ಜೈಲಲ್ಲಿ ದಾಸ ;ದರ್ಶನ್ ಜೈಲುವಾಸ ಮುಕ್ತಾಯವಾಗುತ್ತಾ..? ಮನೆಯೂಟ ಸಿಗುತ್ತಾ..?

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳಿನ ಮೇಲೆ ಒಂದು ವಾರ ಕಳೆದಿದೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದ್ದಾರೆ. ಆ ಪ್ರಾರ್ಥನೆಯ ಫಲಾಫಲ ಇಂದು ಗೊತ್ತಾಗಲಿದೆ.

ಹೌದು. ಇಂದು ದರ್ಶನ್ ಹಾಗೂ ಅವರ ಸಹಚರರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳಲಿದೆ. ಆದರೆ ಈ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ. ಯಾಕೆಂದರೆ, ದರ್ಶನ್​ ಹಾಗೂ ಇತರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ದೊಡ್ಡ ಪಟ್ಟಿಯನ್ನ ಪೊಲೀಸರು ಸಿದ್ಧ ಪಡಿಸಿದ್ದಾರೆ. ಇವತ್ತು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.

kannada-actor-darshan-and-gangs-judicial-custody-ends-today-may-be-extended-again

ಇನ್ನೂ ಇವತ್ತು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್​ರನ್ನ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಮತ್ತೊಂದು ಕಡೆ ಜೈಲು ಊಟಕ್ಕೆ ಬೇಸತ್ತು, ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ದರ್ಶನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಕೂಡ ಇಂದೇ ನಡೆಯಲಿದೆ. ಹೀಗಾಗಿ ದರ್ಶನ್ ಪಾಲಿಗೆ ಇಂದು ಮಹತ್ವದ ದಿನ ಅಂದರೆ ಅದು ತಪ್ಪಲ್ಲ.

ಇನ್ನೂ ದರ್ಶನ್ ಅವರಿಗೆ ಮನೆಯೂಟ ನೀಡುವ ಬಗ್ಗೆ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲು ಸಿದ್ಧರಾಗಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.ಪ್ರಕರಣದ ತನಿಖಾಧಿಕಾರಿಗಳಿಂದಲೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ದರ್ಶನ್​ಗೆ ಮನೆಯೂಟ ಕೊಟ್ರೆ ಇತರೆ ಆರೋಪಿಗಳು ಕೂಡ ಮನೆಯೂಟ ಕೇಳ್ತಾರೆ. ಎಲ್ಲರಿಗೂ ಕೂಡ ಮನೆಯೂಟ ನೀಡೋದಕ್ಕೆ ಸಾಧ್ಯನಾ? ಹಾಗಾಗಿ ಯಾವುದೇ ಕಾರಣಕ್ಕೂ ಮನೆಯೂಟ ನೀಡದಂತೆ ಅಕ್ಷೇಪಣೆ ಸಲ್ಲಿಸಲು ಜೈಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಮಧ್ಯಾಹ್ನದ ಬಳಿಕ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.

Kannada Actor Darshan and Gang s judicial custody ends today may be extended again

ಅಂದ್ಹಾಗೇ ದರ್ಶನ್ ಬಂಧನವಾಗಿ 36 ದಿನಗಳಾಗಿವೆ. ಆದರೆ.. ಇಲ್ಲಿಯವರೆಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿಲ್ಲ. ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿ ಎಂದು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ. ಚಾರ್ಜ್ ಶೀಟ್ ನಂತರ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಇನ್ನೂ.. ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶ ಇರುತ್ತೆ. ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ, ಚಾರ್ಜ್ ಶೀಟ್​ ಸಲ್ಲಿಕೆಗೂ ಮುನ್ನ ಕೊಲೆ ಕೇಸ್​ನಲ್ಲಿ ಬೇಲ್ ಸಿಗೋದಿಲ್ಲ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್​ಗೆ ನ್ಯಾಯಾಂಗ ಬಂಧನವೇ ಗಟ್ಟಿ ಎನ್ನುವ ಮಾತು ಕೇಳಿ ಬರುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X