ಹಾಸ್ಯನಟ, ರಂಗಭೂಮಿ ಕಲಾವಿದ ಚಿಕ್ಕ ಸುರೇಶ್ ಇನ್ನಿಲ್ಲ

By Harshitha

ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ, ರಂಗಭೂಮಿ, ಬೀದಿ ನಾಟಕ, ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಚಿಕ್ಕ ಸುರೇಶ್ ಇಂದು ಚಿರನಿದ್ರೆಗೆ ಜಾರಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ಚಿಕ್ಕ ಸುರೇಶ್ ತೆರಳಿದ್ದರು. ಆದ್ರೆ, ಗೋವಾ ತಲುಪಿದ ದಿನವೇ ಚಿಕ್ಕ ಸುರೇಶ್ ಅನಾರೋಗ್ಯಕ್ಕೆ ಒಳಗಾದರು. ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರುವಾಗ ಮಾರ್ಗ ಮಧ್ಯೆ ಚಿಕ್ಕ ಸುರೇಶ್ ಕೊನೆಯುಸಿರೆಳೆದಿದ್ದಾರೆ.

ಸದ್ಯ ಹನುಮಂತನಗರದ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಒಳಗೆ ಅಂತಿಮ ಸಂಸ್ಕಾರ ನಡೆಯಲಿದೆ.

Kannada Actor Chikka Suresh passes away

ಬೆಂಗಳೂರಿನ ಹನುಮಂತನಗರದಲ್ಲಿ ಹುಟ್ಟಿ ಬೆಳೆದ ಚಿಕ್ಕ ಸುರೇಶ್ ಗೆ ರಂಗಭೂಮಿ ಕೈಬೀಸಿ ಕರೆಯಿತು. ರಂಗಭೂಮಿಯಲ್ಲಿ ಸಾಕಷ್ಟು ವರ್ಷ ದುಡಿದ ಚಿಕ್ಕ ಸುರೇಶ್, ನಂತರ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದರು. 'ಬಣ್ಣದ ಗೆಜ್ಜೆ', 'ನಂದಿ' ಮುಂತಾದ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದ ಚಿಕ್ಕ ಸುರೇಶ್, ಅನೇಕ ಸರ್ಕಾರಿ ಸಾಕ್ಷ್ಯಚಿತ್ರಗಳನ್ನೂ ರೂಪಿಸಿದ್ದಾರೆ.

More from Filmibeat

English summary
Kannada Actor Chikka Suresh passes away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X