ರೇಪಿಸ್ಟ್ ಗಳನ್ನ ಪಬ್ಲಿಕ್ ನಲ್ಲಿ ಎನ್ ಕೌಂಟರ್ ಮಾಡಬೇಕು: ದರ್ಶನ್ ಗುಡುಗು.!
Recommended Video
ಹೈದರಾಬಾದ್ ಮೂಲದ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೊಡಲೇಬೇಕು ಎಂಬ ಕೂಗು ದೇಶದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿರುವಾಗಲೇ ಒಂದು ಘಟನೆ ನಡೆದು ಹೋಯಿತು.
ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಬೆಂಕಿಯಲ್ಲಿ ಸುಟ್ಟ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ಮಾಡಿದರು. ಅತ್ಯಾಚಾರ ಮಾಡಿ ಯುವತಿಯನ್ನು ಸುಟ್ಟ ಜಾಗದಲ್ಲೇ ಆರೋಪಿಗಳನ್ನು ಪೊಲೀಸರು ಕೊಂದರು.
ಅಲ್ಲಿಗೆ, ದಿಶಾ ಸಾವಿಗೆ ನ್ಯಾಯ ಸಿಕ್ಕಿದೆ ಅಂತ ಹಲವರು ಪೊಲೀಸರಿಗೆ ಸೆಲ್ಯೂಟ್ ಮಾಡುತ್ತಿದ್ದರೆ, ಕೆಲವರು ಮಾತ್ರ ಎನ್ ಕೌಂಟರ್ ವಿರುದ್ಧ ದನಿಯೆತ್ತಿದ್ದಾರೆ. ಪೊಲೀಸರು ನಡೆಸಿದ ಎನ್ ಕೌಂಟರ್ ಕುರಿತು ಪರ-ವಿರೋಧ ಚರ್ಚೆ ಇದೀಗ ಜೋರಾಗಿ ನಡೆಯುತ್ತಿದೆ. ಹೀಗಿರುವಾಗಲೇ, ಇದೇ ವಿಚಾರದ ಕುರಿತು ನಟ ದರ್ಶನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ಪಬ್ಲಿಕ್ ನಲ್ಲೇ ಮಾಡಬೇಕು.!
''ರೇಪಿಸ್ಟ್ ಗಳನ್ನ ಪಬ್ಲಿಕ್ ನಲ್ಲಿ ಎನ್ ಕೌಂಟರ್ ಮಾಡಿದರೆ, ನೋಡಿದವರು ಅಂತಹ ಕೃತ್ಯಕ್ಕೆ ಕೈ ಹಾಕಲು ಹೆದರುತ್ತಾರೆ. ಎನ್ ಕೌಂಟರ್ ಬಗ್ಗೆ ಕೆಲ ವಕೀಲರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಆದ್ರೆ, ಅದೇ ಘಟನೆ ಅವರ ಮನೆಯ ಹೆಣ್ಣು ಮಕ್ಕಳಿಗೆ ಆಗಿದಿದ್ದರೆ ಬಿಡುತ್ತಿದ್ರಾ.?'' ಎಂದು ಸಂದರ್ಶನವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಶ್ನಿಸಿದ್ದಾರೆ.

ಅವರು ಮನುಷ್ಯರಲ್ವಾ.?
''ಅರಬ್ ದೇಶಗಳಲ್ಲಿ ಅತ್ಯಾಚಾರ ಮಾಡಿದರೆ ಏನಾಗುತ್ತೆ ಗೊತ್ತಾ.? ಪಬ್ಲಿಕ್ ನಲ್ಲೇ ಶಿಕ್ಷೆ ಕೊಡ್ತಾರೆ. ಹಾಗಾದ್ರೆ, ಅವರು ಮನುಷ್ಯರಲ್ವಾ.? ಅವರಿಗೆ ಮಾನವ ಹಕ್ಕುಗಳು ಇಲ್ವಾ.?'' ಎಂದು 'ದಾಸ' ದರ್ಶನ್ ಗುಡುಗಿದ್ದಾರೆ.

ಹಲವು ನಟ, ನಟಿಯರು ಹೇಳಿದ್ದೂ ಇದನ್ನೇ.!
ಭಯ ಅನ್ನೋದು ಉತ್ತಮ ಪರಿಹಾರ, ಕೆಲವೊಮ್ಮೆ ಅದೊಂದೇ ಪರಿಹಾರ. ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಿದ್ದು ಸಮಾಧಾನ ತಂದಿದೆ. ದಿಶಾ ಆತ್ಮಕೆ ಶಾಂತಿ ಸಿಕ್ಕಿದೆ. ನ್ಯಾಯ ಲಭಿಸಿದೆ ಎಂದು ನಟ ಜಗ್ಗೇಶ್, ಅಕ್ಕಿನೇನಿ ನಾಗಾರ್ಜುನ, ಜೂನಿಯರ್ ಎನ್.ಟಿ.ಆರ್, ಅಲ್ಲು ಅರ್ಜುನ್, ಸಮಂತಾ, ಅನುಪಮ್ ಖೇರ್ ಸೇರಿದಂತೆ ಹಲವು ನಟ-ನಟಿಯರು ಪ್ರತಿಕ್ರಿಯಿಸಿದ್ದರು.

ತನಿಖೆ ನಡೆಯಲಿದೆ.!
ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್ ಕೌಂಟರ್ ಹಿಂದಿನ ಸತ್ಯಾಸತ್ಯತೆಗಳನ್ನು ತಿಳಿಯಲು ತನಿಖೆ ನಡೆಸುವ ಸಲುವಾಗಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ತನಿಖಾ ಆಯೋಗ ರಚಿಸಿದೆ. ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆಯೋಗಕ್ಕೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.


Click it and Unblock the Notifications











