ಚಾಲೆಂಜಿಂಗ್ ಸ್ಟಾರ್ ದರ್ಶನ್ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್.!
ನಿಮ್ಮೆಲ್ಲರ ಪ್ರೀತಿಯ 'ದಾಸ'...ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಡಿಸೆಂಬರ್ 9 ರಂದು ದರ್ಶನ್-ಪ್ರಕಾಶ್ 'ಮಿಲನ'ದ ಹೊಸ ಚಿತ್ರ ಸೆಟ್ಟೇರಲಿದೆ.
ಹೌದು, 'ಮಿಲನ' ಪ್ರಕಾಶ್ ಆಕ್ಷನ್ ಕಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿದ್ದಾರೆ. 'ಚಕ್ರವರ್ತಿ' ಚಿತ್ರದ ಚಿತ್ರೀಕರಣ ಈ ತಿಂಗಳಿನಲ್ಲಿ ಪೂರ್ಣಗೊಳ್ಳುವುದರಿಂದ, ಡಿಸೆಂಬರ್ ನಲ್ಲಿ ಹೊಸ ಚಿತ್ರಕ್ಕೆ ಚಾಲನೆ ನೀಡಲು ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಇದೀಗ ಬಂದ ಸುದ್ದಿ]

ಮೊದಲ ಬಾರಿಗೆ ಒಂದಾಗಿರುವ ದರ್ಶನ್-ಪ್ರಕಾಶ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸ್ಕ್ರಿಪ್ಟ್ ವರ್ಕ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದೆ.
ದರ್ಶನ್ ಜೊತೆ ಡ್ಯುಯೆಟ್ ಹಾಡುವ ನಟಿಯ ಹುಡುಕಾಟದಲ್ಲಿ ಇರುವ 'ಮಿಲನ' ಪ್ರಕಾಶ್, ಅರ್ಜುನ್ ಜನ್ಯಗೆ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಕೃಷ್ಣ ಕುಮಾರ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಷ್ಟು ಬಿಟ್ಟರೆ, ಬಾಕಿ ಟೀಮ್ ಮೆಂಬರ್ಸ್ ಫೈನಲ್ ಆಗಿಲ್ಲ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಕ್ಕಿ ಸ್ಪಾಟ್ ಯಾವುದು?]
'ಮಿಲನ' ಮತ್ತು 'ಶ್ರೀ' ಚಿತ್ರಗಳಿಗೆ ಬಂಡವಾಳ ಹಾಕಿದ್ದ ಪ್ರಕಾಶ್ ಸಂಬಂಧಿ ಕೆ.ಎಸ್.ದುಶ್ಯಂತ್ ಈ ಚಿತ್ರದ ನಿರ್ಮಾಪಕ. [ದರ್ಶನ್ ಮಾಡಬೇಕಿದ್ದ ಚಿತ್ರಕ್ಕೀಗ ಪುನೀತ್ ನಾಯಕ!]
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಚಿತ್ರದ ಬಗೆಗಿನ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.


Click it and Unblock the Notifications











