»   » 'ಬಾಹುಬಲಿ' ಪ್ರಭಾಸ್ ಜೊತೆಯಲ್ಲಿ ಕನ್ನಡ ನಟ ಚಂದನ್!

'ಬಾಹುಬಲಿ' ಪ್ರಭಾಸ್ ಜೊತೆಯಲ್ಲಿ ಕನ್ನಡ ನಟ ಚಂದನ್!

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ದಿ ಕನ್ ಕ್ಲೂಷನ್' ಚಿತ್ರ ಜಗತ್ತಿನಾದ್ಯಂತ ಅಬ್ಬರಿಸುತ್ತಿದೆ. ದಕ್ಷಿಣ ಭಾರತ ಮಾತ್ರವಲ್ಲದೇ, ಬಾಲಿವುಡ್, ಹಾಲಿವುಡ್ ಮಟ್ಟದಲ್ಲೂ ಬಾಹುಬಲಿ ಸೌಂಡ್ ಮಾಡ್ತಿದೆ.

ಹೀಗಿರುವಾಗ ಸ್ಯಾಂಡಲ್ ವುಡ್ ನ ಹ್ಯಾಂಡ್ ಸಮ್ ನಟ ಚಂದನ್, ತೆಲುಗಿನ ಸ್ಟಾರ್ ನಟ ಪ್ರಭಾಸ್ ಅವರನ್ನ ಭೇಟಿ ಮಾಡಿರುವ ಫೋಟೋ ಸಖತ್ ಸುದ್ದಿ ಮಾಡುತ್ತಿದೆ. ಈ ಫೋಟೋವನ್ನ ನೋಡಿದ ಗಾಂಧಿನಗರದ ಮಂದಿ ಕೂತಲ್ಲಿಯೇ ಸಿಕ್ಕಾಪಟ್ಟೆ ಚರ್ಚೆ ಮಾಡ್ತಿದ್ದಾರೆ.[ಮಗಳಿಗಾಗಿ ಸುಂದರ 'ಪ್ರೇಮ ಬರಹ' ಬರೆಯುತ್ತಿರುವ ಅರ್ಜುನ್ ಸರ್ಜಾ]

ಅಷ್ಟಕ್ಕೂ, ಪ್ರಭಾಸ್ ಅವರನ್ನ ನಟ ಚಂದನ್ ಮೀಟ್ ಮಾಡಿದ್ದು ಯಾಕೆ? ಇದು ಯಾವಾಗ ಅಂತ ಮುಂದೆ ಓದಿ.....

'ಬಾಹುಬಲಿ' ಸೆಟ್ ನಲ್ಲಿ ಭೇಟಿ

'ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರೀಕರಣದ ವೇಳೆ ನಟ ಪ್ರಭಾಸ್ ಅವರನ್ನ ಕನ್ನಡದ ನಟ ಚಂದನ್ ಭೇಟಿಯಾಗಿದ್ದಾರೆ. ಈಗ ಈ ಫೋಟೋ ಹೊರಬಂದಿದ್ದು, ಕುತೂಹಲ ಹುಟ್ಟುಹಾಕಿದೆ.[ಅರ್ಜುನ್ ಸರ್ಜಾರ 'ಪ್ರೇಮ ಬರಹದಲ್ಲಿ' ಪುನೀತ್ ಇದ್ದಾರಾ?]

ಪ್ರಭಾಸ್ ಜೊತೆ ಚಂದನ್ ನಟನೆ!

ಈ ಪೋಟೋ ನೋಡಿದ ನಂತರ ಅನೇಕರು ಪ್ರಭಾಸ್ ಅವರ ಚಿತ್ರದಲ್ಲಿ ಚಂದನ್ ಏನಾದರೂ ಅಭಿನಯಿಸುತ್ತಿದ್ದರಾ ಅಥವಾ ಚಂದನ್ ಚಿತ್ರದಲ್ಲಿ ಪ್ರಭಾಸ್ ಬರ್ತಾರ ಎಂದು ಯೋಚನೆ ಮಾಡುತ್ತಿದ್ದಾರೆ. ಆದ್ರೆ, ಅದು ನಿಜ ಅಲ್ಲ.[ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ]

'ಪ್ರೇಮ ಬರಹ' ಚಿತ್ರತಂಡ ಭೇಟಿ

ಅಂದ್ಹಾಗೆ, ಇದು 'ಬಾಹುಬಲಿ-2' ಚಿತ್ರದ ಶೂಟಿಂಗ್ ಸೆಟ್ ಗೆ 'ಪ್ರೇಮ ಬರಹ' ಚಿತ್ರತಂಡ ಭೇಟಿ ಮಾಡಿದಾಗ ತೆಗೆದುಕೊಂಡಿರುವ ಫೋಟೋ. ಈಗಷ್ಟೇ ಈ ಫೋಟೋವನ್ನ ತಮ್ಮ ಫೇಸ್ ಬುಕ್ ಮತ್ತು ಇನ್ಸ್ಟಗ್ರಾಮ್ ನಲ್ಲಿ ಚಂದನ್ ಪೋಸ್ಟ್ ಮಾಡಿಕೊಂಡಿದ್ದರು. ಹೀಗಾಗಿ, ಈ ಫೋಟೋ ಎಲ್ಲ ಕಡೆ ಹರಿದಾಡುತ್ತಿದೆ.

ಐಶ್ವರ್ಯ ಸರ್ಜಾ ಅಭಿನಯದ 'ಪ್ರೇಮಬರಹ'

ಅಂದ್ಹಾಗೆ, 'ಪ್ರೇಮ ಬರಹ' ಅರ್ಜುನ್ ಸರ್ಜಾ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ. ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಸರ್ಜಾ ಕನ್ನಡಕ್ಕೆ ಎಂಟ್ರಿ ಕೊಡ್ತಿರುವ ಮೊದಲ ಕನ್ನಡ ಚಿತ್ರ. ಈ ಚಿತ್ರದಲ್ಲಿ ಚಂದನ್ ನಾಯಕನಾಗಿದ್ದಾರೆ. ಸಾಧುಕೋಕಿಲಾ. ರಂಗಾಯಣ ರಘು ಕೂಡ ಕಾಣಿಸಿಕೊಂಡಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಪ್ರೇಮ ಬರಹ' ಆದಷ್ಟೂ ಬೇಗ ತೆರೆಗೆ ಬರಲಿದೆ.[ಅಪ್ಪ ಅರ್ಜುನ್ ಸರ್ಜಾರ ಕನಸು ನನಸಾಗಿಸುತ್ತಿರುವ ಐಶ್ವರ್ಯ]

English summary
Kannada actor Chandan recently shared with us a picture of his Prema Baraha team on the sets of Baahubali: The Conclusion.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X