For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ಸ್

  By Suneetha
  |

  'ಮಂಡ್ಯದ ಗಂಡು', 'ಕಲಿಯುಗದ ಕರ್ಣ' ಅಂತೆಲ್ಲಾ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮೇ 29 ರಂದು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

  ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ ಅಂಬರೀಶ್ ಅವರು ಇಡೀ ಸ್ಯಾಂಡಲ್ ವುಡ್ ಸೇರಿದಂತೆ ಪರಭಾಷೆಯ ಖಾಸ ದೋಸ್ತ್ ಗಳಿಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಭರ್ಜರಿ ಪಾರ್ಟಿ ನೀಡಿದ್ದಾರೆ.[ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು]

  ಈ ಬರ್ತ್ ಡೇ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟ-ನಿರ್ದೇಶಕರಿಂದ ಹಿಡಿದು ಕಿರಿಯ ನಟ-ನಟಿ ನಿರ್ದೇಶಕರು ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಎಲ್ಲರೂ ಹಾಜರಿದ್ದರು.

  ಪವರ್ ಸ್ಟಾರ್ ಪುನೀತ್ ರಾಜ್ ಕಮಾರ್ ದಂಪತಿ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ರಮೇಶ್ ಅರವಿಂದ್ ದಂಪತಿ, ಪ್ರಜ್ವಲ್ ದೇವರಾಜ್ ದಂಪತಿ, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕ ಉಪೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್ ದಂಪತಿ, ಅರ್ಜುನ್ ಸರ್ಜಾ, ತೆಲುಗು ನಟ ವಿಷ್ಣು ಮಂಚು, ನಟ ಜಗಪತಿ ಬಾಬು, ನಿರ್ದೇಶಕ ಎಸ್ ನಾರಾಯಣ್ ದಂಪತಿ ಸೇರಿದಂತೆ ಹಲವರು ಭಾಗವಹಿಸಿದ್ದರು.[ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!]

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ 'ದೊಡ್ಮನೆ ಹುಡುಗ' ಚಿತ್ರದ ಟೀಸರ್ ಬಿಡುಗಡೆ ಮಾಡಿ ಅದನ್ನು ಅಂಬರೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ನೀಡಲಾಯಿತು.

  ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯಾತೀ ಗಣ್ಯರನ್ನು ಅಂಬರೀಶ್ ಸುಮಲತಾ ಅಂಬರೀಶ್ ದಂಪತಿ ಮತ್ತು ಮಗ ಅಭಿಷೇಕ್ ಗೌಡ ಅವರು ಆದರದಿಂದ ಬರಮಾಡಿಕೊಂಡರು. ಒಟ್ನಲ್ಲಿ ಗ್ರ್ಯಾಂಡ್ ಬರ್ತ್ ಡೇ ಪಾರ್ಟಿಯಲ್ಲಿ ಎಲ್ಲರೂ ಎಂಜಾಯ್ ಮಾಡಿ ಖುಷಿಪಟ್ಟರು.[NTR ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಅಂಬರೀಶ್ ದಂಪತಿ]

  ಬರ್ತ್ ಡೇ ಪಾರ್ಟಿಯ ಫೋಟೋ ಆಲ್ಬಂ ನೋಡಲು ಕೆಳಗಿನ ಫೋಟೋ ಗ್ಯಾಲರಿಯತ್ತ ಕಣ್ಣಾಡಿಸಿ....

  English summary
  In Pics: Kannada Actor Ambareesh celebrates his 64th Birthday On May 29, 2016 at Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X