Exclusive: ಇದು ಡಾರ್ಲಿಂಗ್ ಕೃಷ್ಣ 'ರಿಯಲ್ ಲವ್' ಸ್ಟೋರಿ
ಇತ್ತೀಚಿಗಷ್ಟೆ ನಟ ನಿಖಿಲ್ ಕುಮಾರ್ ಮದುವೆ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡದಾಗಿ ಹಬ್ಬಿತ್ತು. ಈಗ ಕನ್ನಡದ ಮತ್ತೊಬ್ಬ ನಟನ ಪ್ರೇಮ ಕಥೆಯ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.
Recommended Video
ನಟ ಡಾರ್ಲಿಂಗ್ ಕೃಷ್ಣ ಲವ್ ಸ್ಟೋರಿ ಬಗ್ಗೆ ಕೆಲವೊಂದು ಎಕ್ಸ್ ಕ್ಲೂಸಿವ್ ಮಾಹಿತಿ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕಿದೆ. ಸದ್ಯ, 'ಲವ್ ಮಾಕ್ ಟೈಲ್' ಸಿನಿಮಾದಲ್ಲಿ ಕೃಷ್ಣ ನಟಿಸಿದ್ದು, ಅದೇ ಸಿನಿಮಾದ ನಟಿ ಮಿಲನ ನಾಗರಾಜ್ ಜೊತೆಗೆ ಮದುವೆ ಆಗಲಿದ್ದಾರೆ ಎನ್ನುವ ಮಾತಿದೆ.
ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ಮುಂದೆ ಮದುವೆ ಆಗುವುದು ಪಕ್ಕಾ ಅಂತೆ. ಈ ಸುದ್ದಿಯನ್ನು ಕೃಷ್ಣ ಆಪ್ತ ಮೂಲಗಳು ಖಚಿತ ಪಡಿಸಿವೆ. ಕೇವಲ ಸುದ್ದಿ ಮಾತ್ರವಲ್ಲದೆ ಕೆಲವು ಅಂಶಗಳು ಈ ಜೋಡಿ ನಡುವೆ ಪ್ರೀತಿಯಾಗಿದೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಪರಿಚಯ, ಸ್ನೇಹ, ಪ್ರೀತಿ
ಕೃಷ್ಣ ಹಾಗೂ ಮಿಲನ ನಾಗರಾಜ್ ಮೊದಲ ಬಾರಿಗೆ ಪ್ರೀತಮ್ ಗುಬ್ಬಿ ನಿರ್ದೇಶನದ 'ನಮ್ ದುನಿಯಾ ನಮ್ ಸ್ಟೈಲ್' ಸಿನಿಮಾದಲ್ಲಿ ನಟಿಸಿದರು. ಇದು ಕೃಷ್ಣಗೆ 4ನೇ ಸಿನಿಮಾವಾದರೆ, ಮಿಲನಗೆ ಮೊದಲ ಚಿತ್ರವಾಗಿತ್ತು. ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಇಬ್ಬರು ಜೋಡಿಯಾಗಿರಲಿಲ್ಲ. ಈ ಸಿನಿಮಾದಿಂದ ಇಬ್ಬರ ನಡುವೆ ಪರಿಚಯ ಶುರು ಆಯ್ತು. ನಂತರ ಸ್ನೇಹ, ಆ ನಂತರ ಪ್ರೀತಿ ಆವರಿಸಿತು.

ಪದೇ ಪದೇ ತೆರೆ ಮೇಲೆ ಒಂದಾದ ಜೋಡಿ
'ನಮ್ ದುನಿಯಾ ನಮ್ ಸ್ಟೈಲ್' ಸಿನಿಮಾದ ನಂತರ ಮತ್ತೆ ಮತ್ತೆ ಈ ಜೋಡಿ ಒಟ್ಟಿಗೆ ನಟಿಸಿದರು. 'ಚಾರ್ಲಿ' ಹಾಗೂ 'ಚಂದ್ರಲೇಖ ರಿಟರ್ನ್' ಚಿತ್ರಗಳಲ್ಲಿ ಕೃಷ್ಣ ಮತ್ತು ಮಿಲನ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ, ಕೃಷ್ಣ ನಿರ್ದೇಶನ ಮಾಡಿರುವ 'ಲವ್ ಮಾಕ್ ಟೈಲ್' ಸಿನಿಮಾದ ಇಬ್ಬರು ನಾಯಕಿಯರಲ್ಲಿ ಮಿಲನ ಕೂಡ ಒಬ್ಬರಾಗಿದ್ದಾರೆ.

ಪ್ರೇಮಿಗಳ ದಿನಾಚರಣೆಯ ಪೋಸ್ಟ್
2017ರ ಪ್ರೇಮಿಗಳ ದಿನಾಚರಣೆಯಂದು ನಟ ಕೃಷ್ಣ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಎಂಬ ಬರಹದ ಟೀ ಶರ್ಟ್ ಹಾಕಿಕೊಂಡು ಯುವತಿಯೊಂದಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ತಮ್ಮ ಪ್ರೇಯಸಿಯ ಮುಖ ತೋರಿಸದೆ, ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ದರು. ಅಂದಹಾಗೆ, ಈ ಫೋಟೋದಲ್ಲಿ ಇರುವವರು ಮಿಲನ ನಾಗರಾಜ್.

ಮನೆಯವರ ಸಮ್ಮತಿ ಸಿಕ್ಕಿದೆ
ಸುಮಾರು 5 ವರ್ಷಗಳಿಂದ ಕೃಷ್ಣ ಹಾಗೂ ಮಿಲನ ಒಡನಾಟ ಹೊಂದಿದ್ದಾರೆ. ಒಬ್ಬರನ್ನಾದರೂ ಅರ್ಥ ಮಾಡಿಕೊಂಡು, ಪ್ರೀತಿ ಮಾಡಿ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಅವರ ಪ್ರೀತಿಗೆ ಎರಡು ಮನೆಯವರ ಸಮ್ಮತಿ ಸಿಕ್ಕಿದೆ. ಕೃಷ್ಣ ಕುಟುಂಬ ಜೊತೆ ಮಿಲನ, ಮಿಲನ ಕುಟುಂಬದ ಜೊತೆ ಕೃಷ್ಣ ಒಳ್ಳೆಯ ಬಾಂದವ್ಯ ಹೊಂದಿದ್ದಾರೆ.

ಮೊದಲು ಸಿನಿಮಾ, ನಂತರ ಮದುವೆ
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ನಟನೆಯ 'ಲವ್ ಮಾಕ್ ಟೈಲ್' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಕೃಷ್ಣ ಮೊದಲ ಬಾರಿಗೆ ತಾವೇ ನಿರ್ದೇಶಕರಾಗಿದ್ದಾರೆ. ಒಂದು ಒಳ್ಳೆಯ ಸಿನಿಮಾ ನೀಡುವ ಆಸೆಯಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಅವರ ಕನಸಿನ ಸಿನಿಮಾಗೆ ಆಲ್ ದಿ ಬೆಸ್ಟ್.


Click it and Unblock the Notifications











