»   » ಆಗಸ್ಟ್ 16ರಂದು ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ಕಾದಿದೆ!

ಆಗಸ್ಟ್ 16ರಂದು ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ಕಾದಿದೆ!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಐರಾವತ' ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದ್ದು, ಆಗಸ್ಟ್ 16ರಂದು ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದೀಗ ಹೊಸ ಟೀಸರ್ ನ್ನು ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಜನುಮದಿನವಾದ ಆಗಸ್ಟ್ 16ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅಂದಹಾಗೆ ವಿಶೇಷ ಅಂದ್ರೆ 'ಐರಾವತ' ಚಿತ್ರದ ಟೀಸರ್ ಅನ್ನು ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಕೈಯಲ್ಲಿ ಬಿಡುಗಡೆ ಮಾಡಿಸಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.


Kannada actor Darshan's 'Airavatha' Teaser on August 16th

ಈಗಾಗಲೇ ವಿದೇಶದಲ್ಲಿ ಶೂಟಿಂಗ್ ನಲ್ಲಿ 'ಐರಾವತ' ಚಿತ್ರತಂಡ ಬ್ಯುಸಿಯಾಗಿದ್ದರೆ, ನಿರ್ದೇಶಕ ಎ.ಪಿ.ಅರ್ಜುನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಐರಾವತ' ಚಿತ್ರಕ್ಕೆ 'ಅದ್ದೂರಿ' ನಿರ್ದೇಶಕ ಎ.ಪಿ.ಅರ್ಜುನ್ ಆಕ್ಷನ್-ಕಟ್ ಹೇಳುತ್ತಿದ್ದಾರೆ.


Kannada actor Darshan's 'Airavatha' Teaser on August 16th

ಇನ್ನುಳಿದಂತೆ ಸಾಧುಕೋಕಿಲ, ಅನಂತ್ ನಾಗ್, ಪ್ರಕಾಶ್ ರೈ, ಉದಯ್ ಮುಂತಾದವರ ತಾರಾಗಣ ಚಿತ್ರಕ್ಕಿದೆ. ವಿ.ಹರಿಕೃಷ್ಣ ಚಿತ್ರದ ಸುಂದರ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


ಸದ್ಯಕ್ಕೆ ದರ್ಶನ್ 'ಐರಾವತ' ದಿಂದ ಬಂದಿರೋ ಖಾಸ್ ಖಬರ್ ಇಷ್ಟು. ಇನ್ನು ಆಗಸ್ಟ್ 14 ಉಪ್ಪಿ ಅಭಿಮಾನಿಗಳಿಗೆ 'ಉಪ್ಪಿ 2', ಗಣೇಶ್ ಅಭಿಮಾನಿಗಳಿಗೆ 'ಬುಗುರಿ' ಹಾಗೆಯೇ ದರ್ಶನ್ ಅಭಿಮಾನಿಗಳಿಗೆ 'ಐರಾವತ' ಇನ್ನೇನು ಬೇಕು ಅಲ್ವಾ. ಅಂತೂ ಇಂತೂ ಪ್ರೇಕ್ಷಕರಿಗೆ ಪುರುಸೊತ್ತು ಇಲ್ಲದಂತಾಗಿದೆ.

English summary
Kannada actor Darshan's 'Airavatha' is almost nearing completion. Meanwhile, producer Sandesh Nagaraj has decided to release the teaser of the film on his birthday (August 16th).It will be released by KSRTC driver. "Airavatha' features Kannada actor Darshan, Actress Urvashi Rautela in the lead role. The movie is directed by A.P.Arjun.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X