»   » NTR ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಅಂಬರೀಶ್ ದಂಪತಿ

NTR ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಅಂಬರೀಶ್ ದಂಪತಿ

Posted By:
Subscribe to Filmibeat Kannada

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಅವರ 94ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ತೆಲುಗು ಅಕಾಡೆಮಿ, ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ದಂಪತಿಗೆ 2016ನೇ ಡಾ.ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಿದೆ.

ಮೇ 28, ನಟ ಕಮ್ ರಾಜಕೀಯ ವ್ಯಕ್ತಿ ಎನ್.ಟಿ ರಾಮರಾವ್ ಅವರ ಜನ್ಮದಿನವಿದ್ದು, ಅವರ ಜಯಂತಿಯನ್ನು ಇಂದು (ಜೂನ್ 2) ಸಂಜೆ 5 ಘಂಟೆಗೆ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಟ ರೆಬೆಲ್ ಸ್ಟಾರ್ ಅಂಬರೀಶ್ ದಂಪತಿಗಳನ್ನು ಸನ್ಮಾನ ಮಾಡಲಿದ್ದಾರೆ.[ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು]

Kannada Actor Ambareesh and Sumalatha Ambareesh gets NTR award

ಪ್ರತೀವರ್ಷ ಕನ್ನಡ ಚಿತ್ರರಂಗದ ಗಣ್ಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಈ ಬಾರಿ ಎನ್.ಟಿ ರಾಮರಾವ್ ಪ್ರಶಸ್ತಿಗೆ ಅಂಬರೀಶ್ ದಂಪತಿಗಳು ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಆರ್.ವಿ ಹರೀಶ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಟಿಟಿಡಿ ಟ್ರಸ್ಟ್ ಬೋರ್ಡ್ ಸಂಸ್ಥಾಪಕ ಅಧ್ಯಕ್ಷ ಡಾ.ಎ ರಾಧಾಕೃಷ್ಣರಾಜು ಅಧ್ಯಕ್ಷತೆ ವಹಿಸಲಿದ್ದಾರೆ.[ಪ್ರೇಮಿಗಳ ದಿನದ ಸ್ಪೆಷಲ್: ಅಂಬಿಗೆ ಸುಮ ಅವರ ಮೇಲೆ ಲವ್ ಆಗಿದ್ಹೇಗೆ?]

ಕೇಂದ್ರ ಸಚಿವೆ ಹಾಗೂ ಎನ್.ಟಿ ರಾಮರಾವ್ ಅವರ ಮಗಳಾದ ಡಿ.ಪುರಂದೇಶ್ವರಿ ಅವರು ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಕಾನೂನು ಸಚಿವ ಡಿ.ವಿ ಸದಾನಂದ ಗೌಡ, ಸಾರಿಗೆ ಸಚಿವ ಆರ್.ರಾಮಲಿಂಗಾ ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

-
-
-
-
-
English summary
Karnataka Telugu Saahitya Academy has been honoring prominent personalities with NTR Memorial Award. This year The Jury has jointly picked up Sandalwood Rebel Star Ambareesh and his wife Sumalatha for the prestigious award. On June 2nd, Actor Ambareesh and Sumalatha will be felicitated and presented with NTR Memorial Award at the Ravindra Kalakshethra, J.C Road, Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada