»   » ನೀವು ದರ್ಶನ್ ರವರ ನಿಜವಾದ ಅಭಿಮಾನಿ ಆಗಿದ್ದರೆ.....

ನೀವು ದರ್ಶನ್ ರವರ ನಿಜವಾದ ಅಭಿಮಾನಿ ಆಗಿದ್ದರೆ.....

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಚಿತ್ರನಟರ ಫ್ಯಾನ್ ಫೈಟ್ಸ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಒಂದ್ವೇಳೆ ಗೊತ್ತಿಲ್ಲ ಅಂದ್ರೆ, ಒಮ್ಮೆ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಆದ ವರ್ಲ್ಡ್ ವಾರ್ ನ ನೆನಪಿಸಿಕೊಳ್ಳಿ....

ಶಿವಣ್ಣ ವಿರುದ್ಧ ಸುದೀಪ್ ಅಭಿಮಾನಿಗಳು, ಸುದೀಪ್ ವಿರುದ್ಧ ಶಿವಣ್ಣ ಅಭಿಮಾನಿಗಳು, ಯಶ್ ವಿರುದ್ಧ ದರ್ಶನ್ ಅಭಿಮಾನಿಗಳು ತೊಡೆ ತಟ್ಟಿ ಮಾತಿನ ಬಾಣಗಳನ್ನ ಬಿಡುವುದರಲ್ಲಿ ಎಕ್ಸ್ ಪರ್ಟ್.

ಇದನ್ನೆಲ್ಲಾ ನೋಡಿ ಬೇಸೆತ್ತಿದ್ದ ಯಶ್, ಅಭಿಮಾನಿಗಳ ಮುಂದೆ ನಿಂತು ಕೈಮುಗಿದು ಇದನ್ನೆಲ್ಲಾ ದಯವಿಟ್ಟು ನಿಲ್ಲಿಸಿ ಅಂತ ಪರಿಪರಿಯಾಗಿ ಬೇಡಿಕೊಂಡಿದ್ದರು. ಈಗ ಇದನ್ನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದುವರಿಸಿದ್ದಾರೆ. ಮುಂದೆ ಓದಿ....

ಅಭಿಮಾನಿಗಳಲ್ಲಿ ವಿನಂತಿ....

ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ನಟರನ್ನ ನಿಂದಿಸುವುದು ಮತ್ತು ಅವರ ವಿರುದ್ಧ ಕಾಮೆಂಟ್ ಮಾಡುವುದನ್ನ ಅಭಿಮಾನಿಗಳು ನಿಲ್ಲಿಸಬೇಕು ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ದರ್ಶನ್ ಮಾಡಿರುವ ಟ್ವೀಟ್

'ನನ್ನ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಬೇರೆ ಸಹನಟರನ್ನು ನಿಂದಿಸಿ ಮಾತನಾಡುವುದು - ಇವು ಯಾವುದು ಒಳಿತಲ್ಲ'' ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.

ನಿಜವಾದ ಅಭಿಮಾನಿಗಳು....

''ನನ್ನ ನಿಜವಾದ ಅಭಿಮಾನಿಗಳಾಗಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಯಾರಾದರೂ ಅಂತ ಕೆಲಸಗಳಲ್ಲಿ ಭಾಗವಹಿಸಿದರೆ ನನಗೆ ನೋವಾಗುವುದಂತೂ ನಿಜ' - ದರ್ಶನ್

ವ್ಯತ್ಯಾಸ ಏನು?

''ಬೇರೆಯವರು ಮಾಡ್ತಾರೆ ಅಂತ, ನಾವು ಅವರ ವಿರುದ್ಧ ಅದೇ ರೀತಿ ವರ್ತಿಸಿದರೆ ನಮಗೂ ಬೇರೆಯವರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ'' - ದರ್ಶನ್

ಪ್ರೀತಿಸಿ....ಪ್ರೋತ್ಸಾಹಿಸಿ....

''ಎಲ್ಲರನ್ನೂ ಪ್ರೀತಿಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ - ನಿಮ್ಮ ದಾಸ ದರ್ಶನ್'' ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.

ಯಶ್ ಹೇಳಿದ್ದೂ ಅದೇ...

''ಒಬ್ಬ ಹೀರೋ ಫ್ಯಾನ್ಸ್ ಇನ್ನೊಬ್ಬರಿಗೆ ಬೈಯೋದು. ಇನ್ನೊಬ್ಬ ಹೀರೋ ಫ್ಯಾನ್ಸ್ ಮತ್ತೊಬ್ಬರಿಗೆ ಬೈಯೋದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದನ್ನೆಲ್ಲಾ ಬಿಟ್ಟುಬಿಡಿ. ಎಲ್ಲರೂ ಒಂದೇ. ತೆರೆ ಮೇಲೆ ಡೈಲಾಗ್ ಹೊಡೀತೀವಿ ಅಷ್ಟೆ. ಅದನ್ನ ಪಾಸಿಟೀವ್ ಆಗಿ ತಗೋಬೇಕು. ನಿಮ್ಮ ನಿಮ್ಮಲ್ಲಿ ಜಗಳ ಆಡ್ಕೋಬೇಡಿ. ಇಂಡಸ್ಟ್ರಿಯಲ್ಲಿ ಎಲ್ಲಾ ಒಂದೇ'' ಅಂತ ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿದ್ದರು.[ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]

ನೀವು ದರ್ಶನ್ ರವರ ನಿಜವಾದ ಅಭಿಮಾನಿ ಆಗಿದ್ದರೆ...

ನೀವು ದರ್ಶನ್ ರವರ ನಿಜವಾದ ಅಭಿಮಾನಿ ಆಗಿದ್ದರೆ, ಬೇರೊಬ್ಬ ನಟರನ್ನ ನಿಂದಿಸಬೇಡಿ. ಎಲ್ಲರೂ ಒಂದೇ ಅಂತ ಭಾವಿಸಿ. ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಒಳ್ಳೆ ಚಿತ್ರಗಳನ್ನ ನೀಡುವಲ್ಲಿ ಸಹಕರಿಸಿ..

English summary
Kannada Actor Darshan has taken his Twitter and Facebook account to request his fans to stop abusing other Actors and their fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada