For Quick Alerts
  ALLOW NOTIFICATIONS  
  For Daily Alerts

  ಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನ

  |

  'ರೆಬೆಲ್ ಸ್ಟಾರ್' ಅಂಬರೀಶ್ ರನ್ನ ಕಳೆದುಕೊಂಡು ಅತ್ತ ಇಡೀ ಕರುನಾಡು ಕಣ್ಣೀರಿಡುತ್ತಿದ್ದರೆ, ಇತ್ತ ಅಂಬಿ ಮನೆಯಲ್ಲಿ 'ಕನ್ವರ್ ಲಾಲ್'ನ ಮೂಕ ಆಕ್ರಂದನ ಮುಗಿಲು ಮುಟ್ಟಿದೆ.

  'ಮಂಡ್ಯದ ಗಂಡು' ಅಂಬರೀಶ್ ಪ್ರಾಣಿ ಪ್ರಿಯ, ಶ್ವಾನ ಪ್ರೇಮಿ. ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ನೋಡುವ ಅಂಬರೀಶ್ ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಒಂದರ ಹೆಸರು 'ಕನ್ವರ್ ಲಾಲ್' ಆಗಿದ್ದರೆ, ಇನ್ನೊಂದರ ಹೆಸರು 'ಬುಲ್ ಬುಲ್'.

  'ನಮ್ಮೂರ ಹಮ್ಮೀರ' ಅಂಬರೀಶ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು 1972 ರಲ್ಲಿ ತೆರೆಕಂಡ 'ನಾಗರಹಾವು' ಮತ್ತು 1981 ರಲ್ಲಿ ತೆರೆಕಂಡ 'ಅಂತ' ಚಿತ್ರಗಳು. ಇದೇ ಚಿತ್ರಗಳ ಫೇಮಸ್ ಡೈಲಾಗ್ 'ಬುಲ್ ಬುಲ್ ಮಾತಾಡಕ್ಕಿಲ್ವಾ...' ಮತ್ತು 'ಕುತ್ತೇ...ಕನ್ವರ್ ನಹೀ ಕನ್ವರ್ ಲಾಲ್ ಬೋಲೋ'. ಮುಂದೆ ಓದಿರಿ...

  ನಾಯಿಮರಿಗಳಿಗೆ ಇಷ್ಟದ ಹೆಸರು

  ನಾಯಿಮರಿಗಳಿಗೆ ಇಷ್ಟದ ಹೆಸರು

  'ಕನ್ವರ್ ಲಾಲ್' ಮತ್ತು 'ಬುಲ್ ಬುಲ್'... ಈ ಎರಡು ಡೈಲಾಗ್ ಗಳನ್ನು ಪ್ರತಿದಿನ ನೆನಪಿಸಿಕೊಳ್ಳಲು ತಮ್ಮ ಪ್ರೀತಿಯ ಶ್ವಾನಗಳಿಗೆ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ಅಂತ ಅಂಬರೀಶ್ ನಾಮಕರಣ ಮಾಡಿದ್ದರು.

  ಅಂಬರೀಶ್ ಮನೆಯ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನೋಡಿದ್ದೀರಾ?

  ಶ್ವಾನಗಳ ಜೊತೆಗೆ ಪ್ರತಿ ದಿನ ಆಟ

  ಶ್ವಾನಗಳ ಜೊತೆಗೆ ಪ್ರತಿ ದಿನ ಆಟ

  ಪುಟ್ಟ ಮರಿಯಾಗಿದ್ದಾಗಿನಿಂದಲೂ ಸೇಂಟ್ ಬರ್ನಾಡ್ ತಳಿಯ ಶ್ವಾನ 'ಕನ್ವರ್ ಲಾಲ್' ಅಂಬರೀಶ್ ಮನೆಯಲ್ಲಿ ಸ್ಥಾನ ಪಡೆದಿದೆ. ಪ್ರತಿ ದಿನ 'ಕನ್ವರ್ ಲಾಲ್' ಜೊತೆಗೆ ಅಂಬರೀಶ್ ಕೆಲ ಕಾಲ ಸಮಯ ಕಳೆಯುತ್ತಿದ್ದರು. 'ಕನ್ವರ್ ಲಾಲ್'ಗಾಗಿ 'ಬುಲ್ ಬುಲ್'ನ ಜೊತೆ ಮಾಡಿದ್ದರು ಅಂಬರೀಶ್.

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  ಅನಾಥವಾದ 'ಕನ್ವರ್ ಲಾಲ್'

  ಅನಾಥವಾದ 'ಕನ್ವರ್ ಲಾಲ್'

  ಇಷ್ಟು ದಿನ ಪ್ರೀತಿಯ ಯಜಮಾನನ ಆರೈಕೆಯಲ್ಲಿ ಬೆಳೆದ 'ಕನ್ವರ್ ಲಾಲ್' ಇಂದು ಅನಾಥವಾಗಿದೆ. ತನ್ನ ದೊರೆ ಬಾರದ ಲೋಕಕ್ಕೆ ತೆರಳಿರುವುದು 'ಕನ್ವರ್ ಲಾಲ್'ಗೂ ಗೊತ್ತಾಗಿದೆ. ಹೀಗಾಗಿ, ಒಂಟಿಯಾಗಿ ಕೂತು 'ಕನ್ವರ್ ಲಾಲ್' ರೋದಿಸುತ್ತಿದ್ದಾನೆ.

  ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

  ಸಮಾಧಾನ ಮಾಡುವುದು ಹೇಗೆ.?

  ಸಮಾಧಾನ ಮಾಡುವುದು ಹೇಗೆ.?

  ಒಡೆಯನನ್ನು ಕಾಣದ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ಮೌನ ರೋದನ ಮನಕಲಕುವಂತಿದೆ. ಮೂಕ ಪ್ರಾಣಿಗಳಿಗೆ ಸಮಾಧಾನ ಮಾಡುವುದಾದರೂ ಹೇಗೆ.?

  ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

  English summary
  Kannada Actor Ambareesh passes away: Pet Kanvarlal and Bulbul mourns his death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X