ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆ; ರಕ್ತ ಸೋರುತ್ತಿದ್ದರು ಇನ್‌ಸ್ಟಾ ಲೈವ್
ಕನ್ನಡ ಯುವ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ(ಮೇ 12) ರಾತ್ರಿ 10 ಗಂಟೆ ಸುಮಾರಿಗೆ ಕಗ್ಗಲಿಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಗೊಂಡಿರುವ ಚೇತನ್ ಇನ್‌ಸ್ಟಾ ಲೈವ್ ಬಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಕನಕಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮ ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದರು. ಅದರಲ್ಲಿ ಒಬ್ಬ ಕುಡಿದಿದ್ದ. ನಾವು ದರೋಡೆ ಮಾಡಲು ಬಂದಿರಬಹುದು ಎಂದು ಇಳಿದು ಆತ್ಮರಕ್ಷಣೆಗಾಗಿ ಹೊಡೆಯಲು ಮುಂದಾಗಿದ್ದವು. ಬಳಿಕ ಅವರ ಕಡೆಯವರು 20 ಜನ ಬಂದು ಈ ರೀತಿ ಹೊಡೆದಿದ್ದಾರೆ ಎಂದು ಚೇತನ್ ಲೈವ್‌ನಲ್ಲಿ ತಿಳಿಸಿದ್ದಾರೆ.

'ಪ್ರೇಮಿಸಂ', 'ರಾಜಧಾನಿ', 'ಪ್ಲಸ್', 'ಜಾತ್ರೆ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ. ಗಲಾಟೆ ವೇಳೆ ಚೇತನ್ ಮುಖ, ಕಾಲಿಗೆ ಪೆಟ್ಟಾಗಿದೆ. ಗಲಾಟೆ ಬಳಿಕ ಕಗ್ಗಲಿಪುರ ಪೊಲೀಸ್ ಠಾಣೆಗೆ ಅವರು ಹೋಗಿದ್ದಾರೆ. ಪೊಲೀಸರು ಮೊದಲಿಗೆ ಪಕ್ಕದಲ್ಲಿ ಇರುವ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಬರುವಂತೆ ಸೂಚಿಸಿದ್ದಾರೆ.
ಮುಖದಲ್ಲಿ ರಕ್ತ ಸೋರುತ್ತಿದ್ದಾಗಲೇ ಆಸ್ಪತ್ರೆಯಿಂದ ನಟ ಚೇತನ್ ಚಂದ್ರ ಇನ್‌ಸ್ಟಾ ಲೈವ್ ಬಂದು ಮಾತನಾಡಿದ್ದಾರೆ. ತಮಗೆ ಪೆಟ್ಟಾಗಿರುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಇವತ್ತು ಮದರ್ಸ್ ಡೇ, ಈ ವಿಡಿಯೋ ನಮ್ಮ ಅಪ್ಪ-ಅಮ್ಮ ನೋಡುತ್ತಿರುತ್ತಾರೆ ಯಾರು ಭಯ ಪಡಬೇಡಿ. ನನ್ನ ಹೆಂಡ್ತಿ, ಪಾಪು ಕೂಡ ನೋಡುತ್ತಿರುತ್ತಾರೆ ಭಯಪಡಬೇಡಿ. ಐಯಾಮ್ ಫೈನ್ ಎಂದು ಚೇತನ್ ಹೇಳಿದ್ದಾರೆ.
ದಿಢೀರನೆ ಅವರು ಯಾಕೆ ನಮ್ಮ ಕಾರು ಅಡ್ಡ ಹಾಕಿದರು ಎನ್ನುವುದು ಗೊತ್ತಿಲ್ಲ. ನಮ್ಮ ಕಾರಿಗೂ ಗುದ್ದಿದ್ದರು. ಗಲಾಟೆ ಶುರುವಾಗುತ್ತಿದ್ದಂತೆ ಅವರ ತಮ್ಮ, ತಂಗಿ ಎಲ್ಲಾ ಓಡಿ ಬಂದರು. ಬಳಿಕ ಸಾಕಷ್ಟು ಜನ ಬಂದರು. ಆ ಹುಡುಗಿ ನನ್ನ ಮೇಲೆ ಕೈ ಮಾಡಿದ್ರು ಎನ್ನುತ್ತಿದ್ದಾಳೆ. ಅಫೀಷಿಯಲ್ ಆಗಿ ಇರ್ತೀರಾ, ಹಾಗೆ ಇರಿ, ಯಾಕೆ ಅಡ್ಡ ಹಾಕಬೇಕು, ಹೊಡೆಯಲು ಬರಬೇಕು ಎಂದು ಕೇಳಿದಳು.
ನಮಗೇನು ಗೊತ್ತು. ಅವ್ರು ಹೊಡೆಯಲು ಬಂದ್ರು, ದರೋಡೆ ಮಾಡಲು ಬಂದ್ರು ಅಂದುಕೊಂಡ್ವಿ. ಅವರೆಲ್ಲಾ ಈಗ ಪೊಲೀಸ್ ಸ್ಟೇಷನ್ ಮುಂದೆ ಬಂದಿದ್ದಾರೆ. ಅವನು ಮಾತ್ರ ಬಂದಿಲ್ಲ ಎಂದು ಚೇತನ್ ವಿವರಿಸಿದ್ದಾರೆ.


Click it and Unblock the Notifications











