ದೂರದ ಕೆನಡದಲ್ಲೂ ಜೋರಾಗಿದೆ 'ಕುರುಕ್ಷೇತ್ರ' ಆರ್ಭಟ
Recommended Video
ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದೆ ಕುರುಕ್ಷೇತ್ರ. ಕುರುಕ್ಷೇತ್ರ ರಿಲೀಸ್ ಆಗಿ ಮೂರು ದಿನಗಳಾಗಿದ್ದು ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಅದ್ದೂರಿ ಪೌರಾಣಿಕ ಸಿನಿಮಾ ಚಿತ್ರಪ್ರಿಯರ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಮಹಾಭಾರತದ ಕಥೆ, 3 ಎಫೆಕ್ಟ್, ಬಹುತಾರಾಗಣದ ಕುರುಕ್ಷೇತ್ರ ನೋಡಿ ಚಿತ್ರಪ್ರಿಯರು ಫಿದಾ ಆಗಿದ್ದಾರೆ.
ಕುರುಕ್ಷೇತ್ರ ಕೇವಲ ಕನ್ನಡ ಮತ್ತು ತೆಲುಗು ನೆಲದಲ್ಲಿ ಮಾತ್ರ ಅಬ್ಬರಿಸುತ್ತಿಲ್ಲ. ವಿದೇಶದ ನೆಲದಲ್ಲಿ ಕುರುಕ್ಷೇತ್ರದ ಹವಾ ನೋಡಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಾ. ಕೆನಡದಲ್ಲಿ ಕುರುಕ್ಷೇತ್ರ ಸಿನಿಮಾ ವೀಕ್ಷಿಸಿದ ಅಭಿಮಾನಿಗಳ ಖುಷಿಗೆ ಪಾರವೆ ಇರಲಿಲ್ಲ.
ದುರ್ಯೋಧನ ದರ್ಶನ್ ಫೊಟೋಗೆ ಫ್ರೇಮ್ ಹಾಕಿ ಹೂವಿನ ಹಾರವನ್ನು ಹಾಕಿ ಡಿ ಬಾಸ್.. ಡಿ ಬಾಸ್..ಎಂದು ಜೈಕಾರ ಹಾಕುತ್ತಿದ್ದಾರೆ. ವಿದೇಶದಲ್ಲೂ ಕುರುಕ್ಷೇತ್ರ ಹವಾ ನೋಡ್ತಿದ್ರೆ ಕನ್ನಡಿಗರಿಗೆ ಹೆಮ್ಮೆ ಎನಿಸುತ್ತಿದೆ.

ಇನ್ನು ಕುರುಕ್ಷೇತ್ರ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೆ ತಮಿಳು ಮತ್ತು ಮಲಯಾಳಂ ಭಾಷೆಯ ಟ್ರೈಲರ್ ರಿಲೀಸ್ ಆಗಿದೆ. ಸಧ್ಯದಲ್ಲೇ ಬೇರೆ ಬೇರೆ ಭಾಷೆಯಲ್ಲು ಕುರುಕ್ಷೇತ್ರ ಅಬ್ಬರಿಸಲಿದೆ.


Click it and Unblock the Notifications











