ವಿರೋಧಿಗಳಿಗೆ ಬಹಿರಂಗ ಪತ್ರ ಬರೆದ ದರ್ಶನ್ ಅಭಿಮಾನಿಗಳು
Recommended Video
ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ವಾರ್ ತಾರಕಕ್ಕೇರಿದೆ. ಪೈಲ್ವಾನ್ ಸಿನಿಮಾ ರಿಲೀಸ್ ಆದ್ಮೇಲೆ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ನಡೆಸುತ್ತಿದ್ದಾರೆ.
ಸುದೀಪ್ ಅಭಿಮಾನಿಗಳು ಏನಾದರು ಪೋಸ್ಟ್ ಮಾಡಿದ್ರೆ ಅದರ ಕೆಳಗೆ ದರ್ಶನ್ ಅಭಿಮಾನಿಗಳ ಕಮೆಂಟ್ ಸಾಲಾಗಿ ಬಂದಿರುತ್ತೆ. ಇತ್ತ ದರ್ಶನ್ ಅಭಿಮಾನಿಗಳು ಏನಾದರು ಪೋಸ್ಟ್ ಮಾಡಿದ್ರೆ ಸಾಕು ಸುದೀಪ್ ಅಭಿಮಾನಿಗಳ ಕಮೆಂಟ್ ಇರುತ್ತೆ. ಮೊನ್ನೆಯಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಗೆ ಸುದೀಪ್ ಅಭಿಮಾನಿಗಳು ಬೆಂಬಲಿಸಿ ಪ್ರತಿ ಟ್ವೀಟ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಪೈಲ್ವಾನ್ ಸಿನಿಮಾ ಪೈರಸಿಯಾದ ಬಗ್ಗೆಯು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಆರೋಪ ದರ್ಶನ್ ಅಭಿಮಾನಿಗಳ ಮೇಲೆ ಬಂದಿದೆ. ಇದರಿಂದ ರೊಚ್ಚಿಗೆದ್ದಿರುವ ಡಿ ಬಾಸ್ ಫ್ಯಾನ್ಸ್ ಸುದೀಪ್ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
"ದರ್ಶನ್ ವಿರೋಧಿಗಳಿಗೆ ಮತ್ತು ಅವರ ಫ್ಯಾನ್ಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನಟ ಮತ್ತು ಅವರ ಅಭಿಮಾನಿಗಳಿಗೆ ನಮ್ಮ ಬಹಿರಂಗ ಪತ್ರ. ನಿಮ್ಮ ಬೆಳವಣಿಗೆಗಾಗಿ ದರ್ಶನ್ ಹೆಸರು ಬಳಸಿಕೊಂಡಿದ್ದು ಇತಿಹಾಸ, ಇವಾಗ ನಿಮ್ಮ ಸಿನಿಮಾ ಪ್ರಚಾರಕ್ಕಾಗಿ ದರ್ಶನ್ ಫ್ಯಾನಸ್ ಹೆಸರು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ"

ಸ್ನೇಹ ಬೇಡ ಅಂದ್ರು ದರ್ಶನ್ ಬಗ್ಗೆ ಮಾತು ಯಾಕೆ?
"ನಮ್ಮ ನಟ ನಿಮ್ಮನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿನಿಮ್ಮ ಸ್ನೇಹ ಬೇಡವೆಂದು ಸಹ ಇಷ್ಟು ದಿನ ದರ್ಶನ್ ಬಗ್ಗೆ ಮಾತಾಡಿ ಪ್ರಚಾರ ಪಡೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಫ್ಯಾನ್ಸ್ ವಾರ್ ಪರಿಚಯಿಸಿದ್ದು ನೀವು. ಮುಂಗಾರು ಮಳೆ ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ನೀವು, ಶಿವಣ್ಣ ಫ್ಯಾನ್ಸ್ ಜೊತೆ ರಾಜ್ ಕಪ್ ನಲ್ಲಿ ಜಗಳವಾಡಿದ್ದು ನೀವು, ಯಶ್ ವಿರುದ್ಧ ಏಕವಚನ ಪದದ ವಿರುದ್ಧ ಹೇಳಿಕೆ ನೀಡಿ ಚಿತ್ರರಂಗವನ್ನು ಎರಡು ಭಾಗ ಮಾಡಿದ್ದು ನೀವು. ಲಾಭಕ್ಕಾಗಿ ದರ್ಶನ್ ಫ್ಯಾನ್ಸ್ ಬಳಸಿಕೊಳ್ಳುತ್ತಿದ್ದೀರಾ"

ಅವಾಚ್ಯ ಪದದ ಟ್ವೀಟ್ ಕಾಣುತ್ತಿಲ್ಲವೇ?
"ಸದಾ ಟ್ವಿಟ್ಟರ್ ನಲ್ಲಿ ಎಲ್ಲವನ್ನು ಗಮನಿಸುವ ನಿಮಗೆ ನಿಮ್ಮ ಅಭಿಮಾನಿಗಳು ದರ್ಶನ್ ವಿರುದ್ಧ ಅವಾಚ್ಯ ಪದದ ಟ್ವೀಟ್ ನಿಮ್ಮ ಖಾತೆಯಲ್ಲಿ ಮಾಡುತ್ತಿರುವುದು ನಿಮಗೆ ಕಾಣುತ್ತಿಲ್ಲವೆ, ಅಥವಾ ಇದಕ್ಕೆ ನಿಮ್ಮ ಪರೋಕ್ಷ ಬೆಂಬಲವಿದೆಯೇ. ಚಿತ್ರಕ್ಕೆ ತೊಂದರೆಯಾದರೆ ಕಾನೂನು ಸಮರ ನಡೆಸಿ"

ಅವರೇನೆ ಮಾಡಿದರು ನೋಡಿ ಸುಮ್ಮನಾಗಿ
"ಯಾರೋ ಕಿಡಿಗೇಡಿಗಳು ನಮ್ಮ ಬಗ್ಗೆ ಮಾತನಾಡಿದರೆ ಸುಮ್ಮನಾಗಿ, ಅವರಿಗೆಲ್ಲ ಪ್ರಚಾರದ ತೆಲವು, ಅವರ ಬಗ್ಗೆ ಹೆಚ್ಚು ಮಾತು ಬೇಡ, ಅವರೇನೆ ಮಾಡಿದರು ನೋಡಿ ಸುಮ್ಮನಾಗಿ, ಕೆಳಮಟ್ಟದ ಮನಸ್ಥಿತಿಯವರಿಗೆ ಉತ್ತರ ನೀಡಿ ಪ್ರಚಾರ ನೀಡೋದು ಬೇಡ ಎಲ್ಲಾ ವಿವಾದಕ್ಕೆ ಇಂದೆ ಅಂತಿಮ ತೆರೆ"


Click it and Unblock the Notifications











