ಕೇರಳದಲ್ಲಿ ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿದ ದರ್ಶನ್ ? ಈ ದೇವಾಲಯದ ವಿಶೇಷತೆಗಳೇನು ?

By ಫಿಲ್ಮಿಬೀಟ್ ಡೆಸ್ಕ್

ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿದ್ದರಿಂದನೇ ದರ್ಶನ್ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸಿದರು ಎನ್ನುವುದು ಅನೇಕರ ಅಭಿಪ್ರಾಯ. ಇಂಥಾ ಪರಪ್ಪನ ಅಗ್ರಹಾರದಿಂದ ಮುಕ್ತಿಯನ್ನು ಪಡೆದು ಸದ್ಯ ದರ್ಶನ್ ತಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ವಹಿಸಿದ್ದಾರೆ. ಪತ್ನಿಯ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ನಡೆದ ಕಹಿಯನ್ನೆಲ್ಲ ಮರೆತು ಮನೆ-ಮಗ-ಸಂಸಾರ-ಸಿನಿಮಾ ಎಂದು ಓಡಾಡಿಕೊಂಡು ಇದ್ದಾರೆ.

ಹಾಗಂಥ ಸಮಸ್ಯೆ ಬಗೆಹರಿಯಿತು ಅಂತಲ್ಲ. ಯಾಕೆಂದರೆ.. ದರ್ಶನ್‌ಗೆ ನೀಡಿರುವ ಜಾಮೀನು ರದ್ದು ಮಾಡಬೇಕೆಂದು ಕೋರಿ ಖಾಕಿ ಪಡೆ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನೇರಿದೆ. ವಿಶೇಷ ಅಂದರೆ ಸುಪ್ರೀಂಕೋರ್ಟ್ ಕೂಡ ಅರ್ಜಿಯ ವಿಚಾರಣೆಯಲ್ಲಿ ಆಸಕ್ತಿ ತೋರಿಸಿದೆ. ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಇದೇ ಏಪ್ರಿಲ್ 2ಕ್ಕೆ ವಿಚಾರಣೆಯನ್ನು ಕೂಡ ನಡೆಸಲಿದೆ.

Kannada actor Darshan along with his family visited the Thiruvarkadu Bhagavathy Temple in Madayi

ಹೀಗಿರುವಾಗ ಇದೀಗ ದರ್ಶನ್ ತಮಗೆ ಎದುರಾದ ಈ ಸಂಕಷ್ಟಗಳಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ. ತನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಶತ್ರುಗಳ ನಾಶವಾಗಲಿ ಎಂದು ವಿಶೇಷ ದೇವಾಲಯವೊಂದರಲ್ಲಿ ಪೂಜೆ ಮಾಡಿದ್ದಾರೆ. ಮಾಡಾಯಿಕಾವು ಶ್ರೀಭಗವತೀ ಪಾದಕ್ಕೇರಗಿದ್ದಾರೆ. ಹೀಗೊಂದು ಸುದ್ದಿ ಫೋಟೊ ಸಮೇತ ಸದ್ಯ ವೈರಲ್ ಆಗಿದೆ.

ಹೌದು, ಅಸಲಿಗೆ ಕೇರಳದ ಕಣ್ಣೂರಿನಲ್ಲಿರುವ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ದರ್ಶನ್ ತಮ್ಮ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರ ಜೊತೆ ಭೇಟಿ ನೀಡಿದ್ದಾರೆ. ತಮ್ಮ ಸ್ವಂತ ಸಹೋದರ ದಿನಕರ್ ಅನುಪಸ್ಥಿತಿಯಲ್ಲಿಯೇ ದೇವರು ಕೊಟ್ಟ ತಮ್ಮ ಧನ್ವೀರ್ ಜೊತೆ ದೇವಾಲಯದ ಪ್ರದಕ್ಷಣೆಯನ್ನು ಹಾಕಿದ್ದಾರೆ. ಪೂಜೆಯನ್ನು ಸಲ್ಲಿಸಿದ್ದಾರೆ.

ಇನ್ನು ದರ್ಶನ್ ಭೇಟಿ ನೀಡಿದ ಈ ದೇವಸ್ಥಾನಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ಇಲ್ಲಿ ಪಾರ್ವತಿ ದೇವಿ ರುದ್ರಕಾಳಿಯ ಅವತಾರದಲ್ಲಿ ಸಂಚರಿಸುತ್ತಾಳೆ ಎನ್ನುವ ನಂಬಿಕೆ ಇದೆ. ಇಷ್ಟೇ ಅಲ್ಲ ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಲು ನಕ್ಷತ್ರ, ಗಳಿಗೆ ಮತ್ತು ಸೂಕ್ತ ಸಮಯ ನೋಡಿಕೊಂಡು ಪೂಜೆ ಮಾಡಲಾಗುತ್ತೆ. ಇಲ್ಲಿ ರಾತ್ರಿ 8ರ ನಂತರ ಪೂಜಾರಿಗಳ ಹೊರತಾಗಿ ಇನ್ಯಾರು ಸಹ ಇರುವಂತೆ ಇಲ್ಲ.

ಇಂದು ಶುಭ ದಿನವಾದ ಹಿನ್ನೆಲೆ ಪ್ರಾರ್ಥನೆ ಮಾಡಿದರೆ ಫಲ ಸಿಗುತ್ತೆ ಎನ್ನುವ ನಂಬಿಕೆ ಹಲವರದ್ದು. ಇನ್ನು ಇಂದು ಅಷ್ಟಮಿ ತಿಥಿಯಾದ ಹಿನ್ನೆಲೆ ಶತ್ರು ಸಂಹಾರ ಪೂಜೆ ಮಾಡಿದರೆ ವಿಶೇಷ ಫಲ ಮತ್ತು ಪರಿಹಾರ ಸಿಗುತ್ತೆ ಎನ್ನುವ ಮಾತು ಇದೆ. ಹೀಗಾಗಿಯೇ ಜ್ಯೋತಿಷಿಗಳ ಸಲಹೆಯ ಮೇರೆಗೆ ಇಂದು ದರ್ಶನ್ ಶತ್ರು ಸಂಹಾರ ಪೂಜೆಯನ್ನು ಮಾಡಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

ಇಲ್ಲಿ ವಾಮಮಾರ್ಗದಲ್ಲಿ ಪೂಜೆ ಮಾಡುವ ಸಂಪ್ರದಾಯ ಕೂಡ ಇದೆ. ಮದ್ಯವನ್ನು ಇಟ್ಟು ನೈವೇದ್ಯವನ್ನು ಕೂಡ ಅನೇಕರು ತೋರಿಸುತ್ತಾರೆ ಎಂದು ಎಂದು ದೇವಸ್ಥಾನದ ಅರ್ಚಕ ಶರತ್ ಗೌರೀಶ್ ಅವರು ಹೇಳಿದ್ದಾರೆ ಎಂದು ನ್ಯೂಸ್ ಫಸ್ಟ್ ವಾಹಿನಿ ವರದಿಯನ್ನು ಮಾಡಿದೆ. ಇನ್ನು ಈ ದೇವಾಲಯದಲ್ಲಿ ಒಟ್ಟು 08 ರೀತಿಯ ಪೂಜೆಗಳನ್ನು ಮಾಡಲಾಗುತ್ತಿದ್ದು, ಶತ್ರು ಸಂಹಾರ ಪೂಜೆ ಬಹಳ ವಿಶೇಷವಾದುದು. ಈ ಪೂಜೆಯನ್ನು ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಯ ನಡುವೆ ಈ ಪೂಜೆಯನ್ನು ಮಾಡಿಸಲಾಗುತ್ತದೆ ಎನ್ನುವ ಮಾತನ್ನು ಭಕ್ತರು ಸದ್ಯ ಹೇಳುತ್ತಿದ್ದಾರೆ.

ಈ ಎಲ್ಲ ಹಿನ್ನೆಲೆಯಿಂದ ದರ್ಶನ್ ಈ ದೇವಾಲಯಕ್ಕೆ ತಮ್ಮ ಕುಟುಂಬ ಸಮೇತರಾಗಿ ತೆರಳಿರುವ ವಿಚಾರ ಸಹಜವಾಗಿಯೇ ಅನೇಕರಲ್ಲಿ ಕುತೂಹಲ ಕೆರಳಿಸಿದೆ. ದರ್ಶನ್ ತಮ್ಮ ಶತ್ರುಗಳ ಸಂಹಾರಕ್ಕಾಗಿ ಇಲ್ಲಿ ತೆರಳಿ ಪೂಜೆ ಮಾಡಿಸಿದ್ದಾರಾ ಎನ್ನುವ ಅನುಮಾನ ಕೂಡ ಅನೇಕರಲ್ಲಿ ಈಗ ಮನೆ ಮಾಡಿದೆ. ನಿಜಕ್ಕೂ ದರ್ಶನ್ ಹೋಗಿದ್ದು ಯಾಕೆ ? ಮಾಡಿಸಿದ ಪೂಜೆ ಯಾವುದು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದರ್ಶನ್ ಅವರೇ ನೀಡಬೇಕಿದೆ.

More from Filmibeat

Read more about: darshan filmibeat news temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X