ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಹಂಬಲ್ ಪೊಲಿಟೀಷಿಯನ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಲಂಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಲ ಭುಜದ ಸರ್ಜರಿ ಮಾಡಿಸಿಕೊಂಡಿರುವ ಶಿವಣ್ಣ ಈಗ ರೆಸ್ಟ್ ಮೂಡ್ ನಲ್ಲಿದ್ದಾರೆ. ಲಂಡನ್ ನಲ್ಲಿರುವ ಶಿವಣ್ಣ ಅವರನ್ನು ಅನೇಕ ಜನ ಸ್ನೇಹಿತರು, ಕುಟುಂಬದವರು ಮತ್ತು ಆಪ್ತರು ಶಿವಣ್ಣ ಭೇಟಿಯಾಗಿ ಅರೋಗ್ಯ ವಿಚಾರಿಸುತ್ತಿದ್ದಾರೆ.
ಇತ್ತೀಚಿಗಷ್ಟೆ ಹಂಬಲ್ ಪೊಲಿಟೀಷಿಯನ್ ನೋಗರಾಜ್ ಅಂತಾನೆ ಖ್ಯಾತಿಗಳಿಸಿರುವ ನಟ ಡ್ಯಾನೀಷ್ ಸೇಠ್ ಶಿವಣ್ಣ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಡ್ಯಾನೀಷ್ ಕುಟುಂಬದ ಜೊತೆ ಲಂಡನ್ ಪ್ರವಾಸದಲ್ಲಿದ್ದು ಪ್ರವಾಸದ ಮಧ್ಯೆ ಮರೆಯದೆ ಶಿವಣ್ಣ ಅವರ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದ್ದಾರೆ. ಹ್ಯಾಟ್ರಿಕ್ ಹೀರೋ ಭೇಟಿಯಾದ ಬಗ್ಗೆ ಒಂದಿಷ್ಟು ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಖ್ಯಾತ ಕ್ರಿಕೆಟಿಗ ಅನೀಲ್ ಕುಂಬ್ಳೆ ಸಹ ಇತ್ತೀಚಿಗಷ್ಟೆ ಸೆಂಚುರಿ ಸ್ಟಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿ, ಶಿವಣ್ಣ ಕುಟುಂಬದ ಜೊತೆ ಡಿನ್ನರ್ ಸಹ ಮಾಡಿದ್ದಾರೆ. ಈ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಶಿವಣ್ಣ ಅವರನ್ನು ಭೇಟಿಯಾಗಿದ್ದರು.

ಸದ್ಯ ಡ್ಯಾನೀಷ್ ಸೇಠ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡ್ಯಾನೀಷ್ ಸೇಠ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೋಮ್ ಬ್ಯಾನರ್ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೆ ಡಾ.ರಾಜ್ ಕುಮಾರ್ ಕುಟುಂಬದ ಜೊತೆ ಡ್ಯಾನೀಷ್ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಇದೇ ತಿಂಗಳು 23ಕ್ಕೆ ವಾಪಾಸ್ ಆಗುವ ಸಾಧ್ಯತೆ ಇದೆ.


Click it and Unblock the Notifications











