ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಬಂಧನವಾಗಿರುವ 10 ಜನರ ಹಿನ್ನೆಲೆ ಏನು?

ರೇಣುಕಾಸ್ವಾಮಿ ಎಂಬ ಯುವಕ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟಗಾಗಿ ಕಾಮೆಂಟ್ ಮಾಡುತ್ತಿದ್ದ ಎಂದು ಹತ್ಯೆ ಮಾಡಿರುವುದಾಗಿ ಹೇಳಲಾಗ್ತಿದೆ. ಈಗಾಗಲೇ ಬೆಂಗಳೂರು ಪೊಲೀಸ್ ಬಿ ದಯಾನಂದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹತ್ಯೆಯಾಗಿರುವ ವ್ಯಕ್ತಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ರೇಣುಕಾಸ್ವಾಮಿ. ಜೂನ್‌ 1ರಂದು ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಜೂನ್‌ 10ರಂದು ಕುಟುಂಬ ಸದಸ್ಯರಿಗೆ ಆತನ ಹತ್ಯೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Kannada actor Darshan 10 others who arrested in Renuka swamy murder case

ನಟ ದರ್ಶನ್ ಸೂಚನೆಯಂತೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆಸಿ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದು ಜೂನ್‌ 9ರಂದು ಶವ ಪತ್ತೆಯಾಗಿದೆ. ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ 10 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನಟ ದರ್ಶನ್‌ಗೆ ವಿನಯ್ ಬಹಳ ಆಪ್ತರಾಗಿದ್ದರು. ಆರ್‌. ಆರ್‌ ನಗರದ ಸ್ಟೂನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕರಾಗಿದ್ದಾರೆ. ಇನ್ನು ರಾಘವೇಂದ್ರ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದಾನೆ. ದರ್ಶನ್ ಬಾಡಿಗಾರ್ಸ್‌ ಸಹ ಇದ್ದಾರೆ. ಇನ್ನು ವಿನಯ್ ಅವರ ಮಾವ ಜಯಣ್ಣ ಒಡೆತನದ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿದೆ ಎಂದು ಮಾಹಿತಿ ಲಭ್ಯವಾಗುತ್ತಿದೆ.

ಚಿತ್ರದುರ್ಗ ದ ತುರುವನೂರು ರಸ್ತೆಯ ಮೊದನೇ ಕ್ರಾಸ್ ನಿವಾಸಿ ಆಗಿದ್ದ ರೇಣುಕಾಸ್ವಾಮಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 3 ದಿನಗಳ ಹಿಂದೆ ದರ್ಶನ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ. ವಿನಯ್ ಅವರ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿ ಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಈ ವೇಳೆ ನಟ ದರ್ಶನ್ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಇನ್ನು ಬೆಂಗಳೂರಿನಲ್ಲಿ ನಟ ದರ್ಶನ್ ಪ್ರೇಯಸಿ ಪವಿತ್ರಾಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪ್ರಕರಣ ಬಹಳ ಗಂಭೀರ ಸ್ವರೂಪದ್ದಾಗಿದ್ದು ಆರೋಪ ಸಾಬೀತಾದರೆ ಬಂಧನವಾಗಿರುವವರಿಗೆ ಗಂಭೀರ ಶಿಕ್ಷೆ ಆಗಲಿದೆ.

More from Filmibeat

English summary
10 accused arrested in Renuka swamy murder case including Actor Darshan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X