For Quick Alerts
  ALLOW NOTIFICATIONS  
  For Daily Alerts

  'ಆ ದಿನಗಳು' ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ ಇವರೇ.!

  |

  'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಚೇತನ್ ಕುಮಾರ್. 'ಬಿರುಗಾಳಿ', 'ಸೂರ್ಯಕಾಂತಿ', 'ದಶಮುಖ', 'ಮೈನಾ', 'ನೂರೊಂದು ನೆನಪು', 'ಅತಿರಥ' ಮುಂತಾದ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚೇತನ್ ಕುಮಾರ್ ಜನಪ್ರಿಯತೆ ಪಡೆದಿದ್ದಾರೆ.

  ನಟನಾಗಿ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲೂ ಗುರುತಿಸಿಕೊಂಡಿರುವ ಚೇತನ್ ಇತ್ತೀಚೆಗಷ್ಟೇ ಒಂದು ಗುಡ್ ನ್ಯೂಸ್ ಕೊಟ್ಟಿದ್ದರು. ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ನಟ ಚೇತನ್ ಬ್ರೇಕಿಂಗ್ ನ್ಯೂಸ್ ನೀಡಿದ್ದರು.

  ಇದೀಗ ಚೇತನ್ ತಮ್ಮ ಭಾವಿ ಪತ್ನಿಯನ್ನ ಪರಿಚಯಿಸಿದ್ದಾರೆ. ಹಾಗಾದ್ರೆ, ಚೇತನ್ ಮದುವೆ ಆಗುತ್ತಿರುವ ಹುಡುಗಿ ಯಾರು.? ನೀವೇ ನೋಡಿ.. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

  ಇವರೇ ನೋಡಿ ಚೇತನ್ ಮದುವೆ ಆಗುತ್ತಿರುವ ಹುಡುಗಿ.!

  ಇವರೇ ನೋಡಿ ಚೇತನ್ ಮದುವೆ ಆಗುತ್ತಿರುವ ಹುಡುಗಿ.!

  ನಟ ಚೇತನ್ ಮದುವೆ ಆಗುತ್ತಿರುವ ಹುಡುಗಿ ಈಕೆಯೇ. ಹೆಸರು ಮೇಘ ಎನ್ನಲಾಗಿದೆ. ಮೇಘ ಮೂಲತಃ ಅಸ್ಸಾಂ ನವರು. ಎರಡು ವರ್ಷಗಳಿಂದ ಚೇತನ್ ಮತ್ತು ಮೇಘ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಮುಂದಿನ ತಿಂಗಳು (ಫೆಬ್ರವರಿ) ಅಧಿಕೃತ ಮುದ್ರೆ ಬೀಳಲಿದೆ.

  ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?

  ಟ್ವೀಟ್ ಮಾಡಿರುವ ಚೇತನ್

  ಟ್ವೀಟ್ ಮಾಡಿರುವ ಚೇತನ್

  ಭಾವಿ ಪತ್ನಿ ಮೇಘ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು, ಅದನ್ನ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಚೇತನ್ ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ''ಕಲರ್ ಫುಲ್.! ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ'' ಎಂದು ಚೇತನ್ ಬರೆದುಕೊಂಡಿದ್ದಾರೆ.

  ಭಾವಿ ಪತ್ನಿಗೆ ಕನ್ನಡ ಕಲಿಸುತ್ತಿರುವ ಚೇತನ್

  ಭಾವಿ ಪತ್ನಿಗೆ ಕನ್ನಡ ಕಲಿಸುತ್ತಿರುವ ಚೇತನ್

  ಹೇಳಿ ಕೇಳಿ ಮೇಘ ಅಸ್ಸಾಂ ಮೂಲದವರು. ಹೀಗಾಗಿ, ಆಕೆಗೆ ಕನ್ನಡ ಬರುವುದಿಲ್ಲ. ಕನ್ನಡ ಭಾಷೆ, ನೆಲ, ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಚೇತನ್ ಕುಮಾರ್, ತಮ್ಮ ಪ್ರಿಯತಮೆಗೆ ಕನ್ನಡ ಪಾಠ ಮಾಡುತ್ತಿದ್ದಾರೆ. ಅಂದ್ಹಾಗೆ, ಮೇಘ ಸಿನಿಮಾ ಇಂಡಸ್ಟ್ರಿಯವರಲ್ಲ.

  ಸಿಂಪಲ್ ಮದುವೆ.!

  ಸಿಂಪಲ್ ಮದುವೆ.!

  ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ನಟ ಚೇತನ್ ಗೆ ಧಾಂ ಧೂಂ ಆಗಿ ಮದುವೆ ಆಗುವುದು ಇಷ್ಟವಿಲ್ಲ. ಅನಾಥ ಮಕ್ಕಳ ಸಮ್ಮುಖದಲ್ಲಿ ಸಿಂಪಲ್ ಆಗಿ ಮದುವೆ ಆಗಲು ಚೇತನ್ ನಿರ್ಧರಿಸಿದ್ದಾರೆ. ಇದಕ್ಕೆ ಮೇಘ ಅವರ ಸಮ್ಮತಿ ಕೂಡ ಇದೆ.

  English summary
  Kannada Actor Chethan Kumar is getting married to Megha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X