ರಾಜಕೀಯ ರಂಗಕ್ಕೆ ಹಾಸ್ಯ ನಟ ಬುಲೆಟ್ ಪ್ರಕಾಶ್
ರಾಜಕೀಯಕ್ಕೂ ಚಿತ್ರರಂಗಕ್ಕೂ ಒಂಥರಾ ಬಿಡಿಸಲಾರದ ನಂಟು. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಹಾರುವುದು ಸಾಮಾನ್ಯ. ರೆಬೆಲ್ ಸ್ಟಾರ್ ಅಂಬರೀಶ್, ನಟಿ ಶೃತಿ, ತಾರಾ, ಜಗ್ಗೇಶ್, ರಮ್ಯಾ ಸೇರಿದಂತೆ ಸಾಲು ಸಾಲು ತಾರೆಯರು ರಾಜಕೀಯ ರಂಗ ಪ್ರವೇಶ ಮಾಡಿ ಜನಮನ್ನಣೆ ಗಳಿಸಿದ್ದಾರೆ.
ಈಗ ಇದೇ ಸಾಲಿಗೆ ಸೇರಲು ಸಿದ್ದವಾಗಿರುವುದು ಹಾಸ್ಯ ನಟ ಬುಲೆಟ್ ಪ್ರಕಾಶ್. ಹೌದು, ಕಾಮಿಡಿ ಖಿಲಾಡಿ ಬುಲೆಟ್ ಪ್ರಕಾಶ್ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ ವೈಖರಿ ಕಂಡು, ಪ್ರೇರಣೆಗೊಂಡು ಬಿಜೆಪಿ ಪಕ್ಷ ಸೇರಲು ಬುಲೆಟ್ ಪ್ರಕಾಶ್ ನಿರ್ಧರಿಸಿದ್ದಾರೆ. [ಬುಲೆಟ್ ಪ್ರಕಾಶ್ ಗೆ ಮಾಟ-ಮಂತ್ರ ಮಾಡಿಸಿದವರು ಯಾರು?]

ಬರುವ ಗುರುವಾರ (ಜೂನ್ 18) ಬಿಜೆಪಿ ರಾಜ್ಯ ಘಟಕದ ಕಛೇರಿಯಲ್ಲಿ ಆರ್.ಅಶೋಕ್ ಸಮ್ಮುಖದಲ್ಲಿ ಬುಲೆಟ್ ಪ್ರಕಾಶ್ ಕಮಲ ಪಾಳಯ ಸೇರಲಿದ್ದಾರೆ. ಅಷ್ಟಕ್ಕೂ, ಬುಲೆಟ್ ಪ್ರಕಾಶ್ ತಾಯಿ ಕೂಡ ಬಿಜೆಪಿ ಕಾರ್ಯಕರ್ತರಾಗಿದ್ದವರು. ಹೀಗಾಗಿ ಬಹಳ ಹಿಂದಿನಿಂದಲೂ ಬುಲೆಟ್ ಪ್ರಕಾಶ್ ಗೆ ಬಿಜೆಪಿ ಪಕ್ಷದ ಮೇಲೆ ನಿಷ್ಠೆ ಇದೆ. [ಸಾವನ್ನ ಗೆದ್ದು ಬಂದು ಗಳಗಳನೆ ಅತ್ತ ಬುಲೆಟ್ ಪ್ರಕಾಶ್]
ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿರುವುದಾಗಿ ತಿಳಿಸಿರುವ ಬುಲೆಟ್ ಪ್ರಕಾಶ್ ಗೆ, ಯಾವುದೇ ಹುದ್ದೆಯ ಆಕಾಂಕ್ಷೆ ಇಲ್ವಂತೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ, ಸಮರ್ಥವಾಗಿ ನಿಭಾಯಿಸುವ ಬಗ್ಗೆ ಬುಲೆಟ್ ಪ್ರಕಾಶ್ ಭರವಸೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











