»   » ದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿ

ದಕ್ಷಿಣ ಅಮೆರಿಕದಿಂದ ದರ್ಶನ್ ಮನೆಗೆ ಬಂದ ಹೊಸ ಅತಿಥಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕೈಗೆ ಆದ ಪೆಟ್ಟಿನಿಂದ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ತಿದ್ದಾರೆ. ಹೀಗಿರುವಾಗಲೇ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಮನೆಗೆ ಹೊಸ ಅತಿಥಿಯೊಬ್ಬರ ಎಂಟ್ರಿಯಾಗಿದೆ.

ಅವರೇ ಈ ಸ್ಕಾರ್ಲೆಟ್ ಮಕಾವ್.! ದಕ್ಷಿಣ ಅಮೆರಿಕದಲ್ಲಿ ಹೆಚ್ಚಾಗಿ ಕಂಡು ಬರುವ ಈ ಗಿಳಿ ಇದೀಗ ದರ್ಶನ್ ಮನೆ ಸೇರಿದೆ.

Kannada Actor Darshan's latest pet Scarlet Macaw

ದರ್ಶನ್ ಪ್ರಾಣಿ ಪ್ರಿಯ ಅನ್ನೋದು ನಿಮಗೆ ಈಗಾಗಲೇ ಗೊತ್ತಿರುವ ವಿಷಯ. ಮೈಸೂರಿನ ಅವರ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ-ಪಕ್ಷಿಗಳಿವೆ. ಅವುಗಳೊಂದಿಗೆ ಈಗ 'ಚಿಂಟು' ಸೇರಿಕೊಂಡಿದ್ದಾನೆ. [ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!]

ಹೌದು, ಸ್ಕಾರ್ಲೆಟ್ ಮಕಾವ್ ಗಿಳಿಗೆ ದರ್ಶನ್ 'ಚಿಂಟು' ಅಂತ ನಾಮಕರಣ ಮಾಡಿದ್ದಾರೆ. ಪೆಟ್ಟಿನಿಂದಾಗಿ, ಮನೆಯಲ್ಲೇ ರೆಸ್ಟ್ ಮಾಡುತ್ತಿರುವ ದರ್ಶನ್ ಗೆ 'ಚಿಂಟು' ಒಳ್ಳೆ ಕಂಪನಿ ನೀಡುತ್ತಿದ್ದಾನೆ.

ಬುದ್ಧಿವಂತ ಪಕ್ಷಿಯಾಗಿರುವ ಈ ಸ್ಕಾರ್ಲೆಟ್ ಮಕಾವ್, ಮಾನವ ಧ್ವನಿಯನ್ನ ಅನುಕರಣೆ ಮಾಡಬಲ್ಲದು. ಹೀಗಾಗಿ, 'ಚಿಂಟು' ಜೊತೆ ದರ್ಶನ್ ಮಾತುಕತೆಯನ್ನೂ ನಡೆಸುತ್ತಿದ್ದಾರೆ.

English summary
Kannada Actor Darshan has got Scarlet Macaw as his latest pet. Darshan has named it has 'Chintu'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada