»   » 'ಗಣಪ' ನೋಡಿ ಭೇಷ್ ಅಂದ ಚಾಲೆಂಜಿಂಗ್ ಸ್ಟಾರ್

'ಗಣಪ' ನೋಡಿ ಭೇಷ್ ಅಂದ ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ಹೀರೋಗಳು ಹೊಸಬರನ್ನು ತುಂಬಾನೇ ಪ್ರೋತ್ಸಾಹಿಸುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಅಂದ್ರೆ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಂಗಿತರಂಗ' ನೋಡಿ ಸೂಪರ್ ಅಂದಿದ್ದು.[ರಂಗಿತರಂಗ ನೋಡಿ ಸೂಪರ್ ಎಂದ 'ಪವರ್ ಸ್ಟಾರ್']

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರದಿ. ಗಾಂಧಿನಗರದಲ್ಲಿ ಸದ್ದಿಲ್ಲದೇ ಸೌಂಡು ಮಾಡುತ್ತಿರುವ 'ಗಣಪ' ಚಿತ್ರವನ್ನ ದರ್ಶನ್ ನೋಡಿ ಹೊಗಳಿದ್ದಾರೆ.

Kannada Actor Darshan lauds Kannada Movie 'Ganapa'

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ 'ಪಿ2 ಕ್ರಿಯೇಷನ್ಸ್, ಪರಮೇಶ್ ನಿರ್ಮಾಣದ, ಪ್ರಭು ಶ್ರೀನಿವಾಸ್ ಆಕ್ಷನ್-ಕಟ್ ಹೇಳಿರುವ 'ಗಣಪ' ಚಿತ್ರವನ್ನು ನೋಡಿ ಭೇಷ್ ಅಂದಿದ್ದಾರೆ.['ಗಣಪ' ಸಿನಿಮಾ ಹೇಗಿದೆ? ವಿಮರ್ಶಕರು ಏನಂತಾರೆ?]

Kannada Actor Darshan lauds Kannada Movie 'Ganapa'

''ಹೆಚ್ಚು ಕಮ್ಮಿ 20 ವರ್ಷಗಳ ನಂತರ ಕನ್ನಡದಲ್ಲಿ ರೌಡಿಸಂನೊಂದಿಗೆ ಸಹಜ ಸೆಂಟಿಮೆಂಟ್ ಮಿಶ್ರಿತವಾದ ಚಿತ್ರ ಇವಾಗ ಬಂದಿದೆ. ಇದು ನನಗೆ ಅತ್ಯಂತ ಖುಷಿ ಕೊಟ್ಟಿದೆ, ಒಟ್ಟಾರೆಯಾಗಿ 'ಗಣಪ' ಒಂದೊಳ್ಳೆಯ ಸಿನೆಮಾ, ಇದರ ನಾಯಕ ಸಂತೋಷ್ ಗೂ ಉತ್ತಮ ಭವಿಷ್ಯ ಇದೆ'' ಅಂತ ಸಿನಿಮಾ ನೋಡಿದ ಬಳಿಕ ದರ್ಶನ್ ಹೇಳಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಪ್ರಶಂಸೆಯನ್ನು ಕೇಳಿ ಚಿತ್ರತಂಡ ಫುಲ್ ಖುಷ್ ಆಗಿದೆ.

English summary
Kannada actor Darshan watched Kannada Movie 'Ganapa' and appreciated it. 'Ganapa' Movie features Santhosh and Priyanka, directed by Prabhu Srinivas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada