»   » ಅಭಿಮಾನಿಗಳಲ್ಲಿ ಶುರುವಾಯ್ತು ಯಜಮಾನ ಸಿನಿಮಾ ಕ್ರೇಜ್

ಅಭಿಮಾನಿಗಳಲ್ಲಿ ಶುರುವಾಯ್ತು ಯಜಮಾನ ಸಿನಿಮಾ ಕ್ರೇಜ್

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಮಾಸ್ ಮತ್ತು ಕ್ಲಾಸ್ ಎರಡು ರೀತಿಯ ಅಭಿಮಾನಿಗಳನ್ನ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಎಲ್ಲಾ ವರ್ಗದ ಜನರನ್ನ ಮುಟ್ಟುವಂತಹ ಸಿನಿಮಾಗಳಲ್ಲಿ ದರ್ಶನ್ ಅಭಿನಯಿಸುತ್ತಾ ಬಂದಿದ್ದಾರೆ.

ಈ ಹಿಂದೆ ದರ್ಶನ್ ಅವರಿಗಿದ್ದ ಅಭಿಮಾನಿಗಳ ಸಂಖ್ಯೆಗೂ ಈಗ ಇರುವ ಸಂಖ್ಯೆಗೂ ಬಹಳಷ್ಟು ವ್ಯತ್ಯಾಸಗಳಿಗೆ. ದಿನದಿಂದ ದಿನಕ್ಕೆ ಫಾನ್ಸ್ ಗಳ ಸಂಖ್ಯೆ ದುಪ್ಪಟ್ಟಾಗಿದೆ. ಸಿನಿಮಾ ಇರಲಿ ಹುಟ್ಟುಹಬ್ಬವಿರಲಿ ದರ್ಶನ್ ಬಗೆಗಿನ ಕ್ರೇಜ್ ದುಪ್ಪಟ್ಟಾಗಿ ಬದಲಾಗುತ್ತಿದೆ.

ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್

ಸದ್ಯ ದರ್ಶನ್ ಅಭಿಮಾನಿಗಳು ಯಜಮಾನನ ಜಪಿಸಲು ಶುರುವಿಟ್ಟುಕೊಂಡಿದ್ದಾರೆ. ಇನ್ನು ಚಿತ್ರೀಕರಣ ಶುರುವಾಗಿ ಕೆಲವೇ ದಿನಗಳು ಕಳೆದಿವೆ ಈಗಾಗಲೇ ಅಭಿಮಾನಿಗಳು ಚಿತ್ರದ ಬಗ್ಗೆ ಕ್ರೇಜ್ ಹುಟ್ಟಿಸಿಕೊಂಡಿದ್ದಾರೆ. ಹಾಗಾದರೆ ಹೇಗಿದೆ ಯಜಮಾನ ಚಿತ್ರದ ಕೇಜ್ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

ಅಭಿಮಾನಿಗಳಿಗೆ ಯಜಮಾನ ಕ್ರೇಜ್

ದರ್ಶನ್ ಅಭಿನಯದ ಮುಂದಿನ ಚಿತ್ರ ಯಜಮಾನದ ಬಗ್ಗೆ ಈಗಾಗಲೇ ಕ್ರೇಜ್ ಶುರುವಾಗಿದೆ. ಚಿತ್ರದ ಹೆಸರನ್ನ ಹಚ್ಚೆಯ ರೂಪದಲ್ಲಿ ಹಾಕಿಸಿಕೊಳ್ಳಲು ಅಭಿಮಾನಿಗಳು ಶುರು ಮಾಡಿದ್ದಾರೆ.

ಸೈಕಲ್ ಬೈಕ್ ಮೇಲೆ ಯಜಮಾನ

ದರ್ಶನ್ ಅಭಿಮಾನಿಗಳು ಯಜಮಾನ ಸಿನಿಮಾ ಟೀಸರ್ ಬಿಡುಗಡೆ ಆದ ದಿನದಿಂದಲೇ ಚಿತ್ರದ ಹೆಸರುಗಳನ್ನ ಬೈಕ್, ಸೈಕಲ್ ಗಳ ಮೇಲೆ ಹಾಕಿಸಿಕೊಳ್ಳು ಶುರು ಮಾಡಿದ್ದಾರೆ.

ದರ್ಶನ್ ಯಜಮಾನ ಚಿತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರು

ಕಲಾವಿದರ ಕೈ ನಲ್ಲಿ ಯಜಮಾನ

ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣ ಶುರುವಾಗಿ ಬಿಡುಗಡೆಯ ಸಂದರ್ಭದಲ್ಲಿ ಈ ಬಗೆಯ ಕ್ರೇಜ್ ಹುಟ್ಟುಕೊಳ್ಳುವು ಸರ್ವೇ ಸಾಮಾನ್ಯ. ಆದರೆ ದರ್ಶನ್ ಚಿತ್ರಕ್ಕೆ ಚಿತ್ರೀಕರಣದ ಸಮಯದಿಂದಲೇ ಕ್ರೇಜ್ ಕೂಡ ಆರಂಭವಾಗಿದೆ. ಅನೇಕ ಕಲಾವಿದರ ಕೈನಲ್ಲಿ ಯಜಮಾನನ ಚಿತ್ತಾರ ಮೂಡಿ ಬರುತ್ತಿದೆ.

ಯಜಮಾನ ಸಿನಿಮಾ ಬಗ್ಗೆ

ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಷ್ಣುವರ್ಧನ ಸಿನಿಮಾವನ್ನ ಡೈರೆಕ್ಟ್ ಮಾಡಿದ್ದ ಪಿ ಕುಮಾರ್ ಯಜಮಾನ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಶಿವಣ್ಣ ಚಿತ್ರಕ್ಕೆ ಬಾಲಿವುಡ್ ನಾಯಕಿ: ದರ್ಶನ್ ಜೊತೆಯೂ ನಟಿಸುವ ಆಸೆಯಂತೆ.!

English summary
Kannada actor Darshan starrer Yajamana movie Craze is high, Fans are putting Yajamana movie name on bikes and cycles. Darshan and Rashmika are acting in Yajamana movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada