ನಟ ದರ್ಶನ್ ವಿಕೃತಿಯ ಪರಮಾವಧಿ; ಮತ್ತೊಂದು ಕೇಸ್ ದಾಖಲು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತ 13 ಜನ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಪ್ರಕರಣಗಳಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿತ್ತು. ಇದೀಗ 10 ವರ್ಷಗಳ ಹಿಂದಿನ ಮತ್ತೊಂದು ಘಟನೆ ಚರ್ಚೆ ಬಂದಿದೆ.
ನಟ ದರ್ಶನ್ ವಿಕೃತಿಯ ಪರಮಾವಧಿ ಎಂಥದ್ದು ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಟೀ.ನರಸೀಪುರದ ದರ್ಶನ್ ಒಡೆತನದ ಫಾರ್ಮ್ ಹೌಸ್ನಲ್ಲಿ 10 ವರ್ಷಗಳ ಹಿಂದೆ ಸಿಬ್ಬಂದಿ ಮಹೇಶ್ ಎಂಬುವವರು ಗಾಯಗೊಂಡಿದ್ದರು. ಆದರೆ ಆತನಿಗೆ ಚಿಕಿತ್ಸೆ ಕೊಡಿಸದೇ ಪರಿಹಾರ ಕೇಳಲು ಹೋದ ಮಹೇಶನ ಕುಟುಂಬಸ್ಥರ ಮೇಲೆ ನಾಯಿಗಳನ್ನು ಛೂ ಬಿಟ್ಟು ದರ್ಶನ್ ವಿಕೃತಿ ಮೆರೆದಿರುವ ವಿಚಾರ ಬಯಲಾಗಿದೆ.

ಇದೀಗ ಮಹೇಶ್ ಕುಟುಂಬ ನ್ಯಾಯ ಕೇಳಿ ಮುಂದೆ ಬಂದಿದೆ. ಈ ಬಗ್ಗೆ ಟಿವಿ9 ಮಾಧ್ಯಮಕ್ಕೆ ಮಹೇಶ್ ಸೇರಿದಂತೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ. ಒಂದಷ್ಟು ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ 2014ರಲ್ಲಿ ಮಹೇಶ್ ಎಂಬುವವರು ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಚಾಮರಾಜನಗರ ಜಿಲ್ಲೆಯ ನಿಜಲಿಂಗಪುರದ ಮೂಲದವರು ಮಹೇಶ್.
ಒಮ್ಮೆ ದರ್ಶನ್ ಸಾಕಿರುವ ಎತ್ತು ಮಹೇಶ್ ತಲೆಗೆ ತಿವಿದಿತ್ತು. ಎತ್ತಿನ ಕೊಂಬು ಮಹೇಶ್ ಕಣ್ಣಿಗೆ ಚುಚ್ಚಿ ತಲೆಯಿಂದ ಹೊರಬಂದಿತ್ತು. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದ ದರ್ಶನ್ ಆಪ್ತರು ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಹೋಗಿದ್ದರು. ಘಟನೆಯಲ್ಲಿ ಮಹೇಶ್ ಕಣ್ಣು ಕಳೆದುಕೊಂಡ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾದೆ. ಪರಿಹಾರ ಕೇಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೋದಾಗ ಮಹೇಶ್ ತಾಯಿಯ ಮೇಲೆ ನಾಯಿಗಳನ್ನು ಛೂಬಿಟ್ಟು ಓಡಿಸಿದ್ದರು ಎಂದು ವರದಿಯಾಗಿದೆ.
ಒಮ್ಮೆ ಮಹೇಶ್ ಕುಟುಂಬಸ್ಥರನ್ನು ಮೈಸೂರಿನ ಹೋಟೆಲ್‌ಗೆ ಕರೆಸಿ ಬೆದರಿಕೆ ಹಾಕಿದ್ದರು. ವಿಷಯ ಯಾರಿಗಾದರೂ ಹೇಳಿದರೆ ಅಷ್ಟೇ ಎಂದು ದರ್ಶನ್ ಹಾಗೂ ಗ್ಯಾಂಗ್ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಬಡ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿದೆ. ಸದ್ಯ ಪೊಲೀಸರು ಬಂಧಿದಿ ತನಿಖೆ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ ಆತನ ಕರಾಳ ಮುಖದ ಅನಾವರಣವಾಗುತ್ತಿದೆ. ಒಂದೊಂದೇ ಪ್ರಕರಣಗಳು ಹೊರ ಬರುತ್ತಿದೆ.


Click it and Unblock the Notifications











