ಮಂಡ್ಯದಲ್ಲಿ ಸುಮಲತಾ ಪರ ರಣಕಹಳೆ ಊದಿದ ದರ್ಶನ್
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಿನಿಂದ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಶುರು ಮಾಡಿದ್ದಾರೆ. ಯಾರ ಪರವು ಮಾತನಾಡದೆ, ಟೀಕೆ ಟಿಪ್ಪಣಿಗಳಿಗೆ ಫಲಿತಾಂಶ ದಿನ ಉತ್ತರ ಕೊಡಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತ ದರ್ಶನ್ ಪ್ರಚಾರ ಪ್ರಾರಂಭಿಸಿದ್ದಾರೆ.
ಹುಲಿಕೆರೆ ಮೊಗರಹಳ್ಳಿ, ಬೆಳಗೊಳ ಸೇರಿದಂತೆ ಮಂಡ್ಯ ಸುತ್ತಮುತ್ತ ದರ್ಶನ್ ಮತಪ್ರಚಾರ ಮಾಡುತ್ತಿದ್ದಾರೆ. 'ನಿಮ್ಮ ಪ್ರೀತಿಗೆ ಯಾವಾಗಲು ಚಿರ ಋಣಿಯಾಗುತ್ತೇನೆ. ಈ ಕಹಳೆಯ ಸೌಂಡ್ ಫಲಿತಾಂಶದ ದಿನ ಕೇಳಿಸಬೇಕು. ಅಮೂಲ್ಯವಾದ ಮತವನ್ನು ಸುಮಲತಾ ಅಮ್ಮನಿಗೆ ನೀಡಿ, ಸೇವೆ ಮಾಡಲು ಅವಕಾಶ ಮಾಡಿಕೊಡಿ'. ಎಂದು ಜನರಲ್ಲಿ ಮನವಿ ಮಾಡಿದರು.
''ಸುಮಲತಾ ಅಂಬರೀಶ್ ಕ್ರಮ ಸಂಖ್ಯೆ 20, ಕಹಳೆ ಊದುತ್ತಿರುವ ರೈತ ಗುರುತಿಗೆ ಮತ ಹಾಕಿ. ಗೊಂದಲವಿರುವುದರಿಂದ ಈ ಕ್ರಮ ಸಂಖ್ಯೆಯನ್ನು ಒತ್ತಿ ಒತ್ತಿ ಹೇಳುತ್ತಿದ್ದೇನೆ'' ಎಂದು ಹೇಳುತ್ತಾ ದರ್ಶನ್ ಜನರ ಬಳಿ ಮತಯಾಚನೆ ಮಾಡಿದ್ರು.

ದರ್ಶನ್ ನೋಡಲು ಸಾಕಷ್ಟು ಜನ ಅಭಿಮಾನಿಗಳು ಮುಗಿಬಿದ್ದಿದ್ದರು. ಹಾರ ಹಾಕಿ ಗ್ರಾಮಸ್ತರು ದರ್ಶನ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ರು. ಇನ್ನು ದರ್ಶನ್ ಗೆ ನಟ ರವಿ ಚೇತನ್ ಸಹ ಸಾಥ್ ನೀಡಿದ್ರು. ಇವತ್ತಿನಿಂದ ಚುನಾವಣೆ ಮುಗಿಯುವ ವರೆಗೂ ದರ್ಶನ್ ಮಂಡ್ಯದಲ್ಲೆ ಬೀಡು ಬಿಡಲಿದ್ದಾರೆ.


Click it and Unblock the Notifications











