ಕೀನ್ಯಾದ ಕಾಡಿನಲ್ಲಿ ಡಿ ಬಾಸ್ ವೈಲ್ಡ್ ಲೈಫ್ ಫೋಟೋಗ್ರಫಿ

Recommended Video

ಕಿನ್ಯಾದಲ್ಲೂ ಅದೇ ಪ್ರೀತಿ ಮುಂದುವರೆಸಿದ ಡಿ ಬಾಸ್ | Darshan | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕೀನ್ಯಾದಲ್ಲಿ ಬೀಡಿಬಿಟ್ಟಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ನೀಡಿ ಡಿ ಬಾಸ್ ಕೀನ್ಯಾಗೆ ತೆರಳಿ ಫೋಟೋಗ್ರಫಿಯಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ದರ್ಶನ್ ಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದ್ರೆ ತುಂಬ ಇಷ್ಟ. ಆಗಾಗ ಬಿಡುವಿದ್ದಾಗ ಕ್ಯಾಮರಾ ಹಿಡಿದು ಪ್ರಾಣಿಗಳನ್ನು ಸೆರೆಹಿಡಿಯುತ್ತಿರುತ್ತಾರೆ ದರ್ಶನ್.

ಕೀನ್ಯಾದ Maasai Mara ಎಂಬ ರಾಷ್ಟ್ರೀಯ ಉದ್ಯಾನವನಕ್ಕೆ ದರ್ಶನ್ ಭೇಟಿ ನೀಡಿ ಅಲ್ಲಿನ ಪ್ರಾಣಿಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದಾರೆ. ದರ್ಶನ್ ಫೋಟೋಗ್ರಫಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ನೇಹಿತರ ಜೊತೆ ತೆರಳಿರುವ ದರ್ಶನ್ ಫೋಟೋ ಕ್ಲಿಕ್ಕಿಸುವ ಜೊತೆಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ದರ್ಶನ್ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಡಿ ಬಾಸ್ ಪ್ರಾಣಿಗಳ ಫೋಟೋಗಳನ್ನು ಸೆರೆಹಿಡಿದು ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡಿದ್ದರು. ಆದ್ರೆ ಈ ಬಾರಿ ಕೀನ್ಯಾದಲ್ಲಿ ಸೆರೆಹಿಡಿದ ಫೋಟೋಗಳನ್ನು ಮಾರಟಕ್ಕಿಟ್ಟು ಹಣವನ್ನು ಅರಣ್ಯ ಇಲಾಖೆಕೆಗೆ ನೀಡುವ ಯೋಚನೆ ಇದಿಯೋ ಗೊತ್ತಿಲ್ಲ. ಆದ್ರೆ ದೂರದ ಕೀನ್ಯಾದಲ್ಲಿ ಫೋಟೋಗ್ರಫಿ ಎಂಜಾಯ್ ಮಾಡುತ್ತಿದ್ದಾರೆ.

Kannada Actor Darshan Capture Wildlife In Kenya Forest

ದರ್ಶನ್ ಸದ್ಯ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಿರುವ ಚಿತ್ರತಂಡ ಈಗ ಕೊಂಚ ಬ್ರೇಕ್ ನೀಡಿದೆ. ಇನ್ನು ದರ್ಶನ್ ಅಭಿನಯದ ಒಡೆಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದಾದ ಬಳಿಕ ಗಂಡುಗಲಿ ಮದಕರಿ ನಾಯಕ ಸಿನಿಮಾ ಪ್ರಾರಂಭವಾಗಲಿದೆ.

More from Filmibeat

English summary
Kannada actor Darshan capture wildlife in Kenya forest.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X