIBEAT KANNADA

'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದ ನಟ ಚೇತನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಪ್ರೀತಿಸಿದ ಯುವತಿ ಮೇಘ ರನ್ನ ನಟ ಚೇತನ್ ವರಿಸಿದ್ದಾರೆ.

ನಟನೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ನಟ ಚೇತನ್ ಮತ್ತು ಮೇಘ ಮದುವೆ ಅದ್ಧೂರಿಯಾಗಿ, ವಿಜೃಂಭಣೆಯಿಂದ ನಡೆದಿಲ್ಲ. ಬದಲಾಗಿ, ನಟ ಚೇತನ್ ಮತ್ತು ಮೇಘ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.

ಅನಾಥಾಶ್ರಮದಲ್ಲಿ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗುವೆ ಎಂದಿದ್ದ ನಟ ಚೇತನ್ ಇಂದು ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಕಾನೂನಾತ್ಮಕವಾಗಿ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ. ಮುಂದೆ ಓದಿರಿ...

ಚೇತನ್-ಮೇಘ ಮದುವೆ

ಚೇತನ್-ಮೇಘ ಮದುವೆ

ಬೆಂಗಳೂರಿನ ಗಾಂಧಿನಗರದ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ವಿಶೇಷ ವಿವಾಹ ಕಾಯ್ದೆಯಡಿ ನಟ ಚೇತನ್ ಮತ್ತು ಮೇಘ ಹೊಸ ಜೀವನ ಆರಂಭಿಸಿದ್ದಾರೆ. ರಿಜಿಸ್ಟರ್ ಮದುವೆ ಮಾಡಿಕೊಂಡ ಬಳಿಕ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ನಟ ಚೇತನ್.

ನಾಳೆ ಮದುವೆ ಸಮಾರಂಭ

ನಾಳೆ ಮದುವೆ ಸಮಾರಂಭ

ಇವತ್ತು ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಆಗಿರುವ ನಟ ಚೇತನ್, ನಾಳೆ (ಫೆಬ್ರವರಿ 2) ಸಂಜೆ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.

ಆಡಂಬರ ಇಲ್ಲ.!

ಆಡಂಬರ ಇಲ್ಲ.!

ನಾಳೆ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲೂ ಚೇತನ್-ಮೇಘ ಮದುವೆ ಸರಳವಾಗಿ ನಡೆಯಲಿದೆ. ವಿವಾಹ ಸಮಾರಂಭದಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.

ಪ್ರೇಮ ವಿವಾಹ

ಪ್ರೇಮ ವಿವಾಹ

ಎರಡು ವರ್ಷಗಳಿಂದ ಚೇತನ್ ಮತ್ತು ಮೇಘ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿದ್ದು, ಇದೀಗ ಚೇತನ್-ಮೇಘ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

More from Filmibeat

English summary
Kannada Actor Aa Dinagalu Chethan got married to Megha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X