»   » ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್

ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್

Posted By:
Subscribe to Filmibeat Kannada

ನಟ ದರ್ಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಇಂದು ಸಂಭ್ರಮದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸದ್ಯಕ್ಕೆ 'ಜಗ್ಗುದಾದಾ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ಅವರು ಶೂಟಿಂಗ್ ನಿಂದ ಕೊಂಚ ಬಿಡುವು ಮಾಡಿಕೊಂಡು ಬರ್ತ್ ಡೇ ಸೆಲೆಬ್ರೆಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

ದಿವಂಗತ ಹಿರಿಯ ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ತೂಗುದೀಪ್ ಶ್ರೀನಿವಾಸ್ ದಂಪತಿಗಳ ಪುತ್ರ ನಟ ದರ್ಶನ್ ಅವರು ಫೆಬ್ರವರಿ 16, 1977 ರಂದು ಜನಿಸಿದರು.[ಹುಟ್ಟುಹಬ್ಬದಂದು ಸ್ಪೆಷಲ್ ಅಭಿಮಾನಿಯೊಬ್ಬರನ್ನು ಭೇಟಿಯಾದ ದರ್ಶನ್]

ಕೇವಲ 50 ರೂಪಾಯಿ ಕೈಯಲ್ಲಿ ಹಿಡಿದುಕೊಂಡು ಬೆಂಗಳೂರಿಗೆ ಬಂದ ನಟ ದರ್ಶನ್ ಅವರು ಇದೀಗ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದ ಮೊದಲು ಲೈಟ್ ಬಾಯ್ ಆಗಿದ್ದ ದರ್ಶನ್ ಅವರು 'ಮೆಜೆಸ್ಟಿಕ್' ಎಂಬ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಚಂದನವನದಲ್ಲಿ ಕಾಣಿಸಿಕೊಂಡರು.

ಸದ್ಯಕ್ಕೆ 46ನೇ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶನ್ ಅವರು 15 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಾಕಷ್ಟು ಏಳು-ಬೀಳುಗಳನ್ನು ಕಂಡ ದರ್ಶನ್ ಅವರು ಇದೀಗ ಭರ್ಜರಿ 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಅಂದಹಾಗೆ ನಟ ದರ್ಶನ್ ಅವರಿಗೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟ ಚಿರಂಜೀವಿ ಸರ್ಜಾ, ನಟ ವಿಶ್ವಾಸ್, ನಟಿ ಕಾರುಣ್ಯ ರಾಮ್, ನಟಿ ಇಶಾ ಚಾವ್ಲಾ, ನಟ ಧನಂಜಯ್, ನಟ ನವೀನ್ ಕೃಷ್ಣ, ಲಹರಿ ಮ್ಯೂಸಿಕ್ ಸಂಸ್ಥೆ ಮತ್ತು ಆನಂದ್ ಆಡಿಯೋ ಸಂಸ್ಥೆಯವರು ಶುಭಾಶಯ ಕೋರಿದ್ದಾರೆ.[ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗಾಗಲೇ ಹಲವಾರು ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿದ್ದಾರೆ. ಅವುಗಳಲ್ಲಿ ಮುಂಬರುವ ಸಿನಿಮಾಗಳು ಯಾವುದು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮುಂಬರುವ ಸಿನಿಮಾಗಳು

ಜನವರಿ ತಿಂಗಳಿನಲ್ಲಿ ಬಿಡುಗಡೆ ಆಗಿರುವ 'ವಿರಾಟ್' ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಸದ್ಯಕ್ಕೆ 4 ಹೊಸ ಪ್ರಾಜೆಕ್ಟ್ ಗಳಿಗೆ ಈಗಾಗಲೇ ಸಹಿ ಹಾಕಿದ್ದು, ಒಂದಾದ ಮೇಲೆ ಒಂದು ಸಿನಿಮಾಗಳ ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

'ಜಗ್ಗುದಾದಾ'

ಸದ್ಯಕ್ಕೆ ದರ್ಶನ್ ಅವರು 'ಜಗ್ಗುದಾದಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ನಿರ್ದೇಶಕ ರಾಘವೇಂದ್ರ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ನಿರ್ದೇಶಕರೇ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ದಕ್ಷಿಣ ಭಾರತದ ನಟಿ ದೀಕ್ಷಾ ಸೇಠ್ ನಾಯಕಿಯಾಗಿ ನಟಿಸಿದ್ದು, ನಟಿ ರಚಿತಾ ರಾಮ್ ಮತ್ತು ಪ್ರಣೀತಾ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತವಿದೆ.

'ಚಕ್ರವರ್ತಿ'

ದರ್ಶನ್ ಅವರ ಮತ್ತೊಂದು ಹೊಸ ಸಿನಿಮಾ 'ಚಕ್ರವರ್ತಿ'. ನಿರ್ದೇಶಕರು: ಚಿಂತನ್. ನಟಿ ಮತ್ತು ಇನ್ನಿತರೇ ತಾರಾಬಳಗದ ಆಯ್ಕೆ ಇನ್ನಷ್ಟೆ ಆಗಲಿದೆ.

'ಸರ್ವಂತರ್ಯಾಮಿ'

'ಸರ್ವಂತರ್ಯಾಮಿ' ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾವಾಗಿದ್ದು, ಚಿತ್ರಕ್ಕೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.

'ಆಸ್ಫೋಟ'

ದರ್ಶನ್ ಅವರ ಮತ್ತೊಂದು ಹೊಸ ಪ್ರಾಜೆಕ್ಟ್ 'ಆಸ್ಫೋಟ'. ನಿರ್ದೇಶಕ: ಎ.ಎಮ್.ಆರ್ ರಮೇಶ್. ತಾರಾಬಳಗ ಆಯ್ಕೆ ಆಗಬೇಕಿದೆ. ನಿಜಜೀವನ ಚರಿತ್ರೆಯಾಧರಿತ ಕಥೆ 'ಆಸ್ಫೋಟ', ರಾಜೀವ್ ಗಾಂಧಿ ಅವರ ಕೊಲೆಯ ಹಿಂದಿರುವ ಕಥೆಯಂತೆ.

ವಿಶ್ ಯೂ ಹ್ಯಾಪಿ ಬರ್ತ್ ಡೇ

ಇಂದು 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಫಿಲ್ಮಿಬೀಟ್ ಕನ್ನಡದ ಕಡೆಯಿಂದಲೂ ವಿಶ್ ಯೂ ಹ್ಯಾಪಿ ಬರ್ತ್ ಡೇ.

English summary
Kannada Actor Darshan celebrates his 39th birthday today, Feb 16. The good looking actor is the son of veteran actor Thoogudeepa Srinivas. He was born on Feb 16, 1977 to Mr and Mrs Thoogudeepa Srinivas. Here is the Complete List Of Upcoming Movies of Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada