ಧನ್ವೀರ್ ಗೆ 'ಬಂಪರ್' ಗಿಫ್ಟ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಬಜಾರ್' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಧನ್ವೀರ್ ಈಗ ಚಂದನವನದ ಬರವಸೆಯ ನಟನಾಗಿದ್ದಾರೆ. ಸಿನಿ 'ಬಜಾರ್'ಗೆ ಬಂದ ನಟನಿಗೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ 'ಬಂಪರ್' ಗಿಫ್ಟ್ ಸಿಕ್ಕಿದೆ.

'ಬಜಾರ್' ನಾಯಕನಿಗೆ ದಚ್ಚು ನೀಡಿದ ಉಡುಗೊರೆ ಏನು ಅಂತ ಅಚ್ಚರಿ ಆಗುತ್ತಿದೆಯಾ? ಧನ್ವೀರ್ ಅಭಿನಯದ ಎರಡನೆ ಸಿನಿಮಾ ಬಂಪರ್ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಇಂದು ರಿಲೀಸ್ ಮಾಡಿದ್ದಾರೆ. ದರ್ಶನ್ ಫಸ್ಟ್ ಲುಕ್ ರಿಲೀಸ್ ಮಾಡಿರುವುದೆ ಚಿತ್ರತಂಡಕ್ಕೆ ಸಿಕ್ಕ ಬಂಪರ್ ಗಿಫ್ಟ್.

Recommended Video

ಡಿ ಬಾಸ್ ಜೊತೆ ನಟಿಸುವ ಖುಷಿಯಲ್ಲಿ ಭದ್ರಾವತಿ ಹುಡುಗಿ ಮಾಡಿದ್ದೇನು ಗೊತ್ತಾ..? | Robert | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ಬಂಪರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ವಿಶೇಷ ಅಂದ್ರೆ ಧನ್ವೀರ್ ಅಭಿನಯದ ಮೊದಲ ಸಿನಿಮಾ ಬಜಾರ್ ಚಿತ್ರಕ್ಕೂ ದರ್ಶನ್ ಸಾಥ್ ನೀಡಿದ್ದರು. ಈಗ ಎರಡನೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಬಂಪರ್ ಚಿತ್ರತಂಡದ ಬೆನ್ನಿಗೆ ನಿಂತಿದೆ.

Kannada Actor Challenging Star Darshan Released Dhanveer Starrer Bumper Movie First Look

ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿಯೆ ಬಂಪರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಈ ಸಮಯದಲ್ಲಿ ನಿರ್ದೇಶಕ ತರುಣ್ ಸುಧೀರ್ ಕೂಡ ಹಾಜರಿದ್ದರು.

'ಬಂಪರ್' ಹರಿಸಂತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಲಾಂಚ್ ಮಾಡಿರುವ ಚಿತ್ರತಂಡ ಚಿತ್ರೀಕರಣ ಕೂಡ ಪ್ರಾರಂಭಿಸಿದೆ. ಫಸ್ಟ್ ಲುಕ್ ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಬಂಪರ್ ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ಚಿತ್ರವಂತೆ.

ಇತ್ತೀಚಿಗಷ್ಟೆ 'ಬಿಚ್ಚುಗತ್ತಿ' ಚಿತ್ರದ ಶೂಟಿಂಗ್ ಮುಗಿಸಿ ಸಂತು ಈಗ ಬಂಪರ್ ನಿರ್ದೇಶನಕ್ಕೆ ಇಳಿದ್ದಾರೆ. ವಿಶೇಷ ಅಂದ್ರೆ ಚಿತ್ರ ತಮಿಳು ಮತ್ತು ತೆಲುಗಿಗೂ ರಿಮೇಕ್ ಆಗಲಿದೆಯಂತೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ ಚಿತ್ರದ ಉಳಿದ ಸ್ಟಾರ್ ಬಗ್ಗೆ ರಿವೀಲ್ ಮಾಡಿಲ್ಲ. ಆದ್ರೆ ಸಧ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಚಿತ್ರತಂಡ.

More from Filmibeat

English summary
Kannada actor Challenging star Darshan released Dhanveer starrer Bumper movie first look.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X