twitter
    For Quick Alerts
    ALLOW NOTIFICATIONS  
    For Daily Alerts

    ಅಪಘಾತದ ಗೊಂದಲಗಳಿಗೆ ತೆರೆ ಎಳೆದ 'ಡಿ ಬಾಸ್': ಅಂದು ರಾತ್ರಿ ನಿಜಕ್ಕೂ ಆಗಿದ್ದೇನು.?

    |

    ಸೆಪ್ಟೆಂಬರ್ 23, ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಚಲಿಸುತ್ತಿದ್ದ ಆಡಿ ಕಾರು ಅಪಘಾತಕ್ಕೆ ಒಳಗಾಗಿ ಎಲ್ಲರಿಗೂ ಗಾಯವಾಗಿತ್ತು. ನಂತರ ಅವರೆಲ್ಲರೂ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಕೊಂಡಿದ್ದರು.

    ಈ ಅಪಘಾತ ಹೇಗೆ ಸಂಭವಿಸಿತು.? ಅಂದು ರಾತ್ರಿ ಕಾರಿನಲ್ಲಿ ಎಷ್ಟು ಮಂದಿ ಇದ್ದರು.? ದರ್ಶನ್ ಜೊತೆ ಯಾರು ಪ್ರಯಾಣಿಸುತ್ತಿದ್ದರು.? ಅಲ್ಲಿಂದ ಕಾರು ಸ್ಥಳಾಂತರಿಸಿದ್ದು ಯಾಕೆ.? ಆಸ್ಪತ್ರೆಯಲ್ಲಿ ಆರು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ, ಆದ್ರೆ ಪೊಲೀಸರು ಐದು ಮಂದಿ ಎಂದು ಹೇಳಿದ್ದಾರೆ. ಆದ್ರೆ, ಕಾರಿನಲ್ಲಿ ನಾಲ್ಕು ಜನ ಇದ್ದರು ಎಂಬ ಸುದ್ದಿ ಇತ್ತು.....

    ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹೇಳಿಕೆ ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹೇಳಿಕೆ

    ಹೀಗೆ, ಇಷ್ಟೆಲ್ಲಾ ಅನುಮಾನಗಳು ಕಾಡುತ್ತಿತ್ತು. ಈ ಬಗ್ಗೆ ಯಾರೂ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ದೇವರಾಜ್ ಮತ್ತು ಪ್ರಜ್ವಲ್ ಡಿಸ್ಚಾರ್ಜ್ ಆದಾಗಲೂ ಈ ಬಗ್ಗೆ ಪೂರ್ತಿ ಮಾಹಿತಿ ಹೇಳಿರಲಿಲ್ಲ. ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಬಳಿಕ ಮಾತನಾಡಿದ ದರ್ಶನ್ ಎಲ್ಲಾ ಅನುಮಾನಗಳಿಗೂ ಉತ್ತರಿಸಿ ತೆರೆ ಎಳೆದರು. ಮುಂದೆ ಓದಿ......

    ಒಂದು ತಿಂಗಳು ಮಾತ್ರ ವಿಶ್ರಾಂತಿ

    ಒಂದು ತಿಂಗಳು ಮಾತ್ರ ವಿಶ್ರಾಂತಿ

    ದರ್ಶನ್ ಅವರಿಗೆ ಎರಡು ತಿಂಗಳು ವಿಶ್ರಾಂತಿ ಬೇಕಾಗಿದೆ. ಒಂದು ವರ್ಷದ ವರೆಗೂ ವರ್ಕೌಟ್ ಮಾಡುವಂತಿಲ್ಲ. ಜಿಮ್ ಮಾಡುವಂತಿಲ್ಲ ಎಂದು ಅಂತೆ-ಕಂತೆಗಳು ಚರ್ಚೆಯಾಗಿದ್ದವು. ಅದಕ್ಕೆಲ್ಲಾ ಬ್ರೇಕ್ ಹಾಕಿದ ದರ್ಶನ್ ''ಕೇವಲ ಒಂದು ತಿಂಗಳು ಮಾತ್ರ ವಿಶ್ರಾಂತಿ. ಹದಿನೈದು ದಿನದಲ್ಲೇ ಡಬ್ಬಿಂಗ್ ಕೆಲಸ ಆರಂಭಿಸುತ್ತೇನೆ'' ಎಂದು ಡಿ ಬಾಸ್ ಹೇಳಿದರು.

    ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್

    ಕಂಬ ಬೀಳಿಸಿದ್ದು ನಾವಲ್ಲ

    ಕಂಬ ಬೀಳಿಸಿದ್ದು ನಾವಲ್ಲ

    ಹಿನಕಲ್ ರಿಂಗ್ ರಸ್ತೆ ಬಳಿ ದರ್ಶನ್ ಕಾರು ಅಪಘಾತವಾದ ಸ್ಥಳದಲ್ಲಿ ರಸ್ತೆ ಕಂಬವೊಂದು ಬಿದ್ದಿರುವ ಬಗ್ಗೆ ವರದಿಯಾಗಿತ್ತು. ದರ್ಶನ್ ಅವರು ಕಾರು ಗುದ್ದಿರುವ ಕಾರಣ ಈ ಕಂಬ ಬಿದ್ದಿದೆ ಎಂದು ಹೇಳಲಾಗಿತ್ತು. ಆದ್ರೆ, 'ಈ ಕಂಬವನ್ನ ನಾವು ಬೀಳಿಸಿದ್ದಲ್ಲ. ನಮ್ಮ ಕಾರು ಆ ಕಂಬಕ್ಕೆ ಗುದ್ದಿಲ್ಲ' ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ.

    ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!

    ರಾಯ್ ಅಂಟೋನಿ ಡ್ರೈವ್ ಮಾಡ್ತಿದ್ದರು

    ರಾಯ್ ಅಂಟೋನಿ ಡ್ರೈವ್ ಮಾಡ್ತಿದ್ದರು

    ''ನಾವು ಊಟ ಮಾಡ್ಕೊಂಡು ಬರ್ತಿದ್ವಿ. ಡ್ರೈವರ್ ಗೆ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು ಅಷ್ಟೇ. ನನ್ನ ಸ್ನೇಹಿತ ರಾಯ್ ಅವರೇ ಡ್ರೈವ್ ಮಾಡ್ತಿದ್ರು. ಬೇರೆ ಏನೂ ನಡೆದಿಲ್ಲ. ಇದು ಸಾಮಾನ್ಯ ಆಕ್ಸಿಡೆಂಟ್ ಅಷ್ಟೇ'' ಎಂದು ಚಾಲೆಂಜಿಂಗ್ ಸ್ಟಾರ್ ಕ್ಲಾರಿಟಿ ಕೊಟ್ಟರು.

    ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ

    ಕಾನೂನು ಇದೆ

    ಕಾನೂನು ಇದೆ

    ಅಪಘಾತವಾದ ಸ್ಥಳದಲ್ಲಿ ಕಾರು ಇರಲಿಲ್ಲ. ಅದನ್ನ ಅಲ್ಲಿಂದ ಸ್ಥಳಾಂತರಿಸಿದ್ದು ಇಷ್ಟೆಲ್ಲಾ ಅನುಮಾನಕ್ಕೆ ಕಾರಣವಾಯಿತು. ಈ ಬಗ್ಗೆ ಮಾತನಾಡಿದ ದರ್ಶನ್, ''ಕಾನೂನಿನ ಪ್ರಕಾರ ಟರ್ನಿಂಗ್ ರಸ್ತೆಯಲ್ಲಿ ಕಾರು ಇದ್ರೆ ಬೇರೆ ವಾಹನಗಳಿಗೆ ಸಮಸ್ಯೆಯಾಗುತ್ತೆ. ಅದರಿಂದನೂ ಅಪಘಾತವಾಗಬಹುದು. ಅದಕ್ಕೆ ಕಾರು ಸ್ಥಳಾಂತರ ಮಾಡಿದ್ದಾರೆ''.

    6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್

    ನನ್ನ ಕಾರಿನಲ್ಲಿ ಐದು ಜನ ಮಾತ್ರ ಸಾಧ್ಯ

    ನನ್ನ ಕಾರಿನಲ್ಲಿ ಐದು ಜನ ಮಾತ್ರ ಸಾಧ್ಯ

    ಇನ್ನು ಕಾರಿನಲ್ಲಿ ಐದು ಜನ ಇದ್ರಾ, ಆರು ಜನ ಇದ್ರಾ ಅಥವಾ ಬರಿ ನಾಲ್ಕು ಜನ ಇದ್ರಾ ಎಂಬುದರ ಬಗ್ಗೆ ಸ್ವತಃ ದರ್ಶನ್ ಅವರೇ ಮಾಹಿತಿ ಕೊಟ್ಟರು. ''ನನ್ನ ಕಾರಿನಲ್ಲಿ ಬರಿ ಐದು ಜನ ಮಾತ್ರ ಕೂರಬಹುದು. ನಾನು ಹೆಚ್ಚು ಮಂದಿಯನ್ನ ಕೂರಿಸಿಕೊಳ್ಳುವುದಿಲ್ಲ'' ಎಂದು ಹೇಳಿದರು.

    ಡಿಸ್ಚಾರ್ಜ್ ಆದ ಬಳಿಕ ದರ್ಶನ್ ಮೊದಲ ಪ್ರತಿಕ್ರಿಯೆಡಿಸ್ಚಾರ್ಜ್ ಆದ ಬಳಿಕ ದರ್ಶನ್ ಮೊದಲ ಪ್ರತಿಕ್ರಿಯೆ

    ತಾಯಿಯ ಆಶೀರ್ವಾದ ಪಡೆದ ದಾಸ

    ತಾಯಿಯ ಆಶೀರ್ವಾದ ಪಡೆದ ದಾಸ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನಟ ದರ್ಶನ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದುಕೊಂಡರು.

    English summary
    Challenging Star Darshan was discharged from Columbia Asia Hospital after 6 days, and he clarified about car accident.
    Sunday, September 30, 2018, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X