ದರ್ಶನ್ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯ, ಜಾಮೀನು ಅರ್ಜಿ ಸಲ್ಲಿಸಲು ತಯಾರಿ..!
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಮೂರು ತಿಂಗಳಾಗಿವೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದ್ದಾರೆ. ಆ ಪ್ರಾರ್ಥನೆಯ ಫಲಾಫಲ ಇಂದು ಗೊತ್ತಾಗಲಿದೆ.
ಬೆಂಗಳೂರಿನ 24ನೇ ACMM ಕೋರ್ಟ್‌ನಲ್ಲಿ ವಿಡಿಯೋ ಕಾನ್ಪಡೆನ್ಸ್ ಮೂಲಕ ದರ್ಶನ್ ಮತ್ತು ಸಹಚರರ ವಿಚಾರಣೆ ನಡೆಯಲಿದೆ. ಇನ್ನೂ ಇಲ್ಲಿಯವರೆಗೆ ಎ1 ಪವಿತ್ರಾ ಗೌಡ ಹಾಗೂ ಎ7 ಅನುಕುಮಾರ್ ಜಾಮೀನು ಪಡೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ದರ್ಶನ್ ಮಾತ್ರ ಇನ್ನೂ ಜಾಮೀನು ಸಲ್ಲಿಸಿಲ್ಲ. ಪೊಲೀಸರು ಚಾರ್ಜ್ ಶೀಟ್‌ನ ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆ ಇಂದು ಅಥವಾ ನಾಳೆ ದರ್ಶನ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಯಾಕೆಂದರೆ ದರ್ಶನ್ ಪರ ವಕೀಲರ ಕೈಗೆ ಇಂದು ಚಾರ್ಜ್ ಶೀಟ್ ಸಿಗಲಿದೆ.

ಇನ್ನೂ ರೇಣುಕಾ ಸ್ವಾಮಿ ಅಂಗಲಾಚುತ್ತಿರುವ ಫೋಟೋದಿಂದ ಹಿಡಿದು ದರ್ಶನ್ ವಿರುದ್ಧ ಈಗಾಗಲೇ ಕೆಲ ವಿಚಾರ ಸಂಚಲನ ಸೃಷ್ಟಿಸಿದ್ದು ಇಂದು ಅಥವಾ ನಾಳೆ ಮತ್ತೊಂದಿಷ್ಟು ವಿಚಾರಗಳು ಹೊರ ಬರಲಿವೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನೂ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ವಿಜಯಲಕ್ಷ್ಮೀ ದರ್ಶನ್ ಮತ್ತು ದಿನಕರ್ ತೂಗುದೀಪ್ ಈ ಹಿಂದೆ ಭೇಟಿಯಾಗಿದ್ದು ಅವರ ಜೊತೆ ಜಾರ್ಮಿನು ಅರ್ಜಿಯ ಕುರಿತು ಚರ್ಚೆಯನ್ನು ಮಾಡಿದ್ದಾರೆ ಎನ್ನುವ ಸುದ್ದಿಯೂ ಇದೆ. ಇನ್ನೊಂದು ಕಡೆ ಪವಿತ್ರಾ ಗೌಡ ಮತ್ತು ಅನುಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಕೂಡ ಇಂದು ವಿಚಾರಣೆಗೆ ಬರುವ ಸಂಭವ ಇದೆ.
ಉಳಿದಂತೆ ಜೈಲಿನಲ್ಲಿರುವ ದರ್ಶನ್ ಒಂದಾದ ಮೇಲೊಂದು ಬೇಡಿಕೆಗಳನ್ನು ಇಡುತ್ತಿದ್ದಾರೆ. ಮೊದಲುಸರ್ಜಿಕಲ್ ಚೇರ್ ಕೊಡಿ, ವೆಸ್ಟರ್ನ್ ಟಾಯ್ಲೆಟ್ ಕೊಡಿ, ಟಿವಿ ಕೊಡಿ ಎಂದು ಕೇಳಿದ್ದ ದರ್ಶನ್ ಈಗ ಚಪಾತಿ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಇದೆ.ದೇಹದ ಫಿಟ್ನೆಸ್‌ಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಪಾತಿ ನೀಡುವಂತೆ ದರ್ಶನ್ ಬೇಡಿಕೆ ಇಟ್ಟಿದ್ದು ಈ ಕುರಿತು ಪರಿಶೀಲಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಅಂದ್ಹಾಗೇ ಜೈಲು ನಿಯಮದ ಪ್ರಕಾರ ಒಬ್ಬ ಜೈಲು ಕೈದಿಗೆ ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ನೀಡಬೇಕು ಎನ್ನುವ ನಿಯಮವಿದೆ. ಚಪಾತಿ, ಮುದ್ದೆ, ರೊಟ್ಟಿ, ತಿಂಡಿ ಎಲ್ಲವನ್ನೂ ಇಂತಿಷ್ಟೇ ಪ್ರಮಾಣದಲ್ಲಿ ನೀಡಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಎನ್ನುವುದು ಜೈಲಿನ ನಿಯಮವನ್ನು ಮೀರಿದ ಬೇಡಿಕೆಯಾಗಿದೆ. ಹೀಗಾಗಿ ದರ್ಶನ್ ಬೇಡಿದ್ದನ್ನೆಲ್ಲವೂ ಜೈಲಾಧಿಕಾರಿಗಳು ನೀಡಲು ಸಾಧ್ಯವಾಗದೇ ಇರಬಹುದು. ಮನೆಯ ಊಟಕ್ಕೆ ದರ್ಶನ್ ಆಕ್ರಂದನ ಮತ್ತೊಮ್ಮೆ ಮುಗಿಲು ಮುಟ್ಟಿದರೂ ಮುಟ್ಟಬಹುದು.


Click it and Unblock the Notifications











