ಚಿತ್ರಗಳು; ಸತತ ಐದನೇ ಬಾರಿ 'ಅಯ್ಯಪ್ಪ ಸ್ವಾಮಿ' ಆದ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೊಮ್ಮೆ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಮಾಲೆ ಧರಿಸಿದ್ದಾರೆ. ಅವರ ಜೊತೆ ಸಹೋದರ ದಿನಕರ್ ತೂಗುದೀಪ, ನಿರ್ದೇಶಕ ಎಂ.ಡಿ.ಶ್ರೀಧರ್, ಶಿವಮಣಿ, ನಟ ಧರ್ಮ ಕೀರ್ತಿರಾಜ್ ಕೂಡ ಮಾಲೆ ಧರಿಸಿ, ಶಬರಿಮಲೈ ಯಾತ್ರೆ ಕೈಗೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ದರ್ಶನ್ ಮಾಲೆ ಧರಿಸುತ್ತಿದ್ದಾರೆ. ಅವರಿಗೆ ತಂದೆ ತೂಗುದೀಪ ಶ್ರೀನಿವಾಸ್ ಪ್ರೇರಣೆ.[ಅಣ್ಣಾವ್ರ ಮಕ್ಕಳ ಶಬರಿಮಲೈ ಯಾತ್ರೆ ಆರಂಭ]

ಕನ್ನಡ ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಗೆ ಅಯ್ಯಪ್ಪ ಸ್ವಾಮಿ ಮೇಲೆ ಅಪಾರ ಭಕ್ತಿ. ಅಪ್ಪನಂತೆ ಮಗ ದರ್ಶನ್ ಕೂಡ ಭಯ-ಭಕ್ತಿಯಿಂದ ವ್ರತ ಆಚರಿಸಿ ಸತತ ಐದನೇ ಬಾರಿ ಶಬರಿಗಿರಿಗೆ ತೆರಳಿದ್ದಾರೆ.
ನಿನ್ನೆ ಬೆಳಗ್ಗೆ ಮೊದಲು ರಾಜರಾಜೇಶ್ವರಿ ನಗರದಲ್ಲಿ ಇರುವ ಅವರ ನಿವಾಸದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿ, ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಬಂದ ದರ್ಶನ್ ಇರುಮುಡಿ ಕಟ್ಟಿದರು.[ಶಿವಣ್ಣ ಮತ್ತೊಮ್ಮೆ ಸ್ವಾಮಿಯೇ ಶರಣಂ ಅಯ್ಯಪ್ಪ]
ಅಲ್ಲಿಂದ ದರ್ಶನ್ ಜೊತೆ 40 ಜನರ ತಂಡ ಶಬರಿಮಲೈ ಯಾತ್ರೆ ಆರಂಭಿಸಿತು. ಇಂದು ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಬಳಿಕ 'ದಾಸ' ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. (ಚಿತ್ರಕೃಪೆ - ಡಿ ಕಂಪನಿ)
ಚಿತ್ರಗಳು; ಸತತ ಐದನೇ ಬಾರಿ 'ಅಯ್ಯಪ್ಪ ಸ್ವಾಮಿ' ಆದ ದರ್ಶನ್


Click it and Unblock the Notifications











