»   » ಹಾಸ್ಯ ನಟ ಚಿಕ್ಕಣ್ಣಗೆ 'ಸ್ಟಾರ್' ಪಟ್ಟ: ಸಿಕ್ಕಿದೆ ಹೊಸ ಬಿರುದು.!

ಹಾಸ್ಯ ನಟ ಚಿಕ್ಕಣ್ಣಗೆ 'ಸ್ಟಾರ್' ಪಟ್ಟ: ಸಿಕ್ಕಿದೆ ಹೊಸ ಬಿರುದು.!

Posted By:
Subscribe to Filmibeat Kannada

'ಚಾಲೆಂಜಿಂಗ್ ಸ್ಟಾರ್' ದರ್ಶನ್.. 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್.. 'ರೋರಿಂಗ್ ಸ್ಟಾರ್' ಶ್ರೀಮುರಳಿ.. 'ಸೆಂಚುರಿ ಸ್ಟಾರ್' ಶಿವರಾಜ್ ಕುಮಾರ್.. ಹೀಗೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಹೀರೋಗೂ ಒಂದೊಂದು 'ಸ್ಟಾರ್' ಬಿರುದು ಇದೆ. ಈಗ ಹಾಸ್ಯ ನಟ ಚಿಕ್ಕಣ್ಣ ರವರಿಗೂ 'ಸ್ಟಾರ್' ಬಿರುದು ಸಿಕ್ಕಿಬಿಟ್ಟಿದೆ.

'ಕಾಮಿಡಿ ಕಿಲಾಡಿ' ಆಗಿ ಅನೇಕ ಚಿತ್ರಗಳಲ್ಲಿ ನಿಮ್ಮನ್ನೆಲ್ಲ ನಕ್ಕು-ನಲಿಸಿರುವ ಚಿಕ್ಕಣ್ಣ ಈಗ 'ನ್ಯಾಚುರಲ್ ಸ್ಟಾರ್'.!

Kannada Actor Chikkanna gets new title 'Natural Star'

ಹೌದು, ಚಿಕ್ಕಣ್ಣ ರವರಿಗೆ 'ನ್ಯಾಚುರಲ್ ಸ್ಟಾರ್' ಅಂತ ನಾಮಕರಣ ಮಾಡಿರುವುದು 'ಸಂಹಾರ' ಚಿತ್ರತಂಡ.

ಅಂದ್ಹಾಗೆ, ಇವತ್ತು ಚಿಕ್ಕಣ್ಣ ರವರ ಹುಟ್ಟುಹಬ್ಬ. ಚಿಕ್ಕಣ್ಣ ರವರ ಜನ್ಮದಿನದ ಪ್ರಯುಕ್ತ 'ಸಂಹಾರ' ಚಿತ್ರತಂಡ ಇಂದು ಸ್ಪೆಷಲ್ ಟೀಸರ್ ಬಿಡುಗಡೆ ಮಾಡಿದೆ. ಖಾಕಿ ಖದರ್ ನಲ್ಲಿ ಮಿಂಚುವ ಚಿಕ್ಕಣ್ಣಗೆ 'ನ್ಯಾಚುರಲ್ ಸ್ಟಾರ್' ಎಂದು ಬಿರುದು ನೀಡುವ ಮೂಲಕ 'ಸಂಹಾರ' ಚಿತ್ರತಂಡ ವಿಶಿಷ್ಟ ಉಡುಗೊರೆ ನೀಡಿದೆ.

'ಸಂಹಾರ' ಚಿತ್ರದ ಚಿಕ್ಕಣ್ಣ ಬರ್ತಡೇ ಸ್ಪೆಷಲ್ ಟೀಸರ್ ಇಲ್ಲಿದೆ, ನೋಡಿರಿ....

English summary
Kannada Actor Chikkanna is celebrating his birthday today. On this occasion, Chikkanna has got new title 'Natural Star' from 'Samhara' movie team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada