ಧಾರಾವಾಹಿ ಪ್ರಪಂಚಕ್ಕೆ ರೀ ಎಂಟ್ರಿ ಕೊಟ್ಟ ವಿಷ್ಣು ದಾದನ ಅಳಿಯ ಅನಿರುದ್ಧ್
ಸ್ಯಾಂಡಲ್ ವುಡ್ ನ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಪರೂಪಕ್ಕೊಂದು ಸಿನಿಮಾಗಳನ್ನು ಮಾಡುತ್ತಿದ್ದ ಅನಿರುದ್ಧ ಇನ್ಮುಂದೆ ಪ್ರತೀ ದಿನ ಕಿರುತೆರೆ ಅಭಿಮಾನಿಗಳ ಮನೆಗೆ ಬರಲಿದ್ದಾರೆ. ಹೌದು, ಹೊಸ ಧಾರಾವಾಹಿ ಮೂಲಕ ಅನಿರುದ್ಧ ಕಿರುತೆರೆ ಅಭಿಮಾನಿಗಳ ಮನಸ್ಸಿನಲ್ಲಿ ಬೇರುರಲಿದ್ದಾರೆ.
ಅನಿರುದ್ಧ ಕೊನೆಯದಾಗಿ ರಾಜ ಸಿಂಹ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2018ರಲ್ಲಿ ತೆರೆ ಕಂಡಿದ್ದ ರಾಜ ಸಿಂಹ ಚಿತ್ರದ ನಂತರ ಅನಿರುದ್ಧ ಈಗ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಂದ್ಹಾಗೆ ಅನಿರುದ್ಧ 'ಜೊತೆ ಜೊತೆಯಲಿ' ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಅಂದ್ಹಾಗೆ ಜೊತೆ ಜೊತೆಯಲಿ ಧಾರಾವಾಹಿ ಈ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಆಶಿಕಾ ಚಂದ್ರಪ್ಪ ಮತ್ತು ವಿರಾಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ ಅದೆ ಹೆಸರಿನಲ್ಲಿ ಆದ್ರೆ ಹೊಸ ಕಥೆಯೊಂದಿಗೆ ಮತ್ತೆ ಬರ್ತಿದೆ ಜೊತೆ ಜೊತೆಯಲಿ.

ಈ ಧಾರಾವಾಹಿಯಲ್ಲಿ ಅನಿರುದ್ಧ 45 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೊಡ್ಡ ಉದ್ಯಮಿಯಾಗಿರುವ ಅನಿರುದ್ಧಗೆ ಇನ್ನು ಮದುವೆ ಆಗಿರುವುದಿಲ್ಲ. ಇತ್ತ ನಾಯಕಿಗೆ 20 ವರ್ಷ. ಇಬ್ಬರ ನಡುವಿನ ಪ್ರೇಮ ಕಥೆಯೆ ಜೊತೆ ಜೊತೆಯಲಿ. ಜನರೇಶನ್ ಗ್ಯಾಪ್ ಇರುವವರ ನಡುವಿನ ಪ್ರೇಮ ಕತೆ ಹೇಗಿರಲಿದೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ.


Click it and Unblock the Notifications











