'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!
Recommended Video

ಸದ್ಯ, ಗಾಂಧಿನಗರದಲ್ಲಿ ಎಲ್ಲೇ ನೋಡಿದ್ರು ಒಂದೇ ಟಾಕ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿರುವ 'ಲಂಬೋರ್ಗಿನಿ' ಕಾರು ಅಷ್ಟು ಬೆಲೆಯಂತೆ....ಅಷ್ಟು ವೇಗವಂತೆ.....ಯಾರ ಹತ್ರಾನೂ ಇಲ್ವಂತೆ....ಹಾಗಂತೆ, ಈಗಂತೆ ಎಂದು ಕಾರ್ ಬಗ್ಗೆ ಗೊತ್ತಿಲ್ಲದವರು ಕೂಡ ಮಾತನಾಡುತ್ತಿದ್ದಾರೆ.
ದಾಸ ಈಗ ಕೊಂಡುಕೊಂಡಿರುವ ಲಂಬೋರ್ಗಿನಿ ಕಾರಿನ ಬೆಲೆ ಸುಮಾರು 5.8 ಕೋಟಿ. ಅಂದ್ಹಾಗೆ, ದರ್ಶನ್ ಗೆ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಇದೆ. ಮಾರುಕಟ್ಟೆಗೆ ಯಾವುದಾದರೂ ಹೊಸ ಕಾರ್ ಬಂದ್ರೆ, ಅದನ್ನ ತನ್ನದಾಗಿಸಿಕೊಳ್ಳಬೇಕು ಎನ್ನುವ ಛಲ. ಅದಕ್ಕೆ ದಾಸನ ಬಳಿ ಇರುವ ಐಷರಾಮಿ ಕಾರುಗಳೇ ಸಾಕ್ಷಿ.
ಅಷ್ಟಕ್ಕೂ, ದಚ್ಚು ಬಳಿ ಎಷ್ಟು ಕಾರ್ ಗಳಿವೆ ಗೊತ್ತಾ? ಯಾವ ಯಾವ ಬ್ರ್ಯಾಂಡ್ ಕಾರುಗಳಿವೆ ಗೊತ್ತಾ? ಒಂದೊಂದು ಕಾರಿನ ಬೆಲೆ ಎಷ್ಟಿರಬಹುದು ಗೊತ್ತಾ? ಇಷ್ಟೆಲ್ಲಾ ಕುತೂಹಲ ನಿಮಗೆ ಇದ್ದರೇ, ಈ ಸ್ಟೋರಿ ಪೂರ್ತಿ ಓದಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಇದೆ....ಮುಂದೆ ಓದಿ....

'ಜಾಗ್ವಾರ್'ಗೆ ಒಡೆಯ
ದರ್ಶನ್ ಬಳಿ ನೀಲಿ ಬಣ್ಣದ ಜಾಗ್ವಾರ್ ಕಾರ್ ಇದೆ. ಇದು ಪತ್ನಿ ವಿಜಯಲಕ್ಷ್ಮಿ, ತಮ್ಮ ಪ್ರೀತಿಯ ಪತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದರು.

Porsche ಕಾರ
ನಿರ್ಮಾಪಕ ಸಂದೇಶ ನಾಗರಾಜ್ ಅವರು, ದರ್ಶನ್ ಬರ್ತಡೇಗೆ ಅತ್ಯಂತ ದುಬಾರಿ Porsche ಕಾರ್ ನ್ನ ಗಿಫ್ಟ್ ಆಗಿ ನೀಡಿದ್ದರು.

ಆಡಿ ಕ್ಯೂ 7
ದರ್ಶನ್ ಅವರ ಬಳಿ ಎರಡು ಆಡಿ ಕಾರುಗಳಿವೆ. ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣದ ಆಡಿ ಕಾರ್ ಗಳು ದಾಸನ ಬಳಿ ಇದೆ. ಒಂದನ್ನ ಪತ್ನಿ ವಿಜಯಲಕ್ಷ್ಮಿ ಬಳಸುತ್ತಿದ್ದರು, ಇನ್ನೊಂದು ದರ್ಶನ್ ಬಳಸುತ್ತಿದ್ದರು.

ಐ - 20
ಇನ್ನು ದರ್ಶನ್ ಅವರ ಮನೆಯಲ್ಲಿ i 20 ಕಾರ್ ಕೂಡ ಇದೆ. ಈ ಕಾರನ್ನ ದರ್ಶನ್ ಅವರ ಮಗ ವಿನೀಶ್ ಮಾತ್ರ ಬಳಸುತ್ತಾರೆ.

ರೇಂಜ್ ರೋವರ್
ಚಾಲೆಂಜಿಂಗ್ ಸ್ಟಾರ್ ದರ್ಶನ ಬಳಿ ರೇಂಜ್ ರೋವರ್ ಕಾರು ಇದ್ದಿದ್ದನ್ನ ಕೂಡ ಗಮನಿಸಬಹುದು. ಕಳೆದ ವರ್ಷದ ದಸರಾ ಹಬ್ಬದಲ್ಲಿ ಮನೆ ಮುಂದೆ ಎಲ್ಲ ಕಾರುಗಳು ಪೂಜೆಗೆ ನಿಂತಿದ್ದವು.

ಫಾರ್ಚೂನರ್ ಮತ್ತು ಬೆಂಜ್
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಬಳಿ ಬೆಂಜ್ ಕಾರು ಕೂಡ ಇದೆ. ಅದರ ಜೊತೆಗೆ ದುಬಾರಿ ಫಾರ್ಚೂನರ್ ಕಾರ್ ಇದೆ.

ಮಿನಿ ಕೂಪರ್
ಇಷ್ಟೆಲ್ಲಾ ಕಾರುಗಳನ್ನ ಹೊಂದಿರುವ ದರ್ಶನ್ ಬಳಿ 'ಮಿನಿಕೂಪರ್ ಕಾರ್' ಕೂಡ ಇದೆ. ಈ ಕಾರಿನಲ್ಲಿ ದರ್ಶನ್ ಸುತ್ತಾಡಿರುವುದು ಈ ಹಿಂದೆ ಹಲವು ಬಾರಿ ನೋಡಿದ್ದೇವೆ.

ಹಮ್ಮರ್
ಇದುವರೆಗೂ ದರ್ಶನ್ ಅವರ ಬಳಿದ್ದ ದುಬಾರಿ ಕಾರು ಅಂದ್ರೆ, ಅದು ಹಮ್ಮರ್. ದುಬೈಯಿಂದ ಈ ಕಾರನ್ನ ತರಿಸಿಕೊಳ್ಳಲಾಗಿತ್ತು. ಆದ್ರೀಗ, ಈ ಕಾರನ್ನ ಮಾರಟ ಮಾಡಿದ್ದಾರೆ ಎನ್ನಲಾಗಿದೆ. ಅದರ ಬಲದಲಾಗಿದೆ ಲಂಬೋರ್ಗಿನಿ ಕೊಂಡುಕೊಂಡಿದ್ದಾರಂತೆ.

ಲಂಬೋರ್ಗಿನಿ
ಅತಿ ಹೆಚ್ಚು ಬೆಲೆಯ ಕಾರು ಲಂಬೋರ್ಗಿನಿ ಈಗ ಚಕ್ರವರ್ತಿಯ ಮನೆ ಸೇರಿದೆ. ಇತ್ತಿಚೇಗಷ್ಟೆ ಈ ಕಾರನ್ನ ದರ್ಶನ್ ಖರೀದಿಸಿದ್ದು, ದೊಡ್ಡ ಸುದ್ದಿಯಾಗಿತ್ತು. ಒಟ್ನಲ್ಲಿ, ದರ್ಶನ್ ಬಳಿ ಇಷ್ಟೆಲ್ಲ ಕಾರುಗಳಿದ್ದು, ದಾಸನ ಕಾರ್ ಕ್ರೇಜ್ ಹೇಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ.


Click it and Unblock the Notifications











