ಹಿರಿಯ ನಟ ಹಾಗೂ ಗೀತರಚನೆಕಾರ ಗೋಟೂರಿ ನಿಧನ!

By Naveen

Recommended Video

ಬಾರದ ಲೋಕಕ್ಕೆ ತೆರಳಿದ ಹಿರಯ ನಟ, ಗೀತ ರಚನೆಕಾರ..! | Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಿಧಿಶರಾಗಿದ್ದಾರೆ. ನಿನ್ನೆ ಸಂಜೆ ಯಲಹಂಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನೇಕ ವರ್ಷಗಳು ಚಿತ್ರರಂಗದಲ್ಲಿ ಇದ್ದ ಇವರು ಹೆಚ್ಚಾಗಿ ನಟ ಕಾಶೀನಾಥ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಉಪೇಂದ್ರ ನಿರ್ದೇಶನದ 'ಶ್' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗೋಟೂರಿ ನಟಿಸಿದ್ದರು.

ಗೋಟೂರಿ ಒಬ್ಬ ನಟನಿಗಿಂತ ಒಬ್ಬ ಬರಹಗಾರನಾಗಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ವಿಷ್ಣುವರ್ಧನ್ ಹಾಗೂ ಸೌಂದರ್ಯ ನಟನೆಯ ದಾಖಲೆ ಸೃಷ್ಟಿಸಿದ 'ಆಪ್ತಮಿತ್ರ' ಚಿತ್ರದ ರಾ.ರಾ.ಹಾಡಿನ ರಚನೆಕಾರ ಕೂಡ ಇವರೇ ಆಗಿದ್ದಾರೆ.

Kannada actor and lyrics writer Goturi passes away

ಜೊತೆಗೆ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ವಿ ಮನೋಹರ್ ಅವರ ಸಂಗೀತದಲ್ಲಿ ಹಾಡುಗಳನ್ನು ಬರೆದಿದ್ದಾರೆ. ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಬಂದ 'ಆದಿಚುಂಚನಗಿರಿ ಚಿತ್ರಕ್ಕೆ ಕಥೆ ರಚಿಸಿದ್ದರು. 'ಜಯ ಜನಾರ್ಥನ ಕೃಷ್ಣ...'. ಎಂಬ ಜನಪ್ರಿಯ ಗೀತೆಯನ್ನು ಇವರೇ ಬರೆದಿದ್ದಾರೆ.

ವಯೋಸಹಜ ಕಾಯಿಲೆಯಿಂದ ನಿನ್ನೆ ಸಂಜೆ ಗೋಟೂರಿ ವಿಧಿವಶರಾಗಿದ್ದಾರೆ. ಯಲಹಂಕದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ.

More from Filmibeat

English summary
Kannada actor and lyrics writer Goturi passes away Yesterday in Yelahanka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X