For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಲಸಿಕೆ ಪಡೆದ ಕನ್ನಡದ ಮೊದಲ ನಟ ಅನಂತ್ ನಾಗ್

  |

  ಭಾರತದಲ್ಲಿ ಕೊರೊನಾ ಎರಡನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಅನೇಕರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಕೋವಿಡ್ ಲಸಿಕೆ ಹಾಕಿಸಿಕೊಂಡು ಎಲ್ಲರೂ ಲಸಿಕೆ ಪಡೆಯಿರಿ ಎಂದು ಹೇಳಿದ್ದರು. ಭಾರತದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಮೊದಲ ಸ್ಟಾರ್ ಕಲಾವಿದ ಕಮಲ್ ಹಾಸನ್.

  ಇದೀಗ ಕನ್ನಡದ ಸ್ಟಾರ್ ಕಲಾವಿದರೊಬ್ಬರು ಲಸಿಕೆ ಹಾಕಿಸಿಕೊಂಡಿದ್ದಾರೆ. ಹಿರಿಯ ನಟ ಅನಂತ್ ನಾಗ್ ಕೋವಿಡ್ ಲಸಿಕೆ ಪಡೆದ್ದಾರೆ. ಈ ಮೂಲಕ ಕನ್ನಡದ ಮೊದಲ ನಟ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಲಿಕೆ ಪಡೆದ ಅನಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಕೋವಿಡ್ ಲಸಿಕೆ ಪಡೆದು ನಟ ಕಮಲ್ ಹಾಸನ್ ಹೇಳಿದ್ದೇನು?ಕೋವಿಡ್ ಲಸಿಕೆ ಪಡೆದು ನಟ ಕಮಲ್ ಹಾಸನ್ ಹೇಳಿದ್ದೇನು?

  ನಟ ಅನಂತ್ ನಾಗ್ ಕನ್ನಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಬಹುನಿರೀಕ್ಷೆಯ ಗಾಳಿಪಟ ಸಿನಿಮಾದಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರೆ.

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada

  ಇನ್ನು ಇತ್ತೀಚಿಗಷ್ಟೆ ಕೊರೊನಾ ಲಸಿಕೆ ಪಡೆದ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಟ್ವೀಟ್ ಮಾಡಿ, 'ಶ್ರೀ ರಾಮಚಂದ್ರ ಆಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಪಡೆದೆ. ನಿಮ್ಮ ಕಾಳಜಿಗೆ ಮಾತ್ರವಲ್ಲದೆ, ಸಮಾಜದ ಬಗ್ಗೆ ಕಾಳಜಿ ಇರುವವರು ಸಹ ಲಸಿಕೆ ಪಡೆಯಿರಿ. ಈಗ ರೋಗದ ವಿರುದ್ಧ ಹೋರಾಡುವ ಲಸಿಕೆ ಪಡೆಯೋಣ. ಮುಂದಿನ ತಿಂಗಳು ಬ್ರಷ್ಟಾಚಾರದ ವಿರುದ್ಧ ಹೋರಾಡುವ ಲಸಿಕೆಗೆ ಸಿದ್ಧರಾಗಿ' ಎಂದಿದ್ದರು.

  English summary
  Kannada Actor Ananth Nag takes corona vaccination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X