»   » ಹೃದಯಾಘಾತದಿಂದ ಸಾವನ್ನಪ್ಪಿದ ಹಾಸ್ಯ ನಟ ಚಿಕ್ಕಣ್ಣ ತಂದೆ ಭೈರೇಗೌಡ

ಹೃದಯಾಘಾತದಿಂದ ಸಾವನ್ನಪ್ಪಿದ ಹಾಸ್ಯ ನಟ ಚಿಕ್ಕಣ್ಣ ತಂದೆ ಭೈರೇಗೌಡ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಕಾಮಿಡಿ ಕಲಾವಿದ ಚಿಕ್ಕಣ್ಣ ಅವರ ತಂದೆ ಭೈರೇಗೌಡ ನಿಧನರಾಗಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಸೋಮವಾರ (ಫೆಬ್ರವರಿ 13) ಬೆಳಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಮೈಸೂರು ತಾಲೂಕಿನ ಬಲ್ಲಹಳ್ಳಿ ಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ. ಪತ್ನಿ, ನಾಲ್ವರು ಹೆಣ್ಣು ಮಕ್ಕಳು, ಪುತ್ರ ಚಿಕ್ಕಣ್ಣ ಸೇರಿದಂತೆ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.

Kannada Actor Chikkanna father passes away

ನಟ ಚಿಕ್ಕಣ್ಣ ಅವರ ಬಂಧುಮಿತ್ರರು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಭೈರೇಗೌಡ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ.

English summary
Kannada Actor Chikkanna father Bhaire Gowda died on Monday (Feb 13th) morning at his residence in Mysore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X