'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ನಿರ್ಮಿಸಿದ ಅನಿರುದ್ಧ್ !

By ಶಶಿಕರ ಪಾತೂರ್

ಅನಿರುದ್ಧ ಅವರ ಹೆಸರಲ್ಲಿ 4 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ನಿರ್ಮಾಣವಾಗಿವೆ. ಇತ್ತೀಚೆಗೆ ಸಿನಿಮಾಗಳಲ್ಲಿ ಅಪರೂಪವಾಗಿರುವ ಇವರು ತಮ್ಮ ಸಂಸ್ಥೆಯ ಮೂಲಕ ಸ್ವಪ್ರಯತ್ನದಿಂದ ಈ ದಾಖಲೆಗಳನ್ನು ಮಾಡಿದ್ದಾರೆ.

ಅನಿರುದ್ಧ ಅವರ ದಾಖಲೆಗಳ ಪಟ್ಟಿ ಹೀಗಿವೆ

ಒಂದೇ ದಿನ ಅತಿ ಹೆಚ್ಚು ಅಂದರೆ 6 ಕಿರುಚಿತ್ರಗಳ ಬಿಡುಗಡೆಯನ್ನು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ ಮಾಡಲಾಗಿತ್ತು. ಅವುಗಳಿಗೆ ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ಈ ದಾಖಲೆಯನ್ನ ನಿರ್ಮಿಸಿದ್ದಾರೆ.

ಆರು ಕಿರುಚಿತ್ರಗಳು ಕೂಡ ಸಮಾಜದ ಸಮಸ್ಯೆಗಳನ್ನು ಕುರಿತಾಗಿ ಇರುವುದಕ್ಕಾಗಿ ಒಂದು ದಾಖಲೆ, ಅವುಗಳಿಗೆ ಬರಹಗಾರ ಮತ್ತು ನಿರ್ದೇಶಕರಾಗಿದ್ದು ಎರಡನೇ ದಾಖಲೆ ಹಾಗೂ ಅವುಗಳಲ್ಲಿ ಯಾವುದೇ ಸಂಭಾಷಣೆ ಇಲ್ಲದೆ ಇರುವುದು ಮತ್ತೊಂದು ದಾಖಲೆ ಆದರೆ ಎಲ್ಲ ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿರುವುದಕ್ಕೆ ನಾಲ್ಕನೆಯ ದಾಖಲೆ ಮಾಡಿದ್ದಾರೆ.

kannada actor anirudh made indian book of records

ದಾಖಲೆಗಾಗಿ ಸಂತಸವಿದೆ

"ಕನ್ನಡಿಗನಾಗಿ ಹಾಗು ಕರ್ನಾಟಕ ಚಲನಚಿತ್ರ ಕಲಾವಿದನಾಗಿ ಇಂಥದೊಂದು ದಾಖಲೆ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಈ ಎಲ್ಲಾ ದಾಖಲೆಗಳು ಆಗಿರೋದಕ್ಕೆ ಅಪ್ಪಾರವರಾದ ಸಾಹಸ ಸಿಂಹ ಡಾll ವಿಷ್ಣುವರ್ಧನ ರವರ ಆಶೀರ್ವಾದ, ಕೀರ್ತಿ ಇನೋವೇಶನ್ಸ್ ತಂಡದ ಬೆಂಬಲ, ನನ್ನ ಕುಟುಂಬದ ನನ್ನ ಸಾಮರ್ಥ್ಯದ ಮೇಲಿರೋ ಭರವಸೆ ಮತ್ತು ತಮ್ಮೆಲ್ಲರ ಹಾರೈಕೆ ಕಾರಣ.." ಎಂದು ಕೃತಜ್ಞತೆ ಸೂಚಿಸಿದ್ದಾರೆ ಅನಿರುದ್ಧ್.

More from Filmibeat

English summary
Kannada actor Anirudh made indian book of records.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X