ದುರ್ಯೋಧನನ ಆಗಮನಕ್ಕೆ ದಿನಾಂಕ ನಿಗದಿ
Recommended Video
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ 'ಕುರುಕ್ಷೇತ್ರ' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಈ ಮೊದಲು ಚಿತ್ರ ಆಗಸ್ಟ್ 9ಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅನೌನ್ಸ್ ಮಾಡಿದ್ರು. ಆದ್ರೆ ದಿಡೀರನೆ ಚಿತ್ರದ ರಿಲೀಸ್ ಡೇಟ್ ಬದಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಸಿನಿಮಾ ಈ ಮೊದಲು ಅನೌನ್ಸ್ ಮಾಡಿದಕ್ಕಿಂತ ಮುಂಚೆಯೆ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದ್ರೆ ಯಾವ ದಿನ ಎನ್ನುವ ಗೊಂದಲ ಅಭಿಮಾನಿಗಳಲ್ಲಿತ್ತು. ಆದ್ರೀಗ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.
ಹೌದು, ಹಸ್ತಿನಾಪುರದ ಅನಾವರಣ ಮುಂದಿನ ತಿಂಗಳು ಮೊದಲ ವಾರದಲ್ಲೆ ಆಗಲಿದೆ. ಬಹುದೊಡ್ಡ ತಾರಾಬಳಗವಿರುವ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಆಗಸ್ಟ್ 2ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

ಆಗಸ್ಟ್ 2ಕ್ಕೆ ಕುರುಕ್ಷೇತ್ರ ರಿಲೀಸ್
ಸುಮಾರು ಎರಡು ವರ್ಷಗಳಿಂದ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯುತ್ತಿದ್ದ ಆ ಕ್ಷಣ ಇನ್ನೇನು ಕೆಲವೆ ದಿನಗಳಲ್ಲಿ ಬರಲಿದೆ. ಯಾಕಂದ್ರೆ ಆಗಸ್ಟ್ 2ಕ್ಕೆ ಬಹುನಿರೀಕ್ಷೆಯ 'ಕುರುಕ್ಷೇತ್ರ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಕೇವಲ ಕರ್ನಾಕದಲ್ಲಿ ಮಾತ್ರವಲ್ಲದೆ ದೇಶ-ವಿದೇಶದಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಮುನಿರತ್ನ ನಿರ್ಮಾಣದ ನಾಗಣ್ಣ ನಿರ್ದೇಶನದ, ಬಹುತಾರಗಣವಿರುವ 'ಕುರುಕ್ಷೇತ್ರ' ನೋಡಲು ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇಂದು ಚಿತ್ರದ ಎರಡನೇ ಟ್ರೈಲರ್ ರಿಲೀಸ್
ಕುರುಕ್ಷೇತ್ರ ಚಿತ್ರದ ಮೊದಲ ಟ್ರೈಲರ್ ಈಗಾಗಲೆ ರಿಲೀಸ್ ಆಗಿದೆ. ಎರಡನೇ ಟ್ರೈಲರ್ ರಿಲೀಸ್ ಗೆ ಸಿದ್ಧವಾಗಿದೆ. ಮೊದಲ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದಕ್ಕಿಂತ ತೆಗಳಿಕೆಯೆ ಜಾಸ್ತಿ ಸಿಕ್ಕಿತ್ತು. ಅಲ್ಲದೆ ಕನ್ನಡದ ಟ್ರೈಲರ್ ಅನ್ನು ಮಾತ್ರ ರಿಲೀಸ್ ಮಾಡಿದ್ದ ಚಿತ್ರತಂಡವೀಗ, ಐದು ಭಾಷೆಯ ಟ್ರೈಲರ್ ಅನ್ನು ಒಟ್ಟಿಗೆ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಈಗಾಗಲೆ ಚಿತ್ರದ ಹಾಡುಗಳು ಸಹ ರಿಲೀಸ್ ಆಗಿವೆ.

ಜುಲೈ 13ಕ್ಕೆ 'ಚಾರುತಂತಿ' ಹಾಡು ರಿಲೀಸ್
ಜುಲೈ 13ಕ್ಕೆ ಅಂದ್ರೆ ನಾಳೆ ಕುರುಕ್ಷೇತ್ರ ಚಿತ್ರದ ಎರಡನೇ ಹಾಡು ರಿಲೀಸ್ ಆಗುತ್ತಿದೆ. ಅಂದ್ಹಾಗೆ, ಇದು ದುರ್ಯೋಧನ ಮತ್ತು ಭಾನುಮತಿ ನಡುವಿನ ಡುಯೆಟ್ ಸಾಂಗ್ ಇದಾಗಿದೆ. ಪೌರಾಣಿಕ ಚಿತ್ರದಲ್ಲಿ ಈ ರೀತಿಯ ಹಾಡು ಹೇಗಿರಲಿದೆ ಎಂಬ ಕಾತುರ ಅಭಿಮಾನಿಗಳನ್ನು ಕಾಡುತ್ತಿದೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಲಹರಿ ಸಂಸ್ಥೆ ಕುರುಕ್ಷೇತ್ರ ಚಿತ್ರದ ಆಡಿಯೋ ಹಕ್ಕು ಖರೀದಿಸಿದ್ದು, ಟಿ-ಸಿರೀಸ್ ಯೂಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.

ಐದು ಬಾಷೆಯಲ್ಲಿ ಕುರುಕ್ಷೇತ್ರ ಬಿಡುಗಡೆ
ಕುರುಕ್ಷೇತ್ರ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ತೆಲಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಇದೆ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ಬೇರೆ ಬೇರೆ ಭಾಷೆಯಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೆ ಪೋಸ್ಟರ್ಸ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಕುರುಕ್ಷೇತ್ರ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ಶಶಿ ಕುಮಾರ್, ನಿಖಿಲ್ ಕುಮಾರ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಚಿತ್ರದಲ್ಲಿದೆ.


Click it and Unblock the Notifications











