ಬೆಳಿಗ್ಗೆಯೇ ಬಿಸಿಲೂರಿನ ದರ್ಶನ, ಬಿಗಿಭದ್ರತೆಯಲ್ಲಿ ಹೇಗಿತ್ತು ದಾಸನ ಪ್ರಯಾಣ...?

By ಫಿಲ್ಮಿಬೀಟ್ ಡೆಸ್ಕ್

ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಕುಂತು ಕಾನೂನು ವ್ಯವಸ್ಥೆಯ ಮೇಲೆ ವಿಶ್ವಾಸ ಕುಂದುವತೆ ಮಾಡಿದ ದರ್ಶನ್ ಅವರನ್ನು ಇಂದು ಬೆಳ್ಳಂ ಬೆಳ್ಳಿಗ್ಗೆ ಬಿಸಿಲೂರು ಬಳ್ಳಾರಿಗೆ ಕರೆದೊಯ್ಯಲಾಗಿದೆ. ಬೆಂಗಳೂರಿನ ನ್ಯಾಯಾಲಯದಿಂದ ಅನುಮತಿ ಸಿಕ್ಕ ನಂತರ ಇಂದು ಬೆಳ್ಳಿಗ್ಗೆ 04-30ಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭ ಮಾಡಿದ ಪೊಲೀಸರು ಬಿಗಿ ಭಧ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ಕರೆದೊಯ್ದಿದ್ದಾರೆ.

ಎಸಿಪಿ ಭರತ್ ರೆಡ್ಡಿಯವರ ನೇತೃತ್ವದಲ್ಲಿ ದರ್ಶನ್ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಅಭಿಮಾನಿಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಎರಡು ಸಲ ಮಾರ್ಗವನ್ನು ಬದಲಿಸಲಾಗಿದೆ ಎನ್ನುವ ಸುದ್ದಿ ಇದೆ. ಆರಂಭದಲ್ಲಿ ಬೆಂಗಳೂರು - ತುಮಕೂರು- ಚಳ್ಳಕೆರೆ ಮೂಲಕ ಮೊಳಕಾಲ್ಮುರು ಮತ್ತು ರಾಂಪುರ ತಲುಪಿ ಅಲ್ಲಿಂದ ಬಳ್ಳಾರಿಗೆ ಹೋಗಲು ಪೊಲೀಸರು ನಿರ್ಧಾರ ಮಾಡಿದ್ದರು.

Kannada actor Darshan has been shifted from Parappana Agrahara to Bellary Jail

ಆದರೆ ಆ ನಂತರ ರೂಟ್ ಮ್ಯಾಪ್ ಬದಲಿಸಿದ ಪೊಲೀಸರು ಆಂಧ್ರ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರು. ಪರಪ್ಪನ ಅಗ್ರಹಾರದಿಂದ ಸಿಲ್ಕ್ ಬೋರ್ಡ್ , ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ದೇವನಹಳ್ಳಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಪೆನಗೊಂಡ, ಹಾಗೂ ಅನಂತ ಪುರ ಮಾರ್ಗವಾಗಿ ಬಳ್ಳಾರಿಯನ್ನು ಪ್ರವೇಶಿಸಲು ನಿರ್ಧರಿಸಿದರು.

ಇನ್ನೂ ಪರಪ್ಪನ ಅಗ್ರಹಾರದ ಆಚೆ ಮಾಧ್ಯಮದವರು ಇದ್ದ ಹಿನ್ನೆಲೆ, ದರ್ಶನ್ ಪ್ರಯಾಣ ಮಾಡುವ ವಾಹನದ ಸಂಖ್ಯೆ ಗೊತ್ತಾಗಬಹುದು, ಪ್ರಯಾಣದ ಸಮಯದಲ್ಲಿ ಭದ್ರತೆಗೆ ತೊಂದರೆಯಾಗಬಹುದು ಎಂದು ಊಹಿಸಿದ ಪೊಲೀಸರು ದರ್ಶನ್ ಪ್ರಯಾಣ ಮಾಡುವ ವಾಹನವನ್ನು ಪದೇ ಪದೇ ಬದಲಿಸಿದ್ದಾರೆ ಎನ್ನುವ ಮಾಹಿತಿ ಕೂಡ ಸದ್ಯ ಲಭ್ಯವಾಗಿದೆ.

kannada-actor-darshan-has-been-shifted-from-parappana-agrahara-to-bellary-jail

ಮೊದಲು ಪರಪ್ಪನ ಅಗ್ರಹಾರದಿಂದ ಹೊರಡುವಾಗ ದರ್ಶನ್ ಅವರನ್ನು ಬಿಳಿಬಣ್ಣದ ವ್ಯಾನ್ ನಲ್ಲಿ ಕೂರಿಸಿದ ಪೊಲೀಸರು, ಜೈಲಿಂದ ತುಸು ದೂರ ಹೋದ ನಂತರ ನೀಲಿ ಬಣ್ಣದ ಬೊಲೆರೋ ವಾಹನದಲ್ಲಿ ಅವರನ್ನು ಕರೆದೊಯ್ದರು ಎನ್ನಲಾಗಿದೆ. ಇನ್ನೂ ಬಿಳಿ ಬಣ್ಣದ ವ್ಯಾನ್ ಕೂಡ ಜೊತೆಯಲ್ಲಿ ಸಾಗಿದೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.

ಇನ್ನೂ ದರ್ಶನ್ ಬರುತ್ತಿರುವ ಸುದ್ದಿಯನ್ನು ತಿಳಿದು ಬಳ್ಳಾರಿ ಜೈಲಿನಾಚೆ ದರ್ಶನ್ ಅವರ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನ ಭಾಗ್ಯ ಸಿಗಬಾರದು ಎಂದು ಬೊಲೆರೋ ಜೀಪ್‌ಗೆ ಕರ್ಟನ್ ಹಾಕಲಾಗಿದೆ. ಈ ಕಾರಣಕ್ಕೆ ಅಭಿಮಾನಿಗಳಿಗೆ ದರ್ಶನ್ ಕಾಣಿಸುವುದು ಬಹುತೇಕ ಅನುಮಾನ

kannada-actor-darshan-has-been-shifted-from-parappana-agrahara-to-bellary-jail

ಉಳಿದಂತೆ ದರ್ಶನ್ ಬೆಳ್ಳಿಗ್ಗೆ ಹತ್ತು ಘಂಟೆಯ ಸುಮಾರು ಬಳ್ಳಾರಿಯ ಜೈಲು ತಲುಪುವ ಸಾಧ್ಯತೆ ಇದೆ. ಇನ್ನೂ ಕೇವಲ ದರ್ಶನ್ ಮಾತ್ರವಲ್ಲದೇ ದರ್ಶನ್ ಅವರ ಸಂಗಡಿಗರನ್ನು ಕೂಡ ಇಂದು ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರವನ್ನು ಮಾಡಲಾಗಿದೆ. A 1 ಪವಿತ್ರಾ ಗೌಡ A 13 ದೀಪಕ್ A 17 ಅನುಕುಮಾರ್ ಈ ಮೂವರನ್ನು ಮಾತ್ರ ಪರಪ್ಪನ ಅಗ್ರಹಾರದಲ್ಲಿ ಉಳಿಸಿಕೊಳ್ಳಲಾಗಿದೆ. ಪವಿತ್ರಾ ಗೌಡ ಈಗಾಗಲೇ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 31ಕ್ಕೆ ಮುಂದೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X