'ಕೋಟಿಗೊಬ್ಬ-3' ಸೆಟ್ ನಲ್ಲಿ ಸುದೀಪ್ ಜೊತೆ ಕಾಣಿಸಿಕೊಂಡ ರವಿಮಾಮ

Recommended Video

ಕಿಚ್ಚನಿಗೆ ಸರ್ಪ್ರೈಸ್ ನೀಡಿದ ರವಿಮಾಮ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹು ನಿರೀಕ್ಷೆಯ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಪೈಲ್ವಾನ್' ಚಿತ್ರದ ಪ್ರಮೋಷನ್ ನಡುವೆಯು ಕಿಚ್ಚ 'ಕೋಟಿಗೊಬ್ಬ-3' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ಕಿಚ್ಚನ ಅಡ್ಡಾಗೆ ವಿಶೇಷವಾದ ವ್ಯಕ್ತಿಯೊಬ್ಬರು ಭೇಟಿಕೊಟ್ಟಿದ್ದಾರೆ.

ಆ ಸ್ಪೆಷಲ್ ವ್ಯಕ್ತಿ ಮತ್ಯಾರು ಅಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್. ರವಿಚಂದ್ರನ್ ಮತ್ತು ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. ಸುದೀಪ್ ಅವರನ್ನು ರವಿಮಾಮ ಮೊದಲ ಮಗ ಎಂದೇ ಹೇಳುತ್ತಾರೆ. ಅಲ್ಲದೆ ಈಗಾಗಲೆ ರವಿಚಂದ್ರನ್ ಮತ್ತು ಸುದೀಪ್ ಇಬ್ಬರು ಮಾಣಿಕ್ಯ, ಹೆಬ್ಬುಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸುದೀಪ್ ತುಂಬಾನೆ ಇಷ್ಟ ಪಡುವ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರವಿಮಾಮ 'ಕೋಟಿಗೊಬ್ಬ-3' ಸೆಟ್ ಗೆ ಸರ್ಪ್ರೈಸ್ ಭೇಟಿ ನೀಡಿರುವುದು ಕಿಚ್ಚನಿಗೆ ಸಂತಸ ತಂದಿದೆ. ರವಿಚಂದ್ರನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸುದೀಪ್.

'ಕೋಟಿಗೊಬ್ಬ-3' ಚಿತ್ರದಲ್ಲಿ ರವಿಚಂದ್ರನ್?

'ಕೋಟಿಗೊಬ್ಬ-3' ಚಿತ್ರದಲ್ಲಿ ರವಿಚಂದ್ರನ್?

ರವಿಚಂದ್ರನ್ 'ಕೋಟಿಗೊಬ್ಬ-3' ಚಿತ್ರೀಕರಣ ಸೆಟ್ ನಲ್ಲಿ ದಿಢೀರ್ ಕಾಣಿಸಿಕೊಂಡಿರುವುದು ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಆದ್ರೆ ಒಟ್ಟಿಗೆ ಕಾಣಿಸಿಕೊಂಡರು ಅಚ್ಚರಿ ಏನು ಇಲ್ಲ. ಒಂದು ವೇಳೆ ಕೋಟಿಗೊಬ್ಬ-3 ಚಿತ್ರದಲ್ಲಿ ರವಿಚಂದ್ರನ್ ಬಣ್ಣ ಹಚ್ಚಿದ್ರೆ ಹೆಬ್ಬುಲಿ ನಂತರ ಮತ್ತೆ ಒಂದಾಗಲಿದೆ ಈ ಜೋಡಿ. ಮೊದಲು ಮಾಣಿಕ್ಯ ಚಿತ್ರದಲ್ಲಿ ಮೋಡಿ ಮಾಡಿತ್ತು ಸುದೀಪ್ ಮತ್ತು ರವಿಚಂದ್ರನ್ ಜೋಡಿ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭೇಟಿ

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭೇಟಿ

ಇಬ್ಬರ ಭೇಟಿಗೆ ಸಾಕ್ಷಿಯಾಗಿದ್ದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ.

'ಕೋಟಿಗೊಬ್ಬ-3' ಚಿತ್ರದ ಹೈ ವೋಲ್ಟೇಜ್ ಆಕ್ಷನ್ ಮತ್ತು ಲವ್ ಸೀನ್ ಅನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಮತ್ತೊಂದೆಡೆ ರವಿಚಂದ್ರನ್ ಕೂಡ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಉದ್ದನೆಯ ದಾಡಿ ಬಿಟ್ಟು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ರವಿಮಾಮನ ಗೆಟಪ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ರವಿಶಂಕರ್, ರಾಘಣ್ಣ ಭೇಟಿಯಾಗಿದ್ದ ಸುದೀಪ್

ರವಿಶಂಕರ್, ರಾಘಣ್ಣ ಭೇಟಿಯಾಗಿದ್ದ ಸುದೀಪ್

ಅಂದ್ಹಾಗೆ ಸುದೀಪ್ ಮೊನ್ನೆ ಮೊನ್ನೆಯಷ್ಟೆ ಸೆಟ್ ನಲ್ಲಿ ಆರ್ಮುಗಂ ರವಿಶಂಕರ್ ಅವರನ್ನು ಭೇಟಿಯಾಗಿದ್ದರು. ರವಿಶಂಕರ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದೀಪ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ರವಿಶಂಕರ್ ಕೋಟಿಗೊಬ್ಬ-3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಮೊದಲು ರಾಘವೇಂದ್ರ ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದರು ಸುದೀಪ್. ರಾಘಣ್ಣ ಕೂಡ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೊಗರು ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

80 ರಷ್ಟು ಭಾಗ ಚಿತ್ರೀಕರಣ ಮುಕ್ತಾಯ

80 ರಷ್ಟು ಭಾಗ ಚಿತ್ರೀಕರಣ ಮುಕ್ತಾಯ

ಸದ್ಯ 'ಕೋಟಿಗೊಬ್ಬ-3' 80 ರಷ್ಟು ಭಾಗ ಚಿತ್ರೀಕರಣ ಮುಗಿಸಿದೆ. ಹೈದರಾಬಾದ್ ನಲ್ಲಿ ಆಕ್ಷನ್ ದೃಶ್ಯ ಸೆರಿಹಿಡಿಯುವಲ್ಲಿ ಚಿತ್ರತಂಡ ನಿರತವಾಗಿದೆ. 'ಕೋಟಿಗೊಬ್ಬ-3' ಚಿತ್ರಕ್ಕೆ ಶಿವಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಮಾಲಿವುಡ್ ನಟಿ ಮಡೋನಾ ಸೆಬಾಸ್ಟಿನ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actor crazy star Ravichandran meets kiccha Sudeep in Ramoji Film City. Sudeep is curently busy in Kotigobba-3 film shooting in Ramoji Film City.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X