twitter
    For Quick Alerts
    ALLOW NOTIFICATIONS  
    For Daily Alerts

    ''150 ಕೋಟಿ ಯಾರಪ್ಪನ ಮನೆ ದುಡ್ಡು'' - ಗುಡುಗಿದ ಗಜ

    |

    Recommended Video

    Mandya: ಪ್ರಚಾರದ ಕೊನೇ ದಿನ ದರ್ಶನ ಮಂಡ್ಯದ ಜನತೆಗೆ ಹೇಳಿದ್ದೇನು?

    ''ನಾವು ಯಾವುದಕ್ಕೂ ಬೇಜಾರು ಆಗಲ್ಲ.. ಕೋಪ ಮಾಡಿಕೊಳ್ಳಲ್ಲ.. ನೊಂದುಕೊಳ್ಳುವುದಿಲ್ಲ...'' ಎಂದು ಮಂಡ್ಯ ಚುನಾವಣಾ ಪ್ರಚಾರ ನಡುವೆ ಸಾಕಷ್ಟು ಬಾರಿ ದರ್ಶನ್ ಹೇಳಿದ್ದರು. ಆದರೆ, ಇಂದು ಅಂತಿಮವಾಗಿ ತಮ್ಮ ಮನಸಿನ ಮಾತನ್ನು ಜನತೆ ಮುಂದೆ ಹೇಳಿಕೊಂಡಿದ್ದಾರೆ.

    ಮಂಡ್ಯದ ತುಂಬ ಸುಮಲತಾ ಅಂಬರೀಶ್ ಪರ ಇಷ್ಟು ದಿನಗಳ ಕಾಲ ದರ್ಶನ್ ಹಾಗೂ ಯಶ್ ಪ್ರಚಾರವನ್ನು ನಡೆಸಿದರು. ಇಂದು ಬಹಿರಂಗ ಪ್ರಚಾರದ ಅಂತಿಮ ದಿನವಾಗಿದ್ದು, ಬೃಹತ್ ಸಭೆಯಲ್ಲಿ ಗಜ ಗುಡಿಗಿದರು.

    ''ನೀವು ಮಾಡಿದ ಕೆಲಸದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಬಿಟ್ಟು ಏನೇನೋ ಹೇಳುತ್ತಾರೆ.'' ಎಂದಿರುವ ದರ್ಶನ್ ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ. ಕೈ ಮುಗಿದು ಸುಮಲತಾ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.

    ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ

    ಇಂದು ಮಂಡ್ಯ ಸಿಲ್ವರ್ ಜ್ಯುಬ್ಲಿ ಪಾರ್ಕ್ ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ದರ್ಶನ್ ಆಡಿದ ಮಾತುಗಳು ಮುಂದಿವೆ ಓದಿ....

    ಅಮ್ಮನ ಜೊತೆಗೆ ಜೋಡೆತ್ತುಗಳು

    ಅಮ್ಮನ ಜೊತೆಗೆ ಜೋಡೆತ್ತುಗಳು

    ''ಯಾವಾಗ ಅಮ್ಮ ಚುನಾವಣೆಗೆ ನಿಲ್ಲುತ್ತೇವೆ ಅಂದರೋ ಅಂದೇ ನಿಮ್ಮ ಬೆನ್ನ ಹಿಂದೆ ಇರುತ್ತೇವೆ ಎಂದು ಹೇಳಿದೆ. ಆ ಮನೆಯ ಎಲ್ಲ ಸುಖದಲ್ಲಿ ನಾವು ಇದ್ದೆವು. ಅದೇ ರೀತಿ ದುಖಃದಲ್ಲೂ ಇದ್ದೆವೇ. ಅಮ್ಮನ ಜೊತೆಗೆ ಜೋಡೆತ್ತುಗಳ ಹಾಗೆ ನಿಂತರೆ ಅದರಲ್ಲಿ ಏನು ತಪ್ಪೇನು?

    ಸಿನಿಮಾದವರು ಅಂತ್ತಾರೆ, ಹಾಗಾದರೆ ಇವರು ಯಾರು?

    ಸಿನಿಮಾದವರು ಅಂತ್ತಾರೆ, ಹಾಗಾದರೆ ಇವರು ಯಾರು?

    ''ಕಲಾವಿದರು, ಸಿನಿಮಾದವರು ಅಂತ್ತಾರೆ, ಹಾಗಾದರೆ ಇವರು ಯಾರು?. 50 ಕೋಟಿ ಹಾಕಿ ಸಿನಿಮಾ ಮಾಡಿದರು. ಅದನ್ನು ಬಿಟ್ಟು ಮಂಡ್ಯ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮ ಕಟ್ಟಿಸಿದ್ದರೆ ಇವತ್ತು ವೋಟ್ ಕೇಳಲು ಬರುವ ಹಾಗೆ ಇರಲಿಲ್ಲ. ಅದನ್ನು ಬಿಟ್ಟು ಸಿನಿಮಾ ಮಾಡಿಸಿದ್ದು ಯಾಕೆ.''

    'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್ 'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್

    ಕುಮಾರಸ್ವಾಮಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ

    ಕುಮಾರಸ್ವಾಮಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ

    ''ನೀವು ಮಾಡಿದ ಕೆಲಸದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಬಿಟ್ಟು ಏನೇನೋ ಹೇಳುತ್ತಾರೆ. ಕುಮಾರಸ್ವಾಮಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಏಕೆಂದರೆ, ಇಷ್ಟು ದಿನ ನೂರು ಜನ ಇದ್ದರೆ ಅದರಲ್ಲಿ ಹತ್ತು ಜನ ಡಿ ಬಾಸ್ ಅಂತ ಕರೆಯುತ್ತಿದ್ದರು. ಆದರೆ, ಈಗ ಎಲ್ಲರೂ ಡಿ ಬಾಸ್ ಅಂತ್ತಾರೆ.''

    ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ

    ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ

    ''ನಾವು ನಮ್ಮ ಅಮ್ಮನಿಗಾಗಿ ಇನ್ನೊಂದು ಹಂತಕ್ಕೆ ಬೇಕಾದರೂ ಹೋಗುತ್ತೇವೆ. ಇನ್ನು ಎರಡು ದಿನ ಯೋಧರ ರೀತಿ ಕೆಲಸ ಮಾಡೋಣ. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ಅಮ್ಮನಿಗೆ ಒಳ್ಳೆಯದು ಮಾಡಿದರೆ, ಇಂಡಿಯಾ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಂಡ್ಯ ಅಂದರೆ ಏನು ಅಂತ ತಿಳಿಯುವಂತೆ ಮಾಡುತ್ತಾರೆ.''

    ದುಡ್ಡಿಗೆ ನಿಮ್ಮ ಮತ ಮಾರಿಕೊಳ್ಳಬೇಡಿ

    ದುಡ್ಡಿಗೆ ನಿಮ್ಮ ಮತ ಮಾರಿಕೊಳ್ಳಬೇಡಿ

    ''ಕೊನೆಯದಾಗಿ ಹೇಳುತ್ತೇನೆ ಒಂದು ಒಳ್ಳೆಯ ಜೋಡೆತ್ತು ಒಂದುವರೆ ಲಕ್ಷ, ಹಾಲು ಕರೆಯುವ ಹಸು 75 - 80 ಸಾವಿರ, ಕುರಿ 15 - 20 ಸಾವಿರ, ನಾಯಿ ಸಾಯಬೇಕು ಅಂದರೂ 5 ಸಾವಿರ. ಹೀಗಿರುವಾಗ ನಿಮ್ಮ ವೋಟ್ ಅನ್ನು 500 - 1000 ರೂಪಾಯಿಗೆ ಮಾರೀಕೊಳ್ಳಬೇಡಿ. ದಯಮಾಡಿ ನಿಮ್ಮ ಕೆಲಸ ಅಂತ ತಿಳಿದು ಮಾಡಿ. ಅಮ್ಮನಿಗೆ ಒಳ್ಳೆಯದು ಮಾಡಿದರೆ ಸಾಯುವವರೆಗೆ ಚಿರಋಣಿಯಾಗಿರುತ್ತೇನೆ.''

    English summary
    Kannada actor, Darshan expressed outrage in mandya campaign. today is last day for campaigning.
    Tuesday, April 16, 2019, 18:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X