»   » 'ಮಧುರ ಸ್ವಪ್ನ'ದ ಗುಂಗಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಮಧುರ ಸ್ವಪ್ನ'ದ ಗುಂಗಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಇದೇ ವಾರ ತೆರೆ ಕಾಣುತ್ತಿರುವ ಹೊಸಬರ ಸಿನಿಮಾ 'ಮಧುರ ಸ್ವಪ್ನ'ಕ್ಕೆ ಇದೀಗ ಡಬಲ್ ಧಮಾಕಾ ಅಂದರೂ ತಪ್ಪಾಗಲ್ಲಾ, ಯಾಕಂತೀರಾ, ನಟ-ನಟಿ ಸೇರಿದಂತೆ ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರದ ವಿತರಣಾ ಹಕ್ಕನ್ನು ವಹಿಸಿಕೊಂಡಿದ್ದು, ತೂಗುದೀಪ ಪ್ರೊಡಕ್ಷನ್ಸ್.

ಅಂದಹಾಗೆ ಇದೊಂದು ಚಿತ್ರದ ಪ್ಲಸ್ ಪಾಯಿಂಟ್ ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಕೊನೆಯ ಭಾಗದಲ್ಲಿ ಧ್ವನಿ ಕೊಟ್ಟಿದ್ದು ಚಿತ್ರಕ್ಕೆ ಸಿಕ್ಕಿರುವ ಇನ್ನೊಂದು ಪಾಯಿಂಟ್. ನವ ನಿರ್ದೇಶಕ ರವಿರತ್ನ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾ ಫೆಬ್ರವರಿ 19, ಶುಕ್ರವಾರದಂದು ಇಡೀ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ.[ಈ ವಾರ 7 ಚಿತ್ರಗಳು ರಿಲೀಸ್! ನಿಮ್ಮ ಆಯ್ಕೆ ಯಾವುದು?]


ಇತ್ತೀಚಿನ ದಿನಗಳಲ್ಲಿ ಹೊಸಬರ ಚಿತ್ರಕ್ಕೆ ವಿತರಕರು ಸಿಗುವುದೇ ಕಷ್ಟವಾಗಿರುವಾಗ ತೂಗುದೀಪ ಪ್ರೊಡಕ್ಷನ್ಸ್ ನಂತಹ ಫೇಮಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ಸಿಕ್ಕಿದ್ದೇ ಒಂದು ಪವಾಡ ಅಂತ ಹೇಳಬಹುದು.[ಕಾಪಿಕಾಡ್ ಪುತ್ರನ ಮುದ್ದಾದ ಪ್ರೇಮಕಥೆ 'ಮಧುರ ಸ್ವಪ್ನ']


ಇವಿಷ್ಟು ಸಾಲದೆಂಬಂತೆ ಇದೀಗ ಚಿತ್ರಕ್ಕೆ ನಟ ದರ್ಶನ್ ಅವರು ತಮ್ಮ ಧ್ವನಿ ನೀಡಿದ್ದಾರೆ. ಇದೀಗ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಧ್ವನಿ ನೀಡಿರುವುದರಿಂದ ಫುಲ್ ಖುಷ್ ಆಗಿರುವ ಹೊಸಬರ ಚಿತ್ರತಂಡ ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡುವ ಜೋಷ್ ನಲ್ಲಿದೆ. ಮುಂದೆ ಓದಿ ಕೆಳಗಿನ ಸ್ಲೈಡುಗಳಲ್ಲಿ...


ಸಿನಿಮಾ ನೋಡಿದ ದರ್ಶನ್

ಇತ್ತೀಚೆಗೆ 'ಮಧುರ ಸ್ವಪ್ನ' ಚಿತ್ರತಂಡದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆದು ಚಿತ್ರ ತೋರಿಸಿದ್ದಾರೆ. ಚಿತ್ರ ನೋಡಿದ ಅವರಿಗೆ ಕೊನೆಯಲ್ಲಿ ಒಂದು ಧ್ವನಿ ಇದ್ದರೆ ಚೆನ್ನಾಗಿರುತ್ತದೆ ಎಂದೆನಿಸಿತಂತೆ, ಅದಕ್ಕಾಗಿ ತಾವೇ ಒಂದಷ್ಟು ವಾಕ್ಯಗಳನ್ನು ಬರೆದು, ಅದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.[ನಟ ದರ್ಶನ್ ಹುಟ್ಟುಹಬ್ಬದ ದಿನ ಎಂತಹ ದುರಂತ]


ತುಳು ನಟ ಅರ್ಜುನ್ ಕಾಪಿಕಾಡ್

ತುಳು ಚಿತ್ರರಂಗದ ಖ್ಯಾತ ನಟ ಕಮ್ ನಿರ್ದೇಶಕ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರ ಮಗ ತುಳು ನಟ ಅರ್ಜುನ್ ಕಾಪಿಕಾಡ್ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 'ರಂಗ್', 'ತೆಲಿಕೆದ ಬೊಳ್ಳಿ', 'ದಂಡ್', 'ಚಂಡಿಕೋರಿ', ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದು, ಕರಾವಳಿ ಪ್ರದೇಶ ಮಂಗಳೂರಿನಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.


ಇಬ್ಬರು ನಾಯಕಿಯರು

ಹೊಸ ಪ್ರತಿಭೆಗಳಾದ ನಟಿ ಕೀರ್ತನಾ ಪೊದ್ವಾಲ್ ಮತ್ತು ನಟಿ ಮಹಾಲಕ್ಷ್ಮಿ ಎಂಬ ಇಬ್ಬರು ನಾಯಕಿಯರು ನಟ ಅರ್ಜುನ್ ಕಾಪಿಕಾಡ್ ಗೆ ಸಾಥ್ ನೀಡಿದ್ದು ಇವರೂ ಕೂಡ ಕನ್ನಡ ಸಿನಿ ಕ್ಷೇತ್ರಕ್ಕೆ ಹೊಸಬರು.


ತಾರಾಗಣದಲ್ಲಿ ಘಟಾನುಘಟಿಗಳು

ಇನ್ನುಳಿದಂತೆ ನಟ ಅವಿನಾಶ್, ನಟಿ ವಿನಯಾ ಪ್ರಸಾದ್, ಅಶೋಕ್, ಮುಖ್ಯಮಂತ್ರಿ ಚಂದ್ರು, ರಾಮಕೃಷ್ಣ ಹಾಗೂ ಶಾಸಕ ಸೋಮಶೇಖರ್ ಮುಂತಾದ ಸ್ಯಾಂಡಲ್ ವುಡ್ ಕ್ಷೇತ್ರದ ಘಟಾನುಘಟಿಗಳು ಚಿತ್ರದ ಪ್ರಮುಖ ತಾರಾಗಣದಲ್ಲಿ ಮಿಂಚಿದ್ದಾರೆ.


ಪಕ್ಕಾ ಫ್ಯಾಮಿಲಿ ಎಂರ್ಟಟೈನರ್

ನಿರ್ಮಾಪಕ ಹೆಚ್.ಎಮ್ ಸಂಜೀವ್ ಕುಮಾರ್ ಬಂಡವಾಳ ಹೂಡಿರುವ ಈ ಸಿನಿಮಾ ಎಲ್ಲಾ ಕುಟುಂಬದವರು ಒಟ್ಟಾಗಿ ಕುಳಿತು ನೋಡಬಹುದಾದ ಸಿನಿಮಾ. ತೆಲುಗು ಭಾಷೆಯಲ್ಲಿ "ಅನಿತಾ ಓ ಅನಿತಾ...." ಹಾಡಿನಿಂದ ಖ್ಯಾತಿ ಪಡೆದ ರವಿ ಕಲ್ಯಾಣ್ ಅವರನ್ನು ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಬರಮಾಡಿಕೊಂಡಿದ್ದು, ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ 7 ಸುಂದರವಾದ ರೋಮ್ಯಾಂಟಿಕ್ ಹಾಡುಗಳಿವೆ.


English summary
Kannada Actor Darshan giving voice to Kannada movie Madhura Swapna. Actor Arjun Kapikad, Actress Keerthana Podwal in the lead role. The movie is directed by Ravirathnam Karamala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada