ಜಿಮ್‌ನಲ್ಲಿ ಕಸರತ್ತು ಶುರು ಮಾಡಿದ ಚಂದನ್ ಶೆಟ್ಟಿ, ರ್ಯಾಪರ್ ಲುಕ್‌ಗೆ ಅಭಿಮಾನಿಗಳು ಖುಷ್
ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ಪ್ರತಿಭೆ ಅಂದರೆ ಅವರು ಬೇರೆ ಯಾರು ಅಲ್ಲ ಅವರೇ ನಮ್ಮ ರಾಪಿಡ್ ಚಂದನ್ ಶೆಟ್ಟಿ. ಚಂದನ್ ಶೆಟ್ಟಿ ಹಾಡುವುದಕ್ಕೆ ಸೈ ಹಾಗೆಯೇ ನಟನೆ ಮಾಡುವುದಕ್ಕೂ ಸೈ ಹಾಗೆಯೇ ಡ್ಯಾನ್ಸ್ ಮಾಡುವುದಕ್ಕೂ ಸೈ. ಬಹಳ ಅದ್ಭುತ ಪ್ರತಿಭೆಯುಳ್ಳ ವ್ಯಕ್ತಿ ಚಂದನ್ ಶೆಟ್ಟಿ ಎಂದು ಹೇಳಿದರೆ ತಪ್ಪಾಗಲಾರದು. ವ್ಯೆಯಕ್ತಿಕ ಜೀವನದಲ್ಲಿ ಒಂದಲ್ಲ ಒಂದು ಸವಾಲುಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಏನಾದರು ಒಂದು ಸಾಧನೆ ಮಾಡಬೇಕು ಎಂದುಕೊಂಡಿರುವ ಪ್ರತಿಭಾವಂತ ನಟ ಎಂದರೆ ತಪ್ಪಾಗದು.
ಬಿಗ್ ಬಾಸ್ ಮೂಲಕ ಎಲ್ಲರ ಪ್ರೀತಿ ಸಂಪಾದಿಸಿದ ಚಂದನ್ ಶೆಟ್ಟಿ,ಅದೇ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಆಗಿದ್ದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ ಆ ಪ್ರೀತಿ ತುಂಬಾ ವರುಷ ನಿಲ್ಲಲಿಲ್ಲ. ಕೊನೆಗೆ ಅವರು ಇಬ್ಬರು ವಿಚ್ಛೇದನ ಪಡೆದುಕೊಂಡು ಬೇರೆ ಬೇರೆಯಾಗಿದ್ದಾರೆ. ಆದರೆ ಇದೀಗ ಅವರಿಬ್ಬರ ಹಾದಿ ಬೇರೆ ಬೇರೆಯಾಗಿದೆ. ಇದೀಗ ಒಂದೇ ಸಿನಿಮಾದಲ್ಲಿ ಕೂಡ ಇಬ್ಬರು ನಟನೆ ಮಾಡುತ್ತಿದ್ದಾರೆ. ಅನೇಕ ಜನರು ಇವರಿಬ್ಬರೂ ವಿಚ್ಛೇದನ ತೆಗೆದುಕೊಂಡಿದ್ದು ನೋಡಿ ಬಹಳ ಬೇಸರ ಪಟ್ಟುಕೊಂಡಿದ್ದರೂ. ಅನೇಕ ಜನರು ಮತ್ತೆ ಚಂದನ್ ಹಾಗೂ ನಿವೇದಿತಾ ಗೌಡ ಒಟ್ಟಿಗೆ ಕಾಣಿಸುತ್ತಾರೆ ಹಾಗೆಯೇ ಅವರಿಬ್ಬರೂ ಮುಂಚಿನ ಹಾಗೆ ಸಂಸಾರವನ್ನು ನಡೆಸಿಕೊಂಡು ಇರುತ್ತಾರೆ ಎಂದುಕೊಂಡಿದ್ದರು ಆದರೆ ಅಭಿಮಾನಿಗಳು ಅಂದುಕೊಂಡಿದ್ದು ಮಾತ್ರ ಹುಸಿ ಆಗಿದೆ ಎಂದು ಹೇಳಿದರೆ ತಪ್ಪಾಗದು.

ಇದೀಗ ನಿವೇದಿತಾ ಗೌಡ ಅವರು ಹೆಚ್ಚಾಗಿ ರೀಲ್ಸ್ ಮಾಡುತ್ತಿದ್ದಾರೆ ಹಾಗೆಯೇ ಅನೇಕ ವಿಚಾರದಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ಚಂದನ್ ಶೆಟ್ಟಿ ಕೂಡ ಹಾಡು ಹಾಗೆಯೇ ನಟನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಚಂದನ್ ಶೆಟ್ಟಿಯವರ ಚೊಚ್ಚಲ ಸಿನಿಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಇವರ ಅಭಿನಯವನ್ನು ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ. ಇದೀಗ ಚಂದನ್ ಶೆಟ್ಟಿ ಅವರು ಜಿಮ್ ಬಾಗಿಲು ಬಡೆದಿದ್ದಾರೆ. ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ.
ಬಿಗ್ ಬಾಸ್ ಬಳಿಕ ಅದ್ಭುತವಾಗಿ ಜೀವನ ಕಟ್ಟಿಕೊಂಡಿದ್ದ ಚಂದನ್
ಬಿಗ್ ಬಾಸ್ ಬಳಿಕ ಚಂದನ್ ಶೆಟ್ಟಿ ಅದ್ಭುತವಾದ ಜೀವನ ಕಟ್ಟಿಕೊಂಡಿದ್ದರು. ಬಿಗ್ ಬಾಸ್ ಮೊದಲಿಗೆ ಚಂದನ್ ಶೆಟ್ಟಿ ಎಂದರೆ ಯಾರಿಗೂ ಅಷ್ಟಾಗಿ ಪರಿಚಯ ಇರಲಿಲ್ಲ. ಬಿಗ್ ಬಾಸ್ ಮೂಲಕ ಎಲ್ಲರಿಗೂ ಪರಿಚಯವಾದ ವ್ಯಕ್ತಿ ಚಂದನ್ ಶೆಟ್ಟಿ. ತನ್ನದೇ ಆದ ರ್ಯಾಪ್ ಹಾಡುಗಳನ್ನು ಹಾಡುತ್ತಾ ಸಾಕಷ್ಟು ಅಭಿಮಾನಿಗಳನ್ನು ಇವರು ಸಂಪಾದನೆ ಮಾಡಿದ್ದರು. ಬಿಗ್ ಬಾಸ್ ನಿಂದಾ ಹೊರಗೆ ಬಂದ ಬಳಿಕ ಚಂದನ್ ಶೆಟ್ಟಿ ಗೆ ಸಾಕಷ್ಟು ಅಭಿಮಾನಿಗಳು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಸಿನಿ ಪ್ರೇಮಿಗಳು ಚಂದನ್ ಶೆಟ್ಟಿ ಹಾಡಿಗೆ ಮೈ ಮರೆತು ಕುಣಿಯುತ್ತಾರೆ.
ಚಂದನ್ ಶೆಟ್ಟಿ ಗೆ ಮೈಮರೆತ ಜನ
ಹಾಗೆಯೇ ಬಹಳ ಖುಷಿಯಿಂದ ಅಸ್ವಾಧಿಸುತ್ತಾರೆ. ಗೋಲ್ಡನ್ ಸ್ಟಾರ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಇವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಚಂದನ್ ಹಾಗೂ ನಿವೇದಿತಾ ಗೌಡ ಮುದ್ದು ರಾಕ್ಷಸಿ ಸಿನಿಮಾ ಮೂಲಕ ಮೋಡಿ ಮಾಡಲು ಬರುತ್ತಿದ್ದಾರೆ .
ಚಂದನ್ ಹೊಸ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್
ಚಂದನ್ ಶೆಟ್ಟಿ ಜಿಮ್ ನಲ್ಲಿ ಫೋಟೋ ತೆಗೆದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡಿದ ಚಂದನ್ ಗೌಡ ಜಸ್ಟ್ ಬಿಗಿನಿಂಗ್ ಎಂದು ಬರೆದುಕೊಂಡಿದ್ದಾರೆ. ಚಂದನ್ ಶೆಟ್ಟಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ. ಈಗಾಗಲೇ ಈ ಫೋಟೋ ಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಹಾಗೆಯೇ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಂದನ್ ಶೆಟ್ಟಿ ಫೋಟೋ ವೈರಲ್ ಆಗುತ್ತಿದೆ.


Click it and Unblock the Notifications