ಪ್ರತಿಭೆಗೆ ತಕ್ಕ ಪ್ರಶಸ್ತಿಗಳು ಕೊಡ್ತಿಲ್ಲ ಎಂದು ದರ್ಶನ್ ಹೇಳಿದ್ದೇಕೆ?
Recommended Video
ಇತ್ತೀಚಿನ ದಿನಗಳಲ್ಲಿ ನೀಡಲಾಗುತ್ತಿರುವ ಕೆಲವು ಪ್ರಶಸ್ತಿಗೆಳ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದಾರೆ. ದರ್ಶನ್ ಪ್ರಶಸ್ತಿಗಳಿಂದ ತುಂಬಾನೆ ದೂರ. ಯಾವತ್ತು ಪ್ರಶಸ್ತಿಗಳ ಹಿಂದೆ ಹೋದವರಲ್ಲ. ಅಭಿಮಾನಿಗಳು ಸಿನಿಮಾ ನೋಡಿ ಹರಿಸುವುದೇ ಅವರಿಗೆ ಸಿಗುವ ದೊಡ್ಡ ಪ್ರಶಸ್ತಿ. ಹಾಗಿದ್ದ ಮೇಲೆ ದರ್ಶನ್ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರಾ ಎಂದು ಅಚ್ಚಿರಿಯಾಗುತ್ತಿದಿಯಾ.
ಇತ್ತೀಚಿಗೆ ನಡೆದ 'ಕುರುಕ್ಷೇತ್ರ' ಚಿತ್ರದ ಪ್ರೆಸ್ ಮೀಟ್ ನಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋದನನಾಗಿ ಬಣ್ಣ ಹಚ್ಚಿರುವ ದರ್ಶನ್ ಅವರಿಗೆ ಪ್ರಶಸ್ತಿಯ ನಿರೀಕ್ಷೆ ಇದೆಯಾ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ದರ್ಶನ್ ಯಾವುದೆ ನಿರೀಕ್ಷೆ ಇಲ್ಲ ಎಂದಿದ್ದಾರೆ. ಹಾಗಾದ್ರೆ ಬಂದ್ರೆ ಬಿಡಲ್ವಾ ಅಂತ ಕೇಳಿದ್ರೆ" ಆ ಪ್ರಶಸ್ತಿ ತುಂಬ ಮೌಲ್ಯಯುತವಾಗಿದ್ದರೆ ಮಾತ್ರ ಹೋಗುತ್ತೇನೆ. ಇಲ್ಲ ಅಂದ್ರೆ ಹೋಗಲ್ಲ. ಆದ್ರೆ ಇಂದಿನ ಕೆಲವು ಪ್ರಶಸ್ತಿಗಳು ಪ್ರತಿಭೆಗೆ ಸಿಗುವುದಿಲ್ಲ. ಅದನ್ನು ಕೊಂಡುಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.

ಪ್ರಶಸ್ತಿ ಬಗ್ಗೆ ದರ್ಶನ್ ಈ ಹಿಂದೆ ಇಂದನು ಒಂದು ಮಾತನ್ನು ಹೇಳುತ್ತಿದ್ದಾರೆ. ಉತ್ತಮ ಖಳ ನಟ ಪ್ರಶಸ್ತಿ ಕೊಡುವುದಿಲ್ಲ ಎನ್ನುವ ಬೇಸರ ಅವರಲ್ಲಿದೆ. ಅವರ ತಂದೆ ತೂಗುದೀಪ ಶ್ರೀನಿವಾಸ್ ದೊಡ್ಡ ಖಳ ನಟರಾಗಿದ್ದವರು. ದರ್ಶನ್ ಖಳ ನಟನಾಗಿ ಕಾಣಿಸಿಕೊಂಡು ಪ್ರಶಸ್ತಿ ಪಡೆದು ಅವರ ತಂದೆ ಮುಂದೆ ಇಟ್ಟು ಸೆಲ್ಯೂಟ್ ಹೊಡಿಯಬೇಕೆಂಬುದು ಅವರ ಕನಸಿದೆ. ಕುರುಕ್ಷೇತ್ರದ ದುರ್ಯೋದನನ ಪಾತ್ರಕ್ಕೆ ದರ್ಶನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.


Click it and Unblock the Notifications











