ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?
ಕಳೆದ ವರ್ಷ ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಟ ರಿಷಿ, ನಟಿ ಹಿತಾ ಚಂದ್ರಶೇಖರ್, ನಟಿ ನಿತ್ಯ ರಾಮ್ ಸೇರಿದಂತೆ ಬಣ್ಣದ ಲೋಕದ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ವರ್ಷ ಕೂಡ ಚಂದನವನದಲ್ಲಿ ಮಂಗಳ ವಾದ್ಯದ ಸದ್ದು ಜೋರಾಗಿ ಕೇಳಿಬರಲಿದೆ. ವೈವಾಹಿಕ ಬದುಕಿಗೆ ಅಡಿಯಿಡಲು ಕನ್ನಡ ನಟ ಚೇತನ್ ಸಿದ್ಧವಾಗಿದ್ದಾರೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಚೇತನ್ ಇದೇ ವರ್ಷ ವಿವಾಹವಾಗಲಿದ್ದಾರೆ. ಮುಂದೆ ಓದಿರಿ...

ಮದುವೆ ತಯಾರಿಯಲ್ಲಿ ಚೇತನ್
2007ರಲ್ಲಿ ಬಿಡುಗಡೆ ಆದ 'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ನಟ ಚೇತನ್ ಇದೀಗ ಮದುವೆ ತಯಾರಿಯಲ್ಲಿದ್ದಾರೆ. ಮುಂದಿನ ತಿಂಗಳು ಅಂದ್ರೆ ಫೆಬ್ರವರಿಯಲ್ಲಿ ವಿವಾಹ ಆಗಲು ಚೇತನ್ ಮನಸ್ಸು ಮಾಡಿದ್ದಾರಂತೆ.

ಅಸ್ಸಾಂ ಮೂಲದ ಯುವತಿ
ನಟ ಚೇತನ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಅಸ್ಸಾಂ ಮೂಲದ ಯುವತಿಯನ್ನು ಚೇತನ್ ಪ್ರೀತಿಸುತ್ತಿದ್ದಾರೆ. (ಆಕೆಯ ಹೆಸರನ್ನು ಚೇತನ್ ಬಹಿರಂಗ ಪಡಿಸಿಲ್ಲ) ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿದ್ದು ಮುಂದಿನ ತಿಂಗಳು ಮದುವೆ ನಡೆಯಲಿದೆ ಎನ್ನಲಾಗಿದೆ. ದಿನಾಂಕ ಸದ್ಯದಲ್ಲೇ ನಿಗದಿ ಆಗಲಿದೆ.

ಭಾವಿ ಪತ್ನಿಗೆ ಕನ್ನಡ ಕಲಿಸುತ್ತಿರುವ ಚೇತನ್
ಭಾವಿ ಪತ್ನಿ ಅಸ್ಸಾಂ ಮೂಲದವರಾಗಿರೋದ್ರಿಂದ, ಆಕೆಗೆ ಚೇತನ್ ಕನ್ನಡ ಕಲಿಸುತ್ತಿದ್ದಾರೆ. ''ಮದುವೆ ಬಗ್ಗೆ ಪ್ಲಾನಿಂಗ್ ನಡೆಯುತ್ತಿದೆ. ನಾನು ಸರಳವಾಗಿ ವಿವಾಹ ಮಾಡಿಕೊಳ್ಳುತ್ತೇನೆ. ಕನ್ನಡ ನನಗೆ ಬಹಳ ಮುಖ್ಯ. ಯಾರೇ ಇದ್ದರೂ ಕನ್ನಡ ಕಲಿಯುವುದು ತುಂಬಾ ಮುಖ್ಯ. ನಾನು ಮದುವೆ ಆಗುತ್ತಿರುವ ಹುಡುಗಿಗೂ ಕನ್ನಡ ಕಲಿಸುತ್ತಿರುವೆ. ನಾನು ಮದುವೆ ಆಗುತ್ತಿರುವ ಹುಡುಗಿ ಸಿನಿಮಾ ಇಂಡಸ್ಟ್ರಿಯವರಲ್ಲ'' ಎಂದು ನಟ ಚೇತನ್ ಹೇಳಿದ್ದಾರೆ.

ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ವಿವಾಹ
ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್, ಸರಳವಾಗಿ ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ''ಲ್ಯಾವಿಶ್ ಮದುವೆ ನೋಡಿದರೆ ನನಗೆ ದುಃಖ ಆಗುತ್ತೆ. ಲ್ಯಾವಿಶ್ ಆಗಿ ಮದುವೆ ಆದರೆ ಹೆಣ್ಣು ಮಕ್ಕಳ ಕುಟುಂಬದ ಮೇಲೆ ಪ್ರೆಶರ್ ಬೀಳುತ್ತದೆ. ಇದು ಸರಿ ಅಲ್ಲ. ನಾನು ಆಶ್ರಮದ ಮಕ್ಕಳು ಮತ್ತು ಅನಾಥ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಬೇಕು ಅಂತ ಪ್ಲಾನ್ ಇದೆ'' ಎಂದು ಹೇಳಿಕೊಂಡಿದ್ದಾರೆ ನಟ ಚೇತನ್.


Click it and Unblock the Notifications











