ಸ್ಯಾಂಡಲ್ ವುಡ್ ನ 'ಬಡವ ರಾಸ್ಕಲ್' ಡಾಲಿ ಧನಂಜಯ್
Recommended Video
ಡಾಲಿ ಪಾತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿರುವ ನಟ ಧನಂಜಯ್ ಗೆ 'ಬಡವ ರಾಸ್ಕಲ್' ಎಂದು ಬೈಯುತ್ತಿದ್ದಾರೆ. ಅಯ್ಯೋ ಧನಂಜಯ್ ಅಂತಾಹದ್ದು ಏನು ಮಾಡಿದ್ದಾರೆ ಅಂತ ಅಂದ್ಕೋತ್ತಿದ್ದೀರಾ. 'ಬಡವ ರಾಸ್ಕಲ್' ಎನ್ನುವುದು ಡಾಲಿ ಅಭಿನಯದ ಹೊಸ ಸಿನಿಮಾದ ಟೈಟಲ್.
ಹೌದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಧನಂಜಯ್ ಈಗ 'ಬಡವ ರಾಸ್ಕಲ್' ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಡವ ರಾಸ್ಕಲ್ ಅಂತ ಅಂದ್ರೆ ಅಣ್ಣಾವ್ರು ನೆನಪಾಗುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಡಾ.ರಾಜ್ ಈ ಡೈಲಾಗ್ ಬಳಸಿದ್ದಾರೆ. ಅಭಿಮಾನಿಗಳಿಗೆ ಈ ಪದ ಈಗಲು ಅಚ್ಚಮೆಚ್ಚು.
ಈಗ ಅದೇ ಪದ ಚಿತ್ರದ ಟೈಟಲ್ ಆಗಿರುವುದು ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ. ಅಂದ್ಹಾಗೆ ಬಡವ ರಾಸ್ಕಲ್ ಶಂಕರ್ ನಿರ್ದೇಶನದ ಸಿನಿಮಾ. ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಶಂಕರ್ ಈ ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಬಡವ ರಾಸ್ಕಲ್ ಕಾಮಿಡಿ ಎಂಟರ್ಟೈನ್ ಮೆಂಟ್ ಸಿನಿಮಾ. ಇಲ್ಲಿ ಧನಂಜಯ್ ಗೆ ನಾಯಕಿಯಾಗಿ ಅಮೃತಾ ಅಯ್ಯಂಗರ್ ಕಾಣಿಸಿಕೊಳ್ಳುತ್ತಿದ್ದಾರೆ. 'ಬಡವ ರಾಸ್ಕಲ್' ಸಿನಿಮಾ ಇದೇ ತಿಂಗಳು 23ಕ್ಕೆ ಸೆಟ್ಟೇರಲಿದೆ. ಆದ್ರೆ ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.
ಧನಂಜಯ್ ಸದ್ಯ 'ಯುವರತ್ನ', 'ಪೊಗರು', 'ಸಲಗ' ಮತ್ತು 'ಪಾಪ್ ಕಾರ್ನ್ ಮಂಕಿ ಟೈಗರ್' ಮತ್ತು ಡಾಲಿ ಸಿನಿಮಾಲ್ಲಿ ಅಭಿನಯಿಸುತ್ತಿದ್ದಾರೆ. ಕೆಲವು ಚಿತ್ರಗಳಲ್ಲಿ ವಿಲನ್ ಪಾತ್ರದ ಮೂಲಕ ಅಬ್ಬರಿಸಲು ಸಜ್ಜಾಗಿದ್ರೆ ಇನ್ನು ಕೆಲವು ಚಿತ್ರದಲ್ಲಿ ಪೊಲೀಸ್ ಆಗಿ ಮತ್ತು ನಾಯಕನಾಗಿ ಮಿಂಚುತ್ತಿದ್ದಾರೆ.


Click it and Unblock the Notifications











