ನಿರೂಪಕನಾದ ಸಾಹಸಸಿಂಹನ ಅಳಿಯ ಅನಿರುದ್ಧ್
ನಟ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಈಗ ನಿರೂಪಕನಾಗಿದ್ದಾರೆ. ಹಾಗಂತ ಅವರು ರಿಯಲ್ ಆಗಿ ಯಾವುದೇ ಚಾನಲ್ ನಲ್ಲಿ ಅಂಕರ್ ಆಗಿ ಕೆಲಸಕ್ಕೆ ಸೇರಿಲ್ಲ. ಇದೆಲ್ಲ ಅವರ ಹೊಸ ಸಿನಿಮಾಗಾಗಿ ಮಾತ್ರ.
ಅನಿರುದ್ಧ್ ಈಗ 'ಅಭಯಹಸ್ತ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಟಿವಿ ಅಂಕರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿಂಪಲ್ ಆಗಿ ನಗುಮುಖದಲ್ಲಿ ನಿರೂಪಣೆ ಮಾಡುತ್ತಿದ್ದಾರೆ ಅನಿರುದ್ಧ್. ಇನ್ನು ಚಿತ್ರೀಕರಣದ ಕೆಲವು ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ. ರಾಜಕೀಯ ಕುರಿತು ಟಿವಿಯಲ್ಲಿ ನಡೆಯುವ ದೃಶ್ಯವನ್ನು ಸದ್ಯ ಚಿತ್ರೀಕರಣ ಮಾಡಲಾಗುತ್ತಿದೆ.

ಅಂದಹಾಗೆ, ಈ ಚಿತ್ರವನ್ನು ನವೀನ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ರಾಜೇಂದ್ರ ಸೂರಿ ಪ್ರೋಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. 'ರಾಜಸಿಂಹ' ಬಳಿಕ ಮತ್ತೆ ಅನಿರುದ್ಧ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸತೀಶ್ ಮೆಹ್ತ ಹಾಗೂ ನವೀನ್ ಬಂಡವಾಳ ಹಾಕಿದ್ದಾರೆ.
English summary
Kannada actor Anirudh playing tv anchor role in 'Abhayahasta' kannada movie.


Click it and Unblock the Notifications