For Quick Alerts
  ALLOW NOTIFICATIONS  
  For Daily Alerts

  ಮಹಾ ಮೋಸ: ಮ್ಯಾನೇಜರ್ 'ಮಲ್ಲಿ'ಯಿಂದ 'ದಾಸ' ದರ್ಶನ್ ಗೆ ದೋಖಾ.!

  By Harshitha
  |
  ಅತ್ಯಾಪ್ತನಿಂದಲೇ ಮೋಸ ಹೋದ ತೂಗುದೀಪ ಬ್ರದರ್ಸ್..!! | Filmibeat Kannada

  'ಟಗರು' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಕ್ಕೇ, ''ನಾನು 'ಟಗರು' ಪ್ರೊಡ್ಯೂಸರ್'' ಅಂತ ಬಿಟ್ಟಿ ಬಿಲ್ಡಪ್ ತೆಗೆದುಕೊಂಡು ಉದ್ಯಮಿಗಳಿಗೆ ಉಂಡೆನಾಮ ತಿಕ್ಕಿದ ಬೇಬಿ ಕೃಷ್ಣ ಅಲಿಯಾಸ್ ವೈ.ಕೆ.ದೇವನಾಥ ಕಥೆಯನ್ನ ನೀವೆಲ್ಲ ಇದೇ ಫಿಲ್ಮಿಬೀಟ್ ಕನ್ನಡದಲ್ಲಿ ಓದಿದ್ರಿ... ಈಗ ಇಂಥದ್ದೇ ಮತ್ತೊಂದು ಮೋಸದ ಕಥೆ ಹೇಳ್ತೀವಿ ಕೇಳಿ...

  ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ 'ಟಗರು' ನಟ.!ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ 'ಟಗರು' ನಟ.!

  ಈ ಬಾರಿ ಊರೆಲ್ಲಾ ಸಾಲ ಮಾಡಿಕೊಂಡು, ಎಲ್ಲರಿಗೂ ಮೂರು ನಾಮ ಹಾಕಿ ಪರಾರಿ ಆಗಿರುವವರು ಯಾರೋ ಜೂನಿಯರ್ ಆರ್ಟಿಸ್ಟ್ ಅಲ್ಲ. ಬದಲಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ.!

  ಹೌದು, ನೀವು ನಂಬಿದ್ರೂ.. ಬಿಟ್ರೂ ಇದೇ ಸತ್ಯ. 'ದಾಸ' ದರ್ಶನ್ ಹಾಗೂ ದಿನಕರ್ ತೂಗುದೀಪ ಅವರಿಗೆ ಅತ್ಯಾಪ್ತರಾಗಿದ್ದ ಮಲ್ಲಿಕಾರ್ಜುನ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡು ಇದೀಗ ಏಕಾಏಕಿ ನಾಪತ್ತೆ ಆಗಿದ್ದಾರೆ. ದರ್ಶನ್ ಹಾಗೂ ದಿನಕರ್ ತೂಗುದೀಪರಿಂದಲೂ ಮಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. 'ಮೇವು ಗಿರಾಕಿ' ಮಲ್ಲಿಕಾರ್ಜುನ್ ಮೋಸದ ವೃತ್ತಾಂತ ಇಲ್ಲಿದೆ ಓದಿರಿ...

  'ಚಕ್ರವರ್ತಿ' ಸಾಮ್ರಾಜ್ಯದ ಮಂತ್ರಿ

  'ಚಕ್ರವರ್ತಿ' ಸಾಮ್ರಾಜ್ಯದ ಮಂತ್ರಿ

  ಶಿವನ ಮುಂದೆ ಬಸವ ಹೇಗೋ, ಹಾಗೇ 'ಚಕ್ರವರ್ತಿ' ದರ್ಶನ್ ಜೊತೆಗೆ ಸದಾ ಇರುತ್ತಿದ್ದವರು ಮಲ್ಲಿಕಾರ್ಜುನ್. ದರ್ಶನ್ ರವರ ಕಾಲ್ ಶೀಟ್, ಸಂಭಾವನೆ... ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದವರು ಇದೇ ಮಲ್ಲಿಕಾರ್ಜುನ್. ಸಿನಿಮಾ ನಿರ್ಮಾಪಕರು, ಮೀಡಿಯಾದವರು, ಪತ್ರಕರ್ತರು... ಇವರೆಲ್ಲ ದರ್ಶನ್ ನ ಭೇಟಿ ಮಾಡಬೇಕು ಅಂದ್ರೆ ಮಲ್ಲಿಕಾರ್ಜುನ್ ರಿಂದಲೇ ಅಪಾಯಿಟ್ಮೆಂಟ್ ಪಡೆಯಬೇಕಿತ್ತು. ಅಷ್ಟರಮಟ್ಟಿಗೆ 'ಚಕ್ರವರ್ತಿ' ಸಾಮ್ರಾಜ್ಯದ ಶಕ್ತಿಶಾಲಿ ಮಂತ್ರಿ ಈ ಮಲ್ಲಿಕಾರ್ಜುನ್.ಬಿ.ಸಂಕನಗೌಡರ್.

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?

  ದರ್ಶನ್ ವ್ಯವಹಾರಗಳ ಮಾನಿಟರ್

  ದರ್ಶನ್ ವ್ಯವಹಾರಗಳ ಮಾನಿಟರ್

  ದರ್ಶನ್ ರವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ಮಾನಿಟರ್ ಮಾಡುತ್ತಿದ್ದಾತ ಮಲ್ಲಿಕಾರ್ಜುನ್. ದರ್ಶನ್ ಒಡೆತನದ ಪ್ರೊಡಕ್ಷನ್ ಸಂಸ್ಥೆ ಹಾಗೂ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಉಸ್ತುವಾರಿ ವಹಿಸಿಕೊಂಡಿದ್ದೂ ಕೂಡ ಇದೇ ಮಲ್ಲಿಕಾರ್ಜುನ್.

  ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?

  ಗಾಳಿ ಸುದ್ದಿ ನಿಜವಾಗಿದೆ.!

  ಗಾಳಿ ಸುದ್ದಿ ನಿಜವಾಗಿದೆ.!

  ಸದಾ ದರ್ಶನ್ ಜೊತೆಯಲ್ಲೇ ಇರುತ್ತಿದ್ದ ಮಲ್ಲಿಕಾರ್ಜುನ್ ಕಳೆದ ಹದಿನೈದು ದಿನಗಳಿಂದ ಯಾರ ಕಣ್ಣಿಗೂ ಬೀಳಲಿಲ್ಲ. ಒಂದು ವಾರದಿಂದೀಚೆಗೆ ಯಾವುದೇ ಪ್ರೆಸ್ ಮೀಟ್, ಆಡಿಯೋ ರಿಲೀಸ್ ಫಂಕ್ಷನ್, ಟ್ರೈಲರ್ ಲಾಂಚ್ ಕಾರ್ಯಕ್ರಮಗಳಿಗೆ ದರ್ಶನ್ ಬಂದರೂ ಅವರ ಪಕ್ಕ ಮಲ್ಲಿಕಾರ್ಜುನ್ ಇರುತ್ತಿರಲಿಲ್ಲ. ಆಗಲೇ ನೋಡಿ ''ಮಲ್ಲಿಕಾರ್ಜುನ್ ಓಡಿ ಹೋಗಿದ್ದಾರೆ'' ಎಂಬ ಗುಸು ಗುಸು ಶುರುವಾಗಿದ್ದು. ಈಗ ಅದೇ ಗುಸುಗುಸು ನಿಜವಾಗಿದೆ. ಮಲ್ಲಿಕಾರ್ಜುನ್ ನಾಪತ್ತೆ ಆಗಿರುವುದು ಸತ್ಯ.

  ಫೋನ್ ಸ್ವಿಚ್ ಆಫ್

  ಫೋನ್ ಸ್ವಿಚ್ ಆಫ್

  ಕಳೆದ ಹದಿನೈದು ದಿನಗಳಿಂದ ಮಲ್ಲಿಕಾರ್ಜುನ್ ಫೋನ್ ಸ್ವಿಚ್ ಆಫ್ ಆಗಿದೆ. ಮಲ್ಲಿಕಾರ್ಜುನ್ ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಖುದ್ದು ದರ್ಶನ್ ಹಾಗೂ ದಿನಕರ್ ಫೋನ್ ಮಾಡಿದರೂ ಮಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ.

  ನಾಪತ್ತೆ ಆಗಲು ಕಾರಣ ಏನು.?

  ನಾಪತ್ತೆ ಆಗಲು ಕಾರಣ ಏನು.?

  ಮ್ಯಾನೇಜರ್ ಮಲ್ಲಿಕಾರ್ಜುನ್ ಇದ್ದಕ್ಕಿದ್ದಂತೆ ಪರಾರಿ ಆಗಲು ಕಾರಣ ಬರೋಬ್ಬರಿ 10 ಕೋಟಿ ರೂಪಾಯಿ ಸಾಲ.! ಹೌದು ಕೋಟ್ಯಾಂತರ ರೂಪಾಯಿ ಸಾಲ ಮಾಡಿರುವ ಈ ಭೂಪ ಈಗ ತಲೆಮರೆಸಿಕೊಂಡಿದ್ದಾರೆ.

  ಚಿತ್ರ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ್ದ 'ಮಲ್ಲಿ'

  ಚಿತ್ರ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ್ದ 'ಮಲ್ಲಿ'

  ಕೆಲವರ ಜೊತೆ ಸೇರಿಕೊಂಡು ಯಶ್ ಅಭಿನಯದ 'ಮೊದಲ ಸಲ' ಚಿತ್ರವನ್ನ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು. 'ಮೊದಲ ಸಲ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಕಲೆಕ್ಷನ್ ಮಾತ್ರ ಆಗಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ್ ಗೆ ನಷ್ಟ ಆಯ್ತು. 80 ಲಕ್ಷ ಸಾಲದ ಹೊರೆ ಮಲ್ಲಿಕಾರ್ಜುನ್ ತಲೆ ಮೇಲೆ ಬಿತ್ತು.

  ದರ್ಶನ್ ಕ್ಯಾಂಪ್ ಸೇರಿದ 'ಮಲ್ಲಿ'

  ದರ್ಶನ್ ಕ್ಯಾಂಪ್ ಸೇರಿದ 'ಮಲ್ಲಿ'

  ಕೈಸುಟ್ಟುಕೊಂಡ್ಮೇಲೆ ಮಲ್ಲಿ ದರ್ಶನ್ ಕ್ಯಾಂಪ್ ಸೇರಿದರು. ಬಳಿಕ ದರ್ಶನ್ ಗೆ ಮ್ಯಾನೇಜರ್ ಆದರು. ದಿನಗಳು ಕಳೆದಂತೆ ದರ್ಶನ್ ಒಡೆತನದ ಬ್ಯಾನರ್ ಅಡಿ ನಿರ್ಮಾಣ, ವಿತರಣೆಗೆ ಕೈಹಾಕಿದರು. ಆದ್ರೆ, ಅಲ್ಲೂ ಮಲ್ಲಿಕಾರ್ಜುನ್ ಯಶಸ್ವಿ ಆಗಲಿಲ್ಲ.

  ದರ್ಶನ್ ರಿಂದ 90 ಲಕ್ಷ ಸಾಲ.!

  ದರ್ಶನ್ ರಿಂದ 90 ಲಕ್ಷ ಸಾಲ.!

  ದರ್ಶನ್ ಒಬ್ಬರೇ ಮಲ್ಲಿಕಾರ್ಜುನ್ ಗೆ 90 ಲಕ್ಷ ಕೊಟ್ಟಿದ್ದಾರೆ. ಇನ್ನೂ ಮಲ್ಲಿಕಾರ್ಜುನ್ ಕೇಳಿ ಕೇಳಿದಾಗೆಲ್ಲ ದಿನಕರ್ ಕೂಡ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನೆಲ್ಲ ಪಡೆದು ಹಳೆಯ ಸಾಲವನ್ನೂ (80 ಲಕ್ಷ) ತೀರಿಸದೆ, ದರ್ಶನ್ ಕೈಗೂ ಸಿಗದೆ ಇದೀಗ ಎಸ್ಕೇಪ್ ಆಗಿದ್ದಾರೆ ಮಲ್ಲಿಕಾರ್ಜುನ್.

  ಒಟ್ಟು ಸಾಲದ ಮೊತ್ತ 10-12 ಕೋಟಿ

  ಒಟ್ಟು ಸಾಲದ ಮೊತ್ತ 10-12 ಕೋಟಿ

  ಹಣದ ಹರಿವು ಚೆನ್ನಾಗಿಯೇ ಇದ್ದರೂ, ಸಾಲವನ್ನ ಮಾತ್ರ ಮಲ್ಲಿಕಾರ್ಜುನ್ ತೀರಿಸಿರಲಿಲ್ಲ. ಹೀಗಾಗಿ ಸಾಲ ಬೆಳೆದು ಬೆಳೆದು ಇದೀಗ 10-12 ಕೋಟಿ ಆಗಿದೆ.! ಸಾಲ ಕೊಟ್ಟಿರುವವರು ಇದೀಗ ದರ್ಶನ್ ಹಾಗೂ ದಿನಕರ್ ರನ್ನ ಕೇಳ್ತಿದ್ದಾರಂತೆ.!

  ಕಮಿಶನ್ ಪಡೆಯುತ್ತಿದ್ರಾ ಮಲ್ಲಿಕಾರ್ಜುನ್.?

  ಕಮಿಶನ್ ಪಡೆಯುತ್ತಿದ್ರಾ ಮಲ್ಲಿಕಾರ್ಜುನ್.?

  ಕಮಿರ್ಷಿಯಲ್ ಶಾಪ್ ಉದ್ಘಾಟನೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ದರ್ಶನ್ ಬರಬೇಕು ಅಂದ್ರೆ ಮೊದಲು ಮಲ್ಲಿಕಾರ್ಜುನ್ ಒಪ್ಪಬೇಕಿತ್ತಂತೆ. ಹಾಗೇ ಮಲ್ಲಿಕಾರ್ಜುನ್ ಒಪ್ಪಿಕೊಳ್ಳಬೇಕು ಅಂದ್ರೆ ಕಮಿಶನ್ ಕೊಡಬೇಕಿತ್ತಂತೆ ಅನ್ನೋದು ಮತ್ತೊಂದು ಗಾಸಿಪ್. 'ಮಲ್ಲಿ' ಮೇಲೆ ನಂಬಿಕೆ ಇಟ್ಟು ಅವರು ಹೇಳಿದ ಕಡೆಯೆಲ್ಲಾ ದರ್ಶನ್ ಹೋಗ್ತಿದ್ರು. ಆದ್ರೆ, ಈ ಕಮಿಶನ್ ಮ್ಯಾಟರ್ 'ದಾಸ'ನಿಗೆ ಗೊತ್ತಿರ್ಲಿಲ್ವಾ.?

  ಮಲ್ಲಿಕಾರ್ಜುನ್ ಹೀಗೆ ಮೋಸ ಮಾಡಬಹುದೇ.?

  ಮಲ್ಲಿಕಾರ್ಜುನ್ ಹೀಗೆ ಮೋಸ ಮಾಡಬಹುದೇ.?

  ದರ್ಶನ್ ನಾಮಬಲದಿಂದ ಹಲವರ ಬಳಿ ದುಡ್ಡು ಪೀಕಿರುವ ಮಲ್ಲಿಕಾರ್ಜುನ್, 'ಯಜಮಾನ' ದರ್ಶನ್ ಗೂ ಕೈಕೊಟ್ಟು ಮಾಯವಾಗಿದ್ದಾರೆ. ಸ್ವಂತ ಸಹೋದರನಂತೆ ದರ್ಶನ್ ಹಾಗೂ ದಿನಕರ್ ನೋಡಿಕೊಂಡಿದ್ದರು. ಆದ್ರೆ, ಮಲ್ಲಿಕಾರ್ಜುನ್ ಹೀಗೆ ಮಾಡಬಹುದೇ.?

  English summary
  Kannada Actor Darshan's manager Mallikarjun is absconding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X